ಫಿಲ್ಮ್ ಶೂಟಿಂಗ್ ಬ್ಯಾನ್ ಮಾಡಿ ಎಂದ ಜಯಾ

ಅಧಿಕಾರ ವಹಿಸಿಕೊಂಡು 100 ದಿನಗಳನ್ನು ಪೂರೈಸಿರುವ ಜಯಾ ಅವರ ಆದೇಶದಿಂದ ಕಾಲಿವುಡ್ ಕಂಗಾಲಾಗಿಲ್ಲ. ಸುಮಾರು 85 ಕ್ಷೇತ್ರಗಳಲ್ಲಿ ಶೂಟಿಂಗ್ ಗೆ ಬ್ಯಾನ್ ಮಾಡಲಾಗಿದೆ.
ಐತಿಹಾಸಿಕ ಸ್ಥಳಗಳಲ್ಲಿ ಶೂಟಿಂಗ್ ಮಾಡಲು ಬರುವ ಸಿನಿಮಾ ಮಂದಿ, ಸುತ್ತಮುತ್ತಲ ಪ್ರದೇಶವನ್ನು ಗಬ್ಬೆಬ್ಬಿಸಿ ಹೋಗುತ್ತಾರೆ. ಅವರಿಗೆ ಸ್ಥಳ ಮಹಾತ್ಮೆ ಏನು ಗೊತ್ತಿರುತ್ತದೆ. ಈ ಕೂಡಲೇ ನಿಷೇಧ ಹೇರಿ ಎಂದು ಪುರಾತತ್ವ ಇಲಾಖೆ ತಮಿಳುನಾಡು ಸರ್ಕಾರಕ್ಕೆ ಪತ್ರ ಬರೆದಿತ್ತು. ಇದಕ್ಕೆ ಸ್ಪಂದಿಸಿರುವ ಸರ್ಕಾರ ಈ ಆದೇಶವನ್ನು ಹೊರಡಿಸಿದೆ.
ಆದರೆ, ಇದರ ನೇರ ಪರಿಣಾಮವಾಗುವುದು ಕರ್ನಾಟಕದ ಮೇಲೆ. ಹೆಚ್ಚು ಕಮ್ಮಿ ತಮಿಳಿನ ಸ್ಟಾರ್ ನಟ ಸಿನಿಮಾಗಳ ಶೂಟಿಂಗ್ ನಡೆಯುವುದು ಮೈಸೂರು, ಶ್ರೀರಂಗಪಟ್ಟಣ ಆಸುಪಾಸಿನಲ್ಲಿ, ಹೀಗಿರುವಾಗ, ಕಾಲಿವುಡ್ ಮಂದಿ ರಾಜ್ಯದಲ್ಲಿ ಅಲೆದಾಡಿ ಎಲ್ಲೆಡೆ ಶೂಟಿಂಗ್ ಮಾಡಲು ಕೆಎಫ್ ಸಿಸಿ ಅನುವು ಮಾಡಿಕೊಡುವ ಮುನ್ನ ಎಚ್ಚರಿಕೆ ವಹಿಸುವುದು ಉತ್ತಮ.
ಶೂಟಿಂಗ್ ಹೆಸರಿನಲ್ಲಿ ನಡೆಯುವ ದಂಧೆಗಳಿಗೆ ಬ್ರೇಕ್ ಹಾಕದಿದ್ದರೆ, ಯಾಣಾ, ಗಾಳಿಪಟದ ಮುಗಿಲ್ ಪೇಟೆ ರೀತಿಯಲ್ಲೇ ಸಿನಿಮಾ ಶೂಟಿಂಗ್ ಸ್ಪಾಟ್ ಗಳು ಸಾರ್ವಜನಿಕರಿಗೆ ಸಕತ್ ಕಾಸ್ಟ್ಲಿ ಆಗುವ ಸಾಧ್ಯತೆಯಿದೆ. ತಮಿಳರನ್ನು ನಮ್ಮ ರಾಜ್ಯಕ್ಕೆ ಬಿಟ್ಟು ಕೊಳ್ಳುವ ಮೊದಲು ನಿಯಮಾವಳಿಗಳನ್ನು ಭದ್ರಪಡಿಸಿಕೊಳ್ಳದಿದ್ದರೆ ಅಪಾಯ ಕಟ್ಟಿಟ್ಟ ಬುತ್ತಿ.


Click it and Unblock the Notifications











