ಸೂಪರ್ ಸ್ಟಾರ್ ರಜನಿಕಾಂತ್ ಹೊಸ ಚಿತ್ರ ಪ್ರಕಟ

By Rajendra

ಸೂಪರ್ ಸ್ಟಾರ್ ರಜನಿಕಾಂತ್ ಅಭಿಮಾನಿಗಳಿಗೆ ಸಂತಸ ಸುದ್ದಿಯಿದು. ರಜನಿಕಾಂತ್ ಮತ್ತೊಂದು ಚಿತ್ರವನ್ನು ಪ್ರಕಟಿಸಿದ್ದಾರೆ. ಚಿತ್ರಕ್ಕೆ 'ಕೋಚಡೈಯಾನ್' ಎಂದು ಹೆಸರಿಡಲಾಗಿದೆ. ಈ ಚಿತ್ರಕ್ಕೆ ಆಕ್ಷನ್ ಕಟ್ ಹೇಳುತ್ತಿರುವವರು ರಜನಿ ಪುತ್ರಿ ಸೌಂದರ್ಯ ರಜನಿಕಾಂತ್. ಇದು ಸೌಂದರ್ಯ ಅವರ ಚೊಚ್ಚಲ ನಿರ್ದೇಶನದ ಚಿತ್ರವಾಗಿ ಮೂಡಿಬರಲಿದೆ.

ತಾವು ಕೈಗೆತ್ತಿಕೊಳ್ಳುತ್ತಿರುವ ಹೊಸ ಚಿತ್ರದ ವಿವರಗಳನ್ನು ಸೌಂದರ್ಯ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಪ್ರಕಟಿಸಿದ್ದಾರೆ. "ಅಪ್ಪನ ಮುಂದಿನ ಚಿತ್ರ 'ಕೋಚಡೈಯಾನ್'. ಅಪ್ಪನ ಚಿತ್ರಕ್ಕೆ ಆಕ್ಷನ್ ಕಟ್ ಹೇಳುತ್ತಿರುವ ಬಗ್ಗೆ ಥ್ರಿಲ್ ಆಗುತ್ತಿದೆ" ಎಂದು ಟ್ವೀಟಿಸಿದ್ದಾರೆ.

ಮೂಲಗಳ ಪ್ರಕಾರ ಈ ಚಿತ್ರ ಕೆ ಎಸ್ ರವಿಕುಮಾರ್ ಅವರ ಮಾರ್ಗದರ್ಶನದಲ್ಲಿ ಮೂಡಿಬರಲಿದೆ. ಇದೊಂದು ಹೈಟೆಕ್ 3D ಚಿತ್ರವಾಗಲಿದೆ. ಎರೋಸ್ ಇಂಟರ್‌ನ್ಯಾಶನಲ್ ಮೀಡಿಯಾ ಒನ್ ಸಂಸ್ಥೆ ನಿರ್ಮಿಸಲಿದೆ. ಈ ಚಿತ್ರ ಆಗಸ್ಟ್ 2012ಕ್ಕೆ ಬಿಡುಗಡೆಯಾಗುವ ಸಾಧ್ಯತೆಗಳಿವೆ. 'ರಾಣ' ಚಿತ್ರಕ್ಕಿಂತಲೂ ಮುನ್ನ 'ಕೋಚಡೈಯಾನ್' ಚಿತ್ರ ಸೆಟ್ಟೇರುತ್ತಿರುವುದು ವಿಶೇಷ. (ಏಜೆನ್ಸೀಸ್)

More from Filmibeat

English summary
For all those Rajinikanth's fans, here comes a surprising new. It is not Rana or Sultan but Kochadaiyaan is the Tamil superstar's next movie, which will also mark the directorial debut of his daughter Soundarya Rajinikanth.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X