For Quick Alerts
  ALLOW NOTIFICATIONS  
  For Daily Alerts

  ಸುದೀಪ್ 'ಈಗ' ಟಿವಿ ರೈಟ್ಸ್‌ಗೆ ಬಂಪರ್‌ ಬೆಲೆ

  By Rajendra
  |

  ಕಿಚ್ಚ ಸುದೀಪ್ ಅಭಿನಯದ ತೆಲುಗಿನ 'ಈಗ' ಚಿತ್ರ ಪ್ರಯೋಗಾತ್ಮಕ ಸಿನಿಮಾ ಎಂಬ ಕಾರಣಕ್ಕೆ ಆರಂಭವಾದಂದಿನಿಂದಲೂ ಕುತೂಹಲ ಕಾಯ್ದುಕೊಂಡೇ ಬಂದಿದೆ. ಈ ಚಿತ್ರ ಏಪ್ರಿಲ್ 5ರಂದು ತೆರೆಗೆ ಅಪ್ಪಳಿಸುವ ಸಿದ್ಧತೆಯಲ್ಲಿದೆ.

  'ಮಗಧೀರ' ಖ್ಯಾತಿರ್ಯ ಎಸ್ ಎಸ್ ರಾಜಮೌಳಿ ನಿರ್ದೇಶನದ ಚಿತ್ರ ಇದಾದ ಕಾರಣ ಟಾಲಿವುಡ್‌ನಲ್ಲಿ ಭಾರೀ ನಿರೀಕ್ಷೆ ಹುಟ್ಟುಹಾಕಿದೆ. ಇನ್ನೂ ಚಿತ್ರದ ಆಡಿಯೋ ಕೂಡ ಬಿಡುಗಡೆಯಾಗಿಲ್ಲ. ಆಗಲೇ ಚಿತ್ರದ ಟಿವಿ ರೈಟ್ಸ್ ಭರ್ಜರಿ ಬೆಲೆಗೆ ಬಿಕರಿಯಾಗಿದೆ. ಮೂಲಗಳ ಪ್ರಕಾರ ರು.5.5 ಕೋಟಿಗೆ ಸೇಲಾಗಿದೆ.

  ಚಿತ್ರದಲ್ಲಿ ತೆಲುಗಿನ ಬಿಗ್ ಸ್ಟಾರ್ಸ್ ಇಲ್ಲದಿದ್ದರೂ ಈ ಮಟ್ಟದ ಬೆಲೆ ಸಿಕ್ಕಿರುವುದು ರಾಜಮೌಳಿ ಮೇಲಿನ ಭರವಸೆಯೇ ಕಾರಣ ಎನ್ನಲಾಗಿದೆ. ನಾನಿ, ಸಮಂತಾ ಹಾಗೂ ಸುದೀಪ್ ಚಿತ್ರದ ಪ್ರಮುಖ ಪಾತ್ರಧಾರಿಗಳು. ಎಂ ಎಂ ಕೀರವಾಣಿ ಸಂಗೀತ ಚಿತ್ರಕ್ಕಿದ್ದು ಮಾರ್ಚ್ 22ಕ್ಕೆ ಚಿತ್ರದ ಆಡಿಯೋ ಬಿಡುಗಡೆಯಾಗಲಿದೆ. (ಏಜೆನ್ಸೀಸ್)

  English summary
  Kannada actor Sudeep's upcoming Telugu film Eega satellite rights have been sold out for a bumper price. As per the reports the movie sold out for Rs 5.5 crores. Eega is all set to hit the silver screens on April 5th.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X