ಉಪೇಂದ್ರ-ನಾಗಾರ್ಜುನ 'ಜುಗಲ್ ಬಂದಿ'ಯ ಸಿನಿಮಾ

Nagarjuna Upendra
ಕನ್ನಡದ ಸೂಪರ್ ಸ್ಟಾರ್ ಉಪೇಂದ್ರ ಹಾಗೂ ತೆಲುಗು ಚಿತ್ರರಂಗದ ದಿಗ್ಗಜ, ರಾಜ ನಾಗಾರ್ಜುನ 'ಆದಿ ಶಂಕರಾಚಾರ್ಯ' ಎಂಬ ತೆಲುಗು ಚಿತ್ರವೊಂದರಲ್ಲಿ ಜೊತೆಯಾಗಿ ಅಭಿನಯಿಸುತ್ತಿದ್ದಾರೆ. ಅನುಷ್ಕಾ ಶೆಟ್ಟಿ ಕೂಡ ಈ ಚಿತ್ರದಲ್ಲಿ ನಟಿಸುತ್ತಿರುವುದು ಟಾಲಿವುಡ್ ಹಾಗೂ ಸ್ಯಾಂಡಲ್ ವುಡ್ ಸಿನಿಪ್ರಿಯರಿಗೆ ಸಿಹಿಸಿಹಿ ಸಮಾಚಾರ.

ಈ ಚಿತ್ರದಲ್ಲಿ ಸೂಪರ್ ಸ್ಟಾರ್ ಉಪೇಂದ್ರ ಅವರದು ಅಮರುಕ ಮಹಾರಾಜನ ಪಾತ್ರ. ಅನುಷ್ಕಾ ಶೆಟ್ಟಿಯದು ಪ್ರಮುಖವಾದ ಗೆಸ್ಟ್ ರೋಲ್. ಶ್ರೀ ರಾಮದಾಸು, ಶ್ರೀ ಮಂಜುನಾಥ್, ಪಾಂಡುರಂಗಡು ಹಾಗೂ ಅನ್ನಮಯ್ಯ ಚಿತ್ರಕ್ಕೆ ಕಥೆ, ಚಿತ್ರಕಥೆ ಹಾಗೂ ಸಂಭಾಷಣೆ ಬರೆದಿದ್ದ ಜೆಕೆ ಭಾರವಿ ಈ ಚಿತ್ರಕ್ಕೂ ಕಥೆ ಬರೆದಿದ್ದಾರೆ. ಈ ಚಿತ್ರದ ಮೂಲಕ ಮೊದಲ ಬಾರಿಗೆ ಭಾರವಿ ನಿರ್ದೇಶನಕ್ಕೂ ಇಳಿಯಲಿದ್ದಾರೆ.

ಆದಿ ಶಂಕರಾಚಾರ್ಯರು ತುಂಬಾ ಪ್ರಭಾವಶಾಲಿ ವ್ಯಕ್ತಿಯಾಗಿದ್ದವರು. ಅವರ ಚಿತ್ರ ಜನರನ್ನು ಖಂಡಿತ ಆಕರ್ಷಿಸಲಿದೆ. ಈಗಾಗಲೇ ಸೂಪರ್ ಹಿಟ್ ಚಿತ್ರಗಳಲ್ಲಿ ಕೆಲಸ ಮಾಡಿ ಅನುಭವವಿರುವ ಭಾರವಿ ನಿರ್ದೇಶನ ಹಾಗೂ ತೆಲುಗು, ಕನ್ನಡದ ಪ್ರತಿಭಾವಂತರ ಸಂಗಮವಾಗಿರುವ ಆದಿ ಶಂಕರಾಚಾರ್ಯ ಚಿತ್ರವನ್ನು ನೋಡಲು ಜನರು ಮುಗಿ ಬೀಳುವುದು ಗ್ಯಾರಂಟಿ. ಚಿತ್ರ ಸೆಟ್ಟೇರುವ ಸುದ್ದಿಯೇ ಸಂತೋಷ ಮೂಡಿಸಿದೆ. (ಒನ್ ಇಂಡಿಯಾ ಕನ್ನಡ)

More from Filmibeat

English summary
Kannada superstar Upendra and King Nagarjuna are teaming up for the first time. The actors are coming together for a forthcoming Telugu movie Adi Shankaracharya.
 
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X