For Quick Alerts
    ALLOW NOTIFICATIONS  
    For Daily Alerts

    ಸಂಗೊಳ್ಳಿ ರಾಯಣ್ಣನಿಗೆ ರು.17 ಲಕ್ಷದ ಬಿಳಿ ಕುದುರೆ

    By Rajendra
    |

    'ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ'ನಾಗಿ ಕಂಗೊಳಿಸಲಿರುವ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರಿಗೆಂದೇ ವಿಶೇಷವಾದ ಬಿಳಿ ಕುದುರೆಯನ್ನು ತರಿಸಲಾಗಿದೆ. ಕುದುರೆಯ ಬೆಲೆ ರು.17 ಲಕ್ಷ! ಚಿತ್ರದಲ್ಲಿ ಬರುವ ಯುದ್ಧ ಸನ್ನಿವೇಶಗಳ ಜೊತೆಗೆ ಕೆಲವೊಂದು ಸನ್ನಿವೇಶಗಳಲ್ಲಿ ಈ ಕುದುರೆಯ ಪ್ರಮುಖ ಪಾತ್ರವಹಿಸಲಿದೆ. ಈ ವಿಶೇಷ ಕುದುರೆಯನ್ನು ಎಲ್ಲಿಂದ ತರಿಸಲಾಗಿದೆ. ಇದರ ಗುಣವಿಶೇಷಗಳೇನು ಎಂಬ ವಿವರಗಳು ಶೀಘ್ರದಲ್ಲೆ ಬಹಿರಂಗವಾಗಲಿವೆ.

    ದರ್ಶನ್ ಜೊತೆ ನಿಖಿತಾ ಥಕಿತ ತದಿಮಿ:' ಸಂಗೊಳ್ಳಿ ರಾಯಣ್ಣ'ನ ಜೊತೆ ಥಕಿತ ತದಿಮಿ ಎಂದು ಕುಣಿಯಲು ಗ್ಲಾಮರ್ ಬೆಡಗಿ ನಿಖಿತಾ ಆಗಮಿಸಿದ್ದಾರೆ. ಈ ಐತಿಹಾಸಿಕ ಚಿತ್ರಕ್ಕೆ ಪ್ರಿಯಾಮಣಿ ನಾಯಕಿಯಾಗಬೇಕಿತ್ತು. ಆದರೆ ಆಕೆ ಯಾಕೋ ಏನೋ ರಾಯಣ್ಣನನ್ನು ಒಲ್ಲೆ ಎಂದಿದ್ದರು. ಪ್ರಿಯಾಮಣಿ ತನ್ನ ಕೈಯಾರೆ ಕಳಕೊಂಡ ಅವಕಾಶ ನಿಖಿತಾ ಪಾಲಾಗಿದೆ.

    ಈ ಚಿತ್ರದಲ್ಲಿ ಹಿರಿಯ ನಟ ಶ್ರೀನಿವಾಸಮೂರ್ತಿಯವರು ಪ್ರಮುಖ ಪಾತ್ರದಲ್ಲಿ ಕಾಣಿಸಲಿದ್ದಾರೆ. ಇನ್ನೂ ಕೆಲವೊಂದು ಪಾತ್ರಗಳಿಗೆ ಹುಡುಕಾಟ ನಡೆದಿದೆ. ಉಳಿದಂತೆ ಈ ಚಿತ್ರದಲ್ಲಿ ಹಿರಿಯ ಅಭಿನೇತ್ರಿ ಜಯಪ್ರದಾ ಅವರು ಕಿತ್ತೂರು ರಾಣಿ ಚೆನ್ನ,ಮ್ಮನ ಪಾತ್ರದಲ್ಲಿ ಮಿಂಚಲಿರುವುದು ಈಗಾಗಲೆ ಎಲ್ಲರಿಗೂ ಗೊತ್ತಿರುವ ಸಂಗತಿ.

    ಭಾರಿ ಬಜೆಟ್‌ನ ಈ ಚಿತ್ರವನ್ನು ಆನಂದ ಅಪ್ಪುಗೋಳ್ ನಿರ್ಮಿಸುತ್ತಿದ್ದಾರೆ. ಆಕ್ಷನ್, ಕಟ್ ಹೇಳುತ್ತಿರುವವರು ನಾಗಣ್ಣ. ನವೆಂಬರ್ 19ಕ್ಕೆ ಸಂಗೊಳ್ಳಿ ರಾಯಣ್ಣ ಚಿತ್ರದ ಮುಹೂರ್ತ ನೆರವೇರಲಿದೆ. ಅಂದಹಾಗೆ ದರ್ಶನ್ ಜೊತೆ ನಿಖಿತಾ ನಟಿಸಲಿರುವ ಮೂರನೆ ಚಿತ್ರ ಇದಾಗಲಿದೆ. ಈ ಹಿಂದೆ 'ಯೋಧ' ಚಿತ್ರದಲ್ಲಿ ನಟಿಸಿದ್ದರು . ಎಂ ಎಸ್ ರಮೇಶ್ ಅವರ ' ಪ್ರಿನ್ಸ್ ' ಚಿತ್ರದಲ್ಲೂ ನಿಖಿತಾ ನಟಿಸುತ್ತಿದ್ದಾರೆ.

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X