For Quick Alerts
  ALLOW NOTIFICATIONS  
  For Daily Alerts

  ಮಂಗಳೂರಿನಲ್ಲಿ ಗುಟ್ಟಾಗಿ ವಸುಂಧರಾ ದಾಸ್‌ ಮದುವೆ

  By Rajendra
  |

  ಶಕಲಕ ಬೇಬಿ ಶಕಲಕ ಬೇಬಿ... ಖ್ಯಾತಿಯ ಗಾಯಕಿ ಹಾಗೂ ನಟಿ ವಸುಂಧರಾ ದಾಸ್‌ ಗುಟ್ಟಾಗಿ ಮದುವೆಯಾಗಿದ್ದಾರೆ ಎಂಬ ಸುದ್ದಿ ಚಿತ್ರ ಜಗತ್ತಿನಲ್ಲಿ ಗಿರಿಗಿಟ್ಲೆ ಹೊಡೆಯುತ್ತಿದೆ. ತಮ್ಮ ಹಳೆಯ ಗೆಳೆಯ ರೋಬರ್ಟೋ ನಾರೈನ್ ಎಂಬುವವರನ್ನು ವಸುಂಧರಾ ಡಿಸೆಂಬರ್ 29ರಂದೇ ಮದುವೆಯಾಗಿದ್ದಾರೆ ಎನ್ನುತ್ತವೆ ಮೂಲಗಳು.

  ಇವರಿಬ್ಬರೂ ಮದುವೆಯಾಗಿರುವುದು ಮಂಗಳೂರು ಬಳಿಯ ಕೋಟೇಶ್ವರದ ನಂದಾ ರೆಡ್ಡಿ ಗೆಸ್ಟ್ ಹೌಸ್‌ನಲ್ಲಿ ಎನ್ನಲಾಗಿದೆ. ಆದರೆ ವಸುಂಧರಾ ಆಗಲಿ ಆಕೆಯ ಬಾಯ್‌ಫ್ರೆಂಡ್ ಆಗಲಿ ಈ ಬಗ್ಗೆ ಬಾಯಿಬಿಡುತ್ತಿಲ್ಲ. ಹಾಗಾಗಿ ಸುದ್ದಿ ನಾನಾ ಕೋನಗಳಲ್ಲಿ ಹರಿದಾಡುತ್ತಿದೆ.

  ಕನ್ನಡದ ಲಂಕೇಶ್ ಪತ್ರಿಕೆ ಚಿತ್ರದಲ್ಲಿ ಅಭಿನಯಿಸಿದ್ದರು. ಹುಡುಗಾಟ, ಸಾಚಾ, ತಬ್ಬಲಿ, 10th ಕ್ಲಾಸ್ ಎ ಸೆಕ್ಷನ್ ಸೇರಿದಂತೆ ಕನ್ನಡ ಹಲವು ಚಿತ್ರಗಳಲ್ಲಿ ವಸುಂಧರಾ ಹಾಡಿದ್ದಾರೆ. ಕಮಲ್ ಹಾಸನ್ ಜೊತೆ ಅಭಿನಯದ 'ಹೇ ರಾಮ್' ಚಿತ್ರದ ಹಾಟ್ ಕಿಸ್ಸಿಂಗ್ ಸೀನ್ ವಸುಂಧರಾರನ್ನು ಖ್ಯಾತಿಯ ಉತ್ತುಂಗಕ್ಕೇರಿಸಿತ್ತು. ಮದುವೆ ಸುದ್ದಿ ನಿಜವೇ ಅಥವಾ ಸುಳ್ಳೇ ಎಂಬುದು ಇನ್ನಷ್ಟೇ ಹೊರಬೀಳಬೇಕಾಗಿದೆ. (ಏಜೆನ್ಸೀಸ್)

  English summary
  Their were rumours making rounds that singer cum actress Vasundara Das marries with her long time boy friend Roberto Narain. Reports are that Vasundhara Das married Roberto Narain on December 29 at Koteshwar Beach near Mangalore in the Nanda Reddy guest house.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X