For Quick Alerts
  ALLOW NOTIFICATIONS  
  For Daily Alerts

  ಚತುರ್ಭಾಷಾ ತಾರೆಯಾಗಿ ಬೆಡಗಿ ರಮ್ಯಾ ಬಾರ್ನ

  By Rajendra
  |

  ಸಾಮಾನ್ಯವಾಗಿ ಚತುರ್ಭಾಷಾ ತಾರೆ ಎಂದರೆ ಥಟ್ಟನೆ ನೆನಪಾಗುವುದು ಅಭಿನೇತ್ರಿ ಬಿ ಸರೋಜಾದೇವಿ. ಚಳಿ ತಾಳೆನು ಈ ಚಳಿಯಾ ಆಹಾ ಎಂದು ಪಡ್ಡೆಗಳ ಮೈ ಬೆಚ್ಚಗೆ ಮಾಡಿದ ಅಂಬಿಕಾ ಕೂಡ ಚತುರ್ಭಾಷಾ ತಾರೆ. ಬೆಂಗಳೂರು ಬೆಡಗಿ ಸಿಂಧು ಮೆನನ್ ಕೂಡ ನಾಲ್ಕು ಭಾಷೆಗಳಲ್ಲಿ ಮಿಂಚಿದವರು.

  ಉಡುಪಿ ಜಿಲ್ಲೆಯ ಮಣ್ಣಿನ ಮಗಳಾದ ವಿನಯ್ ಪ್ರಕಾಶ್ ಸಹ ನಾಲ್ಕು ಭಾಷೆಗಳಲ್ಲಿ ಮಿಂಚಿದ ತಾರೆ. ಈಗ ಈ ಸಾಲಿಗೆ ಹೊಸ ಸೇರ್ಪಡೆ ಕೊಡಗಿನ ಬೆಡಗಿ ರಮ್ಯಾ ಬಾರ್ನ. ಕನ್ನಡ, ತೆಲುಗು ಹಾಗೂ ತಮಿಳು ಚಿತ್ರಗಳಲ್ಲಿ ಅಭಿನಯಿಸಿದ್ದ ರಮ್ಯಾ ಈಗ ತುಳು ಭಾಷೆಗೂ ಅಡಿಯಿಡುವ ಮೂಲಕ ಹೊಸ ಪಟ್ಟ ಗಿಟ್ಟಿಸಿದ್ದಾರೆ.

  ತ್ರಿಭಾಷಾ ತಾರೆಯಾಗಿ ಮಿಂಚುತ್ತಿದ್ದ ರಮ್ಯಾ ಕಡೆಗೆ ತುಳು ಚಿತ್ರ 'ಒರಿಯರ್ದೊರಿ ಅಸಲ್' ಚಿತ್ರದಲ್ಲಿ ಅಭಿನಯಿಸುವ ಮೂಲಕ ಚತುರ್ಭಾಷಾ ತಾರೆಯಾಗಿ ಹೊರಹೊಮ್ಮಿದ್ದಾರೆ. ತಿಂಗಳಲ್ಲಿ ಮೂರು ಬಾರಿ ಶಾಪಿಂಗ್ ಮಾಡುವುದು ಇಷ್ಟ ಎನ್ನುವ ಈ ಬೆಡಗಿ ಓದಿದ್ದು ಬೆಂಗಳೂರಿನ ಜ್ಯೋತಿ ನಿವಾಸ್ ಕಾಲೇಜಿನಲ್ಲಿ. (ದಟ್ಸ್‌ಕನ್ನಡ ಸಿನಿವಾರ್ತೆ)

  English summary
  The chubby cheek beauty Ramya Barna has has bagged the title of Chaturbasha actress. Recently, the release of her Tulu film Asal Oriyadori happened and with this title. So far, Ramya has acted in Kannada, Telugu and Tamil movies and her debut Tulu film is reportedly doing very well at the box office.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X