For Quick Alerts
  ALLOW NOTIFICATIONS  
  For Daily Alerts

  ಪ್ರಿಯಕರನ ಜತೆ ನಟಿ ಶಕೀಲಾ ಮದುವೆ

  By Staff
  |

  'ಸಾಫ್ಟ್ ಸೆಕ್ಸ್' ಚಿತ್ರಗಳ ರಾಣಿ ಎಂದೇ ಖ್ಯಾತಿವೆತ್ತ ನಟಿ ಶಕೀಲಾಗೆ ಕಡೆಗೂ ಕಂಕಣಬಲ ಕೂಡಿಬಂದಿದೆ. ಚೆನ್ನೈ ಮೂಲಕ ಉದ್ಯಮಿ ಹಾಗೂ ಚಿರಕಾಲದ ಪ್ರೇಮಿಯನ್ನು ವರಿಸುವುದಾಗಿ ಮುವ್ವತ್ತಾರರ ಹರೆಯದ ಶಕೀಲಾ ತಿಳಿಸಿದ್ದಾರೆ. ನಾಚಿಯಾಪುರಂ ಚಿತ್ರೀಕರಣ ಸ್ಥಳದಲ್ಲಿ ಬುಧವಾರ(ಡಿ.16) ಶಕೀಲಾ ತಮ್ಮ ಮದುವೆ ವಿಚಾರವನ್ನು ಸುದ್ದಿಗಾರರಿಗೆ ಅಧಿಕೃತವಾಗಿ ತಿಳಿಸಿದರು.

  ''ದಕ್ಷಿಣ ಭಾರತದ ಎಲ್ಲಾ ಭಾಷೆಯ ಚಿತ್ರಗಳಲ್ಲಿ ನಟಿಸಿದ್ದೇನೆ.ನಾನು ನಟಿಸಿರುವ ಚಿತ್ರಗಳ ಸಂಖ್ಯೆ 200ರ ಗಡಿದಾಟಿದೆ. ತೀರಾ ಇತ್ತೀಚೆಗಷ್ಟೆ ನಾನು ತಾಯಿಯನ್ನು ಕಳೆದುಕೊಂಡೆ. ನಮ್ಮ ತಾಯಿಯವರೇ ಕೆಲ ವರ್ಷಗಳ ತನಕ ನನಗೆ ಆಸರೆಯಾಗಿದ್ದರು. ಅವರಿಲ್ಲದ ಕಾರಣ ಒಂಟಿತನದ ಜೊತೆಗೆ ಅಭದ್ರತೆ ಕಾಡುತ್ತಿದೆ '' ಎಂದು ಶಕೀಲಾ ಪತ್ರಕರ್ತರ ಮುಂದೆ ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ.

  ಈ ಎಲ್ಲಾ ಕಾರಣಗಳಿಗಾಗಿ ತನ್ನ ಹಳೆಯ ಪ್ರಿಯತಮನನ್ನು ವರಿಸುತ್ತಿದ್ದೇನೆ. ಚೆನ್ನೈ ನಗರದಲ್ಲಿ ಅವರು ದೊಡ್ಡ ಉದ್ಯಮಿ. ನಮ್ಮಿಬ್ಬರ ನಡುವಿನ ಸಂಬಂಧ ಸದೃಢವಾಗಿದೆ. ಬರುವ ಜೂನ್ 2010ಕ್ಕೆ ಮದುವೆಯಾಗುತ್ತಿದ್ದೇವೆ. ತಮ್ಮ ಭಾವಿ ಪತಿಯ ಒಪ್ಪ್ಪಿಗೆ ಪಡೆದ ನಂತರ ಮತ್ತಷ್ಟು ವಿವರಗಳನ್ನು ಶೀಘ್ರದಲ್ಲೇ ನೀಡುತ್ತೇನೆ ಎಂದಿದ್ದಾರೆ ಶಕೀಲಾ.

  ಮಲಯಾಳಂ ಚಿತ್ರರಂಗದಿಂದ ತಾವು ಹೊರಬರಲು ಮಮ್ಮುಟ್ಟಿ ಹಾಗೂ ಮೋಹನ್ ಲಾಲ್ ಕಾರಣರಾಗಿದ್ದಾರೆ ಎಂಬ ಸುದ್ದಿಯನ್ನು ಶಕೀಲಾ ಅಲ್ಲಗಳೆಯುತ್ತಾರೆ. ಮಲಯಾಳಂ ಚಿತ್ರರಂಗದಲ್ಲಿ ನನ್ನ ಕಾಲ ಮುಗಿಯಿತು. ಹಾಗಾಗಿ ನನ್ನ ಪಾತ್ರಗಳಲ್ಲೂ ಗಣನೀಯ ಬದಲಾಗುತ್ತಿವೆ ಎಂದು ಶಕೀಲಾ ಪ್ರತಿಕ್ರಿಯಿಸಿದ್ದಾರೆ.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X