For Quick Alerts
ALLOW NOTIFICATIONS  
For Daily Alerts

ಶಿವಣ್ಣ, ಚಿರಂಜೀವಿ, ರಜನಿಕಾಂತ್ ಫ್ಯಾನ್ಸ್ ಡಾನ್ಸ್

By Rajendra
|

ವೇದಿಕೆ ಒಂದೇ, ಆದರೆ ಡಾನ್ಸ್ ಮಾತ್ರ ವೈವಿಧ್ಯಭರಿತ!ಈ ಸಾಂಸ್ಕೃತಿಕ ವೈಭವವನ್ನು ನೀವು ಕಣ್ತುಂಬಿಕೊಳ್ಳಬೇಕೆ. ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್, ಮೆಗಾಸ್ಟಾರ್ ಚಿರಂಜೀವಿ, ಸೂಪರ್ ಸ್ಟಾರ್ ರಜನಿಕಾಂತ್ ಅಭಿಮಾನಿಗಳ (ಫ್ಯಾನ್ಸ್) ಡಾನ್ಸ್ ವೇದಿಕೆ ಸಿದ್ಧವಾಗಿದೆ.

ಕರ್ನಾಟಕ, ಆಂಧ್ರಪ್ರದೇಶ ಹಾಗೂ ತಮಿಳುನಾಡಿನ ಪುಟ್ಟ ಮಕ್ಕಳು ಪುರಭವನದಲ್ಲಿ ತಮ್ಮ ಪ್ರತಿಭೆಯನ್ನು ಪ್ರದರ್ಶಿಸಲಿದ್ದಾರೆ. ದಕ್ಷಿಣ ಭಾರತದ ಮಕ್ಕಳ ಸಾಂಸ್ಕೃತಿಕ ಅಕಾಡೆಮಿ ನೇತೃತ್ವದಲ್ಲಿ ಜುಲೈ 7,8ರಂದು ವರ್ಣರಂಜಿತ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ.

ಸಿನಿಮಾ ಹಾಡುಗಳ ನೃತ್ಯ, ಹಾಡುಗಾರಿಕೆ, ಭರತನಾಟ್ಯ, ಜಾನಪದ ನೃತ್ಯ, ಏಕಪಾತ್ರಾಭಿನಯ, ಗ್ರೂಪ್ ಡಾನ್ಸ್, ಕಿಬೋರ್ಡ್, ಗಿಟಾರ್ ವಾದನ, ಮೃದಂಗ, ರಂಗೋಲಿ ಸ್ಪರ್ಧೆ, ಚಿಕ್ಕಮಕ್ಕಳ ಫ್ಯಾಷನ್ ಶೋ ಸೇರಿದಂತೆ 64 ಕಲೆಗಳ ಪ್ರದರ್ಶನಕ್ಕೆ ವೇದಿಕೆ ಮೇಲೆ ಅವಕಾಶ ಕಲ್ಪಿಸಲಾಗಿದೆ. ದಕ್ಷಿಣ ಭಾರತದ ಮಕ್ಕಳ ಸಾಂಸ್ಕೃತಿಕ ಅಕಾಡೆಮಿ 10ನೇ ವಾರ್ಷಿಕೋತ್ಸವ ಪ್ರಯುಕ್ತ ಕನ್ನಡ, ತೆಲುಗು, ತಮಿಳು ಭಾಷೆಗಳ ಚಿನ್ನಾರಿ ಪ್ರತಿಭೆಗಳನ್ನು ಗುರುತಿಸಿ ಅವರನ್ನು ಸನ್ಮಾನಿಸಲಾಗುತ್ತದೆ.

ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್, ಪವರ್ ಸ್ಟಾರ್ ಪುನೀತ್ ರಾಜ್‌‍ಕುಮಾರ್, ರಿಯಲ್ ಸ್ಟಾರ್ಉಪೇಂದ್ರ, ಕಿಚ್ಚ ಸುದೀಪ್, ಲೂಸ್ ಮಾದ ಯೋಗೇಶ್ , ಗೋಲ್ಡನ್ ಸ್ಟಾರ್ ಗಣೇಶ್, ಚಿನ್ನಾರಿ ಅಭಿಮಾನಿಗಳು ಕುಣಿದು ರಂಜಿಸಲಿದ್ದಾರೆ. ಮೆಗಾಸ್ಟಾರ್ ಚಿರಂಜೀವಿ, ರಜನಿಕಾಂತ್ ಅಭಿಮಾನಿಗಳು ಡಾನ್ಸ್ ಮಾಡಿ ರಂಜಿಸಲಿದ್ದಾರೆ.

ಲೋಗೋ ಬಿಡುಗಡೆ ಮಾಡಿದ ಶಿವಣ್ಣ: ದಕ್ಷಿಣ ಭಾರತದ ಮಕ್ಕಳ ಸಾಂಸ್ಕೃತಿಕ ಅಕಾಡೆಮಿ ನಿರ್ವಹಿಸುತ್ತಿರುವ ಈ ಸ್ಪರ್ಧೆಗಳ ಲೋಗೋವನ್ನು ಇತ್ತೀಚೆಗೆ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಬಿಡುಗಡೆ ಮಾಡಿದರು. ಬೆಂಗಳೂರಿನಲ್ಲಿ ನಡೆಯುತ್ತಿರುವ 'ಶಿವ' ಚಿತ್ರೀಕರಣ ಸ್ಥಳದಲ್ಲಿ ಶಿವಣ್ಣ ಈ ಲೋಗೋ ಬಿಡುಗಡೆ ಮಾಡಿದರು.ಈ ಸಂದರ್ಭದಲ್ಲಿ 'ಶಿವ' ಚಿತ್ರದ ನಿರ್ಮಾಪಕ ಶ್ರೀಕಾಂತ್ ಉಪಸ್ಥಿತರಿದ್ದರು.

ಪೋಷಕರ ಅನುಮತಿಯ ಮೇರೆಗೆ ಆರು ವರ್ಷ ಪೂರ್ಣಗೊಳಿಸಿರುವ ಮಕ್ಕಳು ಸ್ಪರ್ಧೆಯಲ್ಲಿ ಭಾಗವಹಿಸಬಹುದಾಗಿದೆ. ಸ್ಪರ್ಧೆಯಲ್ಲಿ ಭಾಗವಹಿಸಲು ಇಚ್ಚಿಸುವವರು ಜೂ.30ರೊಳಗೆ ತಮ್ಮ ಮಕ್ಕಳ ಸಂಪೂರ್ಣ ವಿವರಗಳನ್ನು ಪೋಷಕರು ಸಲ್ಲಿಸಬೇಕು. ಕನ್ನಡ, ತೆಲುಗು ಹಾಗೂ ತಮಿಳು ಸರ್ಕಾರಿ ಶಾಲೆಗಳಲ್ಲಿ ಓದುತ್ತಿರುವ ವಿದ್ಯಾರ್ಥಿಗಳಿಗೆ ಸ್ಪರ್ಧೆಯಲ್ಲಿ ಪಾಲ್ಗೊಳ್ಳಲು ನೇರ ಪ್ರವೇಶ ಕಲ್ಪಿಸಲಾಗಿದೆ. ಹೆಚ್ಚಿನ ವಿವರಗಳಿಗೆ ಸಂಪರ್ಕಿಸಿ: 99458 82143, 90359 56660, 99456 66615. (ದಟ್ಸ್‌ಕನ್ನಡ ಸಿನಿವಾರ್ತೆ)

English summary
South Indian Children's Cultural Academy is organising dance competition for Hat Trick Hero Shivarajkumar, Mega Star Chiranjeevi and Super Star Rajinikanth fans with an objective of focusing light on underlying talent of children aged above 6 years. The segments are classical, folk and cinema on July 7th and 8th at Town Hall, JC Road, Banagalore.

Kannada Photos

Go to : More Photos
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Filmibeat sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Filmibeat website. However, you can change your cookie settings at any time. Learn more