ಮಾತಿನ ಮರುಲೇಪನ ಮುಗಿಸಿದ ಪೃಥ್ವಿ
ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅಭಿನಯದ ಅದ್ದೂರಿ 'ಪೃಥ್ವಿ' ಚಿತ್ರದ ಮಾತಿನ ಮರುಲೇಪನ ಕಾರ್ಯವು ಇತ್ತೀಚೆಗೆ ನಗರದ ಆಕಾಶ್ ಸ್ಟುಡಿಯೋವಿನಲ್ಲಿ ಮುಕ್ತಾಯಗೊಂಡಿತು.ರಾಂ ಬಾಬು ಪ್ರೊಡಕ್ಷನ್ಸ್ ಲಾಂಛನದಡಿಯಲ್ಲಿ ಸೂರಪ್ಪ ಬಾಬು, ಎನ್.ಎಸ್. ರಾಜ್‌ಕುಮಾರ್ ಈ ಚಿತ್ರವನ್ನು ನಿರ್ಮಿಸುತ್ತಿದ್ದಾರೆ.
ಪೃಥ್ವಿ ಚಿತ್ರವು ವರನಟ ಡಾ.ರಾಜ್ ಹುಟ್ಟುಹಬ್ಬದ ಕೊಡುಗೆಯಾಗಿ ಏಪ್ರಿಲ್24ರಂದು ತೆರೆಕಾಣಲಿದೆ ಎಂದು ನಿರ್ಮಾಪಕರು ತಿಳಿಸಿದ್ದಾರೆ.ಚಿತ್ರಕ್ಕೆ ಬಿ.ಎ. ಮಧು ಸಂಭಾಷಣೆ,ಮಣಿಕಾಂತ್ ಕದ್ರಿ ಸಂಗೀತ, ಕವಿರಾಜ್, ಕಲ್ಯಾಣ್ ಸಾಹಿತ್ಯ, ಸತ್ಯ ಹೆಗಡೆ ಛಾಯಾಗ್ರಹಣ, ಚಿನ್ನಿಪ್ರಕಾಶ್ ನೃತ್ಯ ರಾಜ್ ಶೇಖರ್ (ನಾಡೋಡಿಗಳ್, ಪೊರತ್ತಿವೀರನ್) ಸಾಹಸವಿದ್ದು, ಚಿತ್ರವನ್ನು ಯುವನಿರ್ದೇಶಕ ಜೇಕಬ್ ವರ್ಗೀಸ್ ನಿರ್ದೇಶಿಸುತ್ತಿದ್ದಾರೆ.
ತಾರಾಗಣದಲ್ಲಿ ಪವರ್ ಸ್ಟಾರ್ ಪುನೀತ್‌ರಾಜ್‌ಕುಮಾರ್, ಪಾರ್ವತಿ, ಶ್ರೀನಿವಾಸಮೂರ್ತಿ, ಸತ್ಯಪ್ರಿಯ, ರಮೇಶ್‌ಭಟ್, ಪದ್ಮಜಾ ರಾವ್, ಅವಿನಾಶ್, ಶಿವಾಜಿರಾವ್‌ಜಾಧವ್, ಜಾನ್ ವಿಜಯ್, ಜಾನ್ ಅನೀಸ್, ಕುಕ್ಕಿನ್ (ಬಾಲಿವುಡ್ ಖ್ಯಾತಿ) ಮುಂತಾದವರಿದ್ದಾರೆ.


Click it and Unblock the Notifications











