ಉಪೇಂದ್ರ ಜೊತೆ 'ಜೋಗಿ' ಪ್ರೇಮ್ ಜೊತೆಯಾಟ

By Rajendra

ರಿಯಲ್ ಸ್ಟಾರ್ ಉಪೇಂದ್ರ ಹಾಗೂ 'ಜೋಗಯ್ಯ' ಪ್ರೇಮ್ ಕಾಂಬಿನೇಷನಲ್ಲಿ ಚಿತ್ರ ಬಂದರೆ ಹೇಗಿರುತ್ತದೆ? ಇವರಿಬ್ಬರ ಜೊತೆಯಾಟ ನೋಡಲು ಪ್ರೇಕ್ಷಕರಿಗೆ ಇದಕ್ಕಿಂತಲೂ ಖುಷಿ ಇನ್ನೇನು ಬೇಕು. ಹೌದು ಈಗ ಇವರಿಬ್ಬರೂ ಒಂದೇ ಚಿತ್ರದಲ್ಲಿ ಅಭಿನಯಿಸಲು ಮುಂದಾಗಿದ್ದಾರೆ. ಆದರೆ ಆಕ್ಷನ್, ಕಟ್ ಹೇಳುತ್ತಿರುವುದು ಮಾತ್ರ ಮತ್ತೊಬ್ಬರು.

ಸದ್ಯಕ್ಕೆ ಇವರಿಬ್ಬರ ಕಾಂಬಿನೇಷನಲ್ಲಿ ಬರಲಿರುವ ಚಿತ್ರದ ಬಗ್ಗೆ ಸ್ಪಷ್ಟ ಮಾಹಿತಿಯಿಲ್ಲ. ಹಾಗಂತ ಈ ಸುದ್ದಿಯನ್ನು ಯಾರೋ ಹಾರಿಸಿದ ಗಾಳಿಪಟ ಎಂದು ತಿಳಿಯುವಂತಿಲ್ಲ. ಏಕೆಂದರೆ ಇವರಿಬ್ಬರೂ ಒಂದೇ ಚಿತ್ರದಲ್ಲಿ ನಟಿಸಲು ಒಪ್ಪಿದ್ದಾರೆ. ಇನ್ನೂ ಹೆಸರಿಡದ ಈ ಚಿತ್ರ ಇದೇ ವರ್ಷ ಸೆಟ್ಟೇರಲಿದೆಯಂತೆ.

ಸದ್ಯಕ್ಕೆ 'ಜೋಗಯ್ಯ' ಚಿತ್ರದಲ್ಲಿ ನಿರ್ದೇಶಕ ಪ್ರೇಮ್ ಬಿಜಿಯಾಗಿದ್ದಾರೆ. ಉಪೇಂದ್ರ ಕೂಡ 'ಸೂಪರ್' ತೆಲುಗು ಡಬ್ಬಿಂಗ್‌ನಲ್ಲಿ ಬಿಜಿಯೋ ಬಿಜಿ. ಇದಾದ ಬಳಿಕ ಉಪ್ಪಿಯ ಮತ್ತೊಂದು ಚಿತ್ರ ಸೆಟ್ಟೇರಲಿದೆ. ಆ ಬಳಿಕವಷ್ಟೇ ಪ್ರೇಮ್, ಉಪ್ಪಿ ಕಾಂಬಿನೇಷನ್ ಚಿತ್ರ ಸೆಟ್ಟೇರಲಿದೆ. ಈ ಚಿತ್ರಕ್ಕೆ ಗುರುಕಿರಣ್ ಸಂಗೀತ ಸಂಯೋಜಿಸುವ ಸಾಧ್ಯತೆಗಳಿವೆ.[ಪ್ರೇಮ್]

More from Filmibeat

English summary
A film in the combination of Real Star Upendra and director Prem launching soon sources says. But the cast and crew of the movie yet to be finalised. Gurukiran to be score the music. More details about the film is awaited.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X