ಆಂಟಿ ಶಕೀಲಾ ಜೊತೆ ನಟ ಮೋಹನ್ ತುಂಟಾಟ
ಒಂದು ಕಾಲದಲ್ಲಿ ಭಾರಿ ಗಾತ್ರದ ಸೊಂಟದ ಸುತ್ತಳತೆಯಿಂದಲೇ ಪಡ್ಡೆಗಳನ್ನು ಗಿರಕಿ ಹೊಡೆಸಿದ್ದ ತುಂಬು ಯೌವನದ ನಟಿ ಶಕೀಲಾ ಈಗ ಮತ್ತೊಮ್ಮೆ ಕನ್ನಡ ಚಿತ್ರರಂಗಕ್ಕೆ ಬಲಗಾಲಿಟ್ಟು ಬಂದಿದ್ದಾರೆ. ಚಿತ್ರದಲ್ಲಿ ಶಕೀಲಾ ಇದ್ದಾರೆ ಎಂದ ಮೇಲೆ ಹಾಟ್ ಸೀನ್‌ಗಳಿಗೆ ಬರವೇ? 'ಸಂಸಾರದಲ್ಲಿ ಗೋಲ್ ಮಾಲ್ 2' ಚಿತ್ರದಲ್ಲಿ ಆಂಟಿಯ ತುಂಟಾಟಾಗಳು ಸವಿಯಬಹುದು.
ಇದು ತೆಲುಗಿನ ಮಾರುದ್ದ ಟೈಟಲಿನ ಚಿತ್ರ 'ಆದಿವಾರಂ ಆಡವಾಳ್ಳಕು ಸೆಲವು ಕಾವಾಲಿ' (ಭಾನುವಾರ ಮಹಿಳೆಯರಿಗೆ ರಜೆ ಬೇಕು) ರೀಮೇಕ್. ಕನ್ನಡದಲ್ಲಿ ರೀಮೇಕ್, ಭಕ್ತಿರಸ, ಹಾಸ್ಯ, ಸೆಂಟಿಮೆಂಟ್ ಚಿತ್ರಗಳಿಗೆ ಹೆಸರಾದ ಸಾಯಿಪ್ರಕಾಶ್ ಆಕ್ಷನ್ ಕಟ್ ಹೇಳುತ್ತಿರುವ ಚಿತ್ರ ಇದಾಗಿದೆ.
ಐದು ಮಂದಿ ಗಂಡಹೆಂಡಿರ ಸಂಸಾರದಲ್ಲಿನ ತರಲೆ, ತಾಪತ್ರಯಗಳೇ ಚಿತ್ರದ ಕಥಾವಸ್ತು. ಈ ಚಿತ್ರದಲ್ಲಿ ಶಕೀಲಾಗೆ ಜೊತೆಯಾಗುತ್ತಿರುವವರು ಹಾಸ್ಯ ನಟ ಮೋಹನ್. ಇವರಿಬ್ಬರೂ ಚಿತ್ರದಲ್ಲಿ ಡ್ಯುಯೆಟ್ ಕೂಡ ಹಾಡಿದ್ದಾರೆ. 'ಮೂರನೇ ಕ್ಲಾಸ್ ಮಂಜ ಬಿ.ಕಾಂ ಭಾಗ್ಯ' ಚಿತ್ರ ನಿರ್ಮಿಸಿದ್ದ ಪ್ರಭಾಕರ ರೆಡ್ಡಿ ನಿರ್ಮಾಣದ ಚಿತ್ರ. (ಒನ್‌ಇಂಡಿಯಾ ಕನ್ನಡ)


Click it and Unblock the Notifications











