»   » ಲಕ್ಕಿ ನಿರ್ಮಾಪಕಿ ರಾಧಿಕಾ ಮುಖದಲ್ಲಿ ಆತಂಕ

ಲಕ್ಕಿ ನಿರ್ಮಾಪಕಿ ರಾಧಿಕಾ ಮುಖದಲ್ಲಿ ಆತಂಕ

Posted By: * ಶ್ರೀರಾಮ್ ಭಟ್
Subscribe to Filmibeat Kannada
<ul id="pagination-digg"><li class="next"><a href="/news/24-kannada-movie-lucky-radhika-yash-ramya-aid0172.html">Next »</a></li></ul>

ಇಂದು ರಾಧಿಕಾ ನಿರ್ಮಾಣದ 'ಲಕ್ಕಿ' ಚಿತ್ರ 80 ಚಿತ್ರಮಂದಿರಗಳಲ್ಲಿ ರಾಜ್ಯಾದ್ಯಂತ ಬಿಡುಗಡೆಯಾಗಿದೆ. ಈ ಚಿತ್ರಕ್ಕೆ ಐದು ಕೋಟಿ ರು. ಹಣ ಹಾಕಿರುವ ರಾಧಿಕಾ, ಸಹಜವಾಗಿ ಆತಂಕದಲ್ಲಿದ್ದಾರೆ. ಹಾಗಾಗಿ ಮೊದಲ ಶೋಗೆ ಪ್ರೇಕ್ಷಕರ ಪ್ರತಿಕ್ರಿಯೆ ತಿಳಿದುಕೊಳ್ಳಲು ಸ್ವತಃ ರಾಧಿಕಾ ಬೆಂಗಳೂರಿನ ಗಾಂಧಿನಗರದ ಸಾಗರ್ ಚಿತ್ರಮಂದಿರಕ್ಕೆ ನಾಯಕ ಯಶ್ ಜೊತೆ ಬಂದಿದ್ದರು.

ಅಲ್ಲಿ ಮಾಧ್ಯಮದ ಕ್ಯಾಮರಾ ಕಣ್ಣಿಗೆ ಮುಖ ಮಾಡಿದ್ದಲ್ಲದೇ ಪ್ರೇಕ್ಷಕರ ಮಾತಿಗೂ ದನಿಯಾಗಿದ್ದಾರೆ ನಿರ್ಮಾಪಕಿ ರಾಧಿಕಾ. ನಿರ್ಮಾಪಕಿಯಾಗೆ ಅವರಿಗೆ ಇದು ಮೊದಲ ಚಿತ್ರ. ಈ ಮೊದಲು, ಸ್ವತಃ ಅವರೇ ನಟ ಆದಿತ್ಯನ ಜೊತೆ ನಟಿಸಿರುವ 'ಈಶ್ವರ' ಚಿತ್ರವನ್ನು ಅವರು ನಿರ್ಮಾಪಕರಿಂದ ಕೊಂಡುಕೊಂಡು ವಿತರಕಿ ಎನಿಸಿದ್ದಾರೆ. ಆದರೆ ಅದನ್ನು ಇನ್ನೂ ಬಿಡುಗಡೆ ಮಾಡಿಲ್ಲ. ಹೀಗಾಗಿ ಸ್ವತಃ ರಾಧಿಕಾ ನಿರ್ಮಾಣದ ಪ್ರಥಮ ಚಿತ್ರ ಲಕ್ಕಿ.

ನಿರ್ದೇಶಕ ಡಾ ಸೂರಿ ಕೆಲಸ, ರಮ್ಯಾ ಮತ್ತು ಯಶ್ ಜನಪ್ರಿಯತೆ ನಂಬಿಕೊಂಡು ದುಡ್ಡು ಸುರಿದಿದ್ದಾರೆ, ಸಹಜವಾಗಿ ಯಶಸ್ಸಿನ ನಿರೀಕ್ಷೆಯಲ್ಲಿದ್ದಾರೆ. ನಿರ್ಮಾಪಕಿಯಾಗಿ ಚಿತ್ರದ ಪ್ರಮೋಶನ್ ಗೆ ಸಹಜವೆನ್ನುವಂತೆ ಬಂದಿದ್ದಾರೆ. ಆದರೆ ರಾಧಿಕಾ ಬಂದ ತಕ್ಷಣ ಸಾಗರ ಚಿತ್ರಮಂದಿರದಲ್ಲಿದ್ದ ಪ್ರೇಕ್ಷಕರೆಲ್ಲಾ ಕರೆಂಟ್ ಹೊಡೆದವರಂತಾಗಿದ್ದು ಯಾಕೆ ಎಂಬುದು ಆಶ್ಚರ್ಯ ತರಿಸುವಂತಿತ್ತು. ಮುಂದಿನ ಪುಟ ನೋಡಿ....

<ul id="pagination-digg"><li class="next"><a href="/news/24-kannada-movie-lucky-radhika-yash-ramya-aid0172.html">Next »</a></li></ul>

English summary
Kannada movie Lucky released today, Feb 24, 2012 on all over the Karnataka at 80 theaters. Radhika came to Sagar Theater, Bangalore. Audience became very crazy to see Radhika. &#13; &#13;

Kannada Photos

Go to : More Photos

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X