ಲೂಸ್ ಮಾದ, ರಾಧಿಕಾ ಪಂಡಿತ್‌ಗೆ ತೀವ್ರ ಮುಖಭಂಗ
ರಾಜ್ಯ ಚಲನಚಿತ್ರ ಪ್ರಶಸ್ತಿ ಪ್ರದಾನ ಸಮಾರಂಭ ಅವ್ಯವಸ್ಥೆಗಳ ಆಗರವಾಗಿತ್ತು. ಅಲ್ಲಿ ಎಲ್ಲವೂ ಸರಿಯಿರಲಿಲ್ಲ ಎಂಬ ಬಗ್ಗೆ ನಟ ಯೋಗೇಶ್ ಅಲಿಯಾಸ್ ಲೂಸ್ ಮಾದ ಹಾಗೂ ನಟಿ ರಾಧಿಕಾ ಪಂಡಿತ್ ತೀವ್ರ ಬೇಸರ ವ್ಯಕ್ತಪಡಿಸಿದ್ದಾರೆ. ಶನಿವಾರ ರಾತ್ರಿ ನಡೆದ ಈ ಕಾರ್ಯಕ್ರಮಕ್ಕೆ ಸ್ವತಃ ಮುಖ್ಯಮಂತ್ರಿಗಳು ತರಾತುರಿಯಲ್ಲಿ ಎದ್ದು ಹೋಗಿದ್ದು ಇವರಿಗೆ ತೀವ್ರ ಮುಖಭಂಗವಾಗಿದೆಯಂತೆ.
ಇವರಿಬ್ಬರಿಗೂ ರಾಜ್ಯ ಮಟ್ಟದಲ್ಲಿ ದೊರೆತ ಚೊಚ್ಚಲ ಪ್ರಶಸ್ತಿ ಇದಾಗಿತ್ತು. ಅತ್ಯುತ್ತಮ ನಟ ಮತ್ತು ನಟಿ ಪ್ರಶಸ್ತಿ ಪಾತ್ರರಾಗಿದ್ದ ಇವರು ಅಂದು ರಾತ್ರಿ 10 ಗಂಟೆ ತನಕ ಕಾದರು ಪ್ರಶಸ್ತಿ ಇವರ ಕೈ ಸೇರಲಿಲ್ಲ. ಪ್ರಶಸ್ತಿ ಪ್ರದಾನ ಮಾಡುವ ಮಂತ್ರಿ ಮಹೋದಯರು ನಾಪತ್ತೆಯಾಗಿದದ್ದೇ ಇದಕ್ಕೆ ಕಾರಣ. ಪ್ರಶಸ್ತಿ ಪೂರ್ಣ ಪಟ್ಟಿ.
ತಮ್ಮ ಚೊಚ್ಚಲ ಪ್ರಶಸ್ತಿಯನ್ನು ಮುಖ್ಯಮಂತ್ರಿಗಳಿಂದ ಸ್ವೀಕರಿಸಬೇಕು ಎಂಬ ಆಸೆ ಇವರಿಗಿತ್ತು. ಆದರೆ ತಮ್ಮ ಕುರ್ಚಿಗೆ ಸಂಚಕಾರ ಬಂದಿದ್ದ ಕಾರಣ ಸಿಎಂಕಾರ್ಯಕ್ರಮಕ್ಕೆ ಬಂದಷ್ಟೇ ವೇಗವಾಗಿ ಅಲ್ಲಿಂದ ಜಾಗ ಖಾಲಿ ಮಾಡಿದ್ದಾರೆ. ರಾಜಕೀಯ, ಮನರಂಜನೆ ಒಂದೇ ವೇದಿಕೆ ಹಂಚಿಕೊಂಡರೆ ಇನ್ನೇನಾಗುತ್ತದೆ ಹೇಳಿ. (ದಟ್ಸ್‌ಕನ್ನಡ ಸಿನಿವಾರ್ತೆ)


Click it and Unblock the Notifications











