ಜೈಲಿನಲ್ಲಿ ದರ್ಶನ್‌ರನ್ನು ಭೇಟಿ ಮಾಡಲಿರುವ ಶಿವಣ್ಣ

By Rajendra

ಸೆಂಚುರಿ ಸ್ಟಾರ್ ಶಿವರಾಜ್ ಕುಮಾರ್ ಮತ್ತು ಚಾಲೆಂಜಿಂಗ್ ಸ್ಟಾರ್ ದರ್ಶನ್ ಪರಸ್ಪರ ಭೇಟಿಯಾಗುವಂತಹ ಕಾಕತಾಳೀಯ ಸನ್ನಿವೇಶವೊಂದು ಒದಗಿಬಂದಿದೆ. ಸೆಪ್ಟೆಂಬರ್ 28 ಹಾಗೂ 29ರಂದು ಶಿವಣ್ಣ ಮುಖ್ಯಭೂಮಿಕೆಯಲ್ಲಿರುವ 'ಶಿವ' ಚಿತ್ರೀಕರಣ ಪರಪ್ಪನ ಅಗ್ರಹಾರದಲ್ಲಿ ನಡೆಯಲಿದೆ.

ಈಗಾಗಲೆ ಜೂನಿಯರ್ ಕಟ್ಟಾ ಸೆಲ್‌ಮೇಟ್ ಆಗಿರುವ ನಟ ದರ್ಶನ್‌ರನ್ನು ಶಿವಣ್ಣ ಭೇಟಿ ಮಾಡಲಿದ್ದಾರೆಯೇ? ಮಾತನಾಡಲಿದ್ದಾರೆಯೇ? ಏನಾಗುತ್ತದೋ ಏನೋ? ಎಂಬ ಪ್ರಶ್ನೆಗಳು ಉದ್ಭವಿಸಿವೆ. 'ಶಿವ' ಚಿತ್ರದ ಜೈಲು ಸನ್ನಿವೇಶದ ಚಿತ್ರೀಕರಣಕ್ಕಾಗಿ ಪರವಾನಗಿಯೂ ಸಿಕ್ಕಿದೆ. ಕೆ ಪಿ ಶ್ರೀಕಾಂತ್ ನಿರ್ಮಿಸುತ್ತಿರುವ ಈ ಚಿತ್ರಕ್ಕೆ ಓಂ ಪ್ರಕಾಶ್ ರಾವ್ ಆಕ್ಷನ್ ಕಟ್ ಹೇಳಲಿದ್ದಾರೆ.

ಪತ್ನಿ ಮೇಲೆ ದರ್ಶನ್ ಪ್ರತಾಪ ತೋರಿದ ಹಿನ್ನೆಲೆಯಲ್ಲಿ ಮೊದಲು ಆಕೆ ಭೇಟಿ ಮಾಡಿದ್ದೇ ಶಿವಣ್ಣನನ್ನು. ಬಳಿಕ ಶಿವಣ್ಣ ದಂಪತಿಗಳು ಇಬ್ಬರನ್ನೂ ಕರೆದು ಬುದ್ಧಿಹೇಳಿ ಕಳುಹಿಸಿದ್ದರು. ಆ ಬಳಿಕ ಶಿವಣ್ಣ ದಂಪತಿಗಳಿಗೆ ದರ್ಶನ್ ಪತ್ನಿ ವಿಜಯಲಕ್ಷ್ಮಿ ಕೈಯಲ್ಲಿ ಅವಾಜ್ ಹಾಕಿಸಿದ್ದ ಎಂಬ ಅಂಶಗಳು ಬೆಳಕಿಗೆ ಬಂದಿದ್ದವು.

ಆದರೆ ಈ ಬಗ್ಗೆ ಶಿವಣ್ಣ ಇದುವರೆಗೂ ಮೌನ ಮುರಿಯಲೇ ಇಲ್ಲ. ಅಷ್ಟೊತ್ತಿಗಾಗಲೆ ದರ್ಶನ್ ಪ್ರಕರಣ ನಾನಾ ಆಯಾಮಗಳನ್ನು ಪಡೆದಿತ್ತು. ಈಗ ದರ್ಶನ್ ಹಾಗೂ ಶಿವಣ್ಣ ನಡುವೆ ಮುಂಚೆ ಇದ್ದ ಗೆಳೆತಕ್ಕೂ ಹೊಡೆತ ಬಿದ್ದಿದೆ. ಶಿವಣ್ಣ ದರ್ಶನ್‌ರನ್ನು ಮಾತನಾಡುತ್ತಾರೋ ಇಲ್ಲ ಚಿತ್ರೀಕರಣ ಮುಗಿಸಿಕೊಂಡು ಮನೆಗೆ ವಾಪಸಾಗುತ್ತಾರೋ? ಎಂಬ ಕುತೂಹಲ ಗಾಂಧಿನಗರದಲ್ಲಿ ನೆಲೆಗೊಂಡಿದೆ. (ದಟ್ಸ್‌ಕನ್ನಡಸಿನಿವಾರ್ತೆ)

More from Filmibeat

English summary
Hat Trick Hero Shivaraj Kumar will be shooting for his forthcoming film Shiva produced by K.P.Srikanth and directed by Om Prakash Rao on September 28th and 29th inside Parappana Agrahaara Jail. Will Shivarajkumar Meet Darshan in jail.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X