ತಮನ್ನಾ-ಮಹೇಶ್ ಬಾಬು ಜೋಡಿ, ಮಾಡಲಿದೆ ಮೋಡಿ
ತಮನ್ನಾ ಭಾಟಿಯಾ ಮಹೇಶ್ ಬಾಬುಗೆ ಜೋಡಿಯಾಗುತ್ತಿದ್ದಾರೆ. ಇದು ಮಹೇಶ್ ಕೂಡ ಖುಷಿ ಪಡುವ ವಿಚಾರವೇ. ಕಾರಣ ತಮನ್ನಾ ನಟಿಸಿದ '100% ಲವ್' ಮನೆಮಾತಾಗಿರುವ ಸಿನಿಮಾ. ಮಹೇಶ್ ಹಾಗೂ ಸುಕುಮಾರ್ ಸಖತ್ ಖುಷಿಯಾಗಿದ್ದಾರೆ. ಕಾರಣ ಈ ತಮನ್ನಾ ಕೇವಲ ಗ್ಲಾಮರ್ ಮಾತ್ರ ಅಲ್ಲ, ಪ್ರತಿಭಾವಂತೆ ಕೂಡ.
ಸುಕುಮಾರ್ ತಮ್ಮ ಮುಂದಿನ ಚಿತ್ರಕ್ಕಾಗಿ ತಮನ್ನಾ ಕಾಲ್ ಶೀಟ್ ಕೇಳಿದರೆ ಆಕೆ ತಡಮಾಡದೇ ಒಪ್ಪಿಕೊಂಡಳಂತೆ. ಕಥೆ ಕೇಳಿದ ತಮನ್ನಾ ಸಾಕಷ್ಟು ಇಂಪ್ರೆಸ್ ಕೂಡ ಆಗಿದ್ದಾಳೆ. ಸುಕುಮಾರ್ ಹಿಗ್ಗಿ ಹೀರೇಕಾಯಿ ಆದರೆ ಮಹೇಶ್ ದಿಲ್ ಕೂಡ ಖುಷ್. ಎಲ್ಲರಿಗೂ ಮುಂದೆ ಹ್ಯಾಪಿಡೇಸ್ ಕಾದಿದೆ.
ಮಹೇಶ್-ತಮನ್ನಾ ಜೋಡಿ ತೆರೆ ಮೇಲೆ ಮಾಡಲಿರುವ ಮೋಡಿ ನೋಡಲು ಇರುವ ಕಣ್ಣು ಕಡಿಮೆ ಎನಿಸದಿದ್ದರೆ ಹೇಳಿ. ಈ ಚಿತ್ರ ಬರುವ ವರ್ಷ, ಅಂದರೆ 2012 ರಲ್ಲಿ ಸೆಟ್ಟೇರಲಿದೆ. ಅಲ್ಲಿಯವರೆಗೂ ಈ ಇಬ್ಬರೂ ಸಖತ್ ಬ್ಯುಸಿ. ಜೊತೆಗೆ ಸುಕುಮಾರ್ ಕೂಡ ಖಾಲಿ ಇರುವ ಅಸಾಮಿಯೇನಲ್ಲ. (ಒನ್ ಇಂಡಿಯಾ ಕನ್ನಡ)
More from Filmibeat
English summary
Sukumar seems to have enough reasons to rope in Tamanna Bhatia in his next film, which will star Mahesh Babu. Her charming and glamorous acts in his earlier flick 100 percent Love was talk of the town a few months ago.


Click it and Unblock the Notifications











