For Quick Alerts
  ALLOW NOTIFICATIONS  
  For Daily Alerts

  24 ವರ್ಷದ ನಟಿಯನ್ನ ವೇಶ್ಯಾವಾಟಿಕೆಯಿಂದ ಬಚಾವ್ ಮಾಡಿದ ಪೊಲೀಸರು

  By Bharath Kumar
  |

  ಅಮೇರಿಕಾದ ಹೈಟೆಕ್ ವೇಶ್ಯಾವಾಟಿಕೆಯಲ್ಲಿ ತೆಲುಗು ಚಿತ್ರರಂಗದ ಸ್ಟಾರ್ ನಟಿಯರು ಭಾಗಿಯಾಗಿದ್ದಾರೆ ಎಂಬ ಸ್ಫೋಟಕ ಸತ್ಯವನ್ನ ಯುಎಸ್ ಪೊಲೀಸರು ಬಹಿರಂಗಪಡಿಸಿದ್ದರು. ಈ ಪ್ರಕರಣದಲ್ಲಿ ಯಾರೆಲ್ಲಾ ಭಾಗಿಯಾಗಿದ್ದಾರೆ ಎಂದು ತನಿಖೆ ನಡೆಸುತ್ತಿರುವಾಗಲೇ ಮತ್ತೊಂದು ಹೈಟೆಕ್ ವೇಶ್ಯಾವಾಟಿಕೆ ಪ್ರಕರಣ ಹೈದ್ರಾಬಾದ್ ನಲ್ಲಿ ಬೆಳಕಿಗೆ ಬಂದಿದೆ.

  ಹೈದ್ರಾಬಾದ್ ನ ಬಂಜಾರ ಹಿಲ್ಸ್ ಹೋಟೆಲ್ ವೊಂದರಲ್ಲಿ ವೇಶ್ಯಾವಾಟಿಕೆ ನಡೆಸುತ್ತಿರುವ ಬಗ್ಗೆ ಮಾಹಿತಿ ಸಿಕ್ಕ ಪೊಲೀಸರು ಹೋಟೆಲ್ ಮೇಲೆ ದಾಳಿ ಮಾಡಿದ್ದರು. ಈ ವೇಳೆ 24 ವರ್ಷದ ಮುಂಬೈ ಮೂಲದ ಉದಯೋನ್ಮುಖ ನಟಿಯನ್ನ ಪೊಲೀಸರು ರಕ್ಷಿಸಿದ್ದು, ಮತ್ತೆ ಇಬ್ಬರನ್ನ ಬಂಧಿಸಿದ್ದಾರೆ ಎನ್ನಲಾಗಿದೆ. ಪೊಲೀಸರು ರಕ್ಷಿಸಿರುವ ಈ ನಟಿ ಮೂಲತಃ ಆಗ್ರಾದವರಾಗಿದ್ದು, ಡಬ್ಬಿಂಗ್ ಮಾಡಿಕೊಂಡಿದ್ದರು ಎನ್ನಲಾಗಿದೆ.

  ಭಾನುವಾರ ರಾತ್ರಿ ಈ ದಾಳಿ ನಡೆಸಿದ್ದು, ವೇಶ್ಯಾವಾಟಿಕೆ ನಡೆಸುತ್ತಿದ್ದ ಮಾಲೀಕ ಮತ್ತು ಸರ್ಕಾರಿ ನೌಕರರಾಗಿದ್ದ ಗ್ರಾಹಕನೊಬ್ಬನನ್ನ ವಶಕ್ಕೆ ತೆಗೆದುಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

  ಬಂಧಿತ ಆರೋಪಿ ಜನಾರ್ದನ್ ರಾವ್ ವೇಶ್ಯಾವಾಟಿಕೆ ದಂಧೆ ನಡೆಸುತ್ತಿದ್ದು, ಈ ಹಿಂದೆಯೂ ಕೂಡ ನಟಿಯನ್ನು ತನ್ನ ಬಣ್ಣದ ಮಾತಿನಿಂದ ಮರುಳು ಮಾಡಿ ಹೈದರಾಬಾದ್ ಸುತ್ತಮುತ್ತ ಮಾಂಸ ದಂಧೆಯಲ್ಲಿ ತೊಡಗಿಸಿದ್ದನು ಎಂಬುದು ಬೆಳಕಿಗೆ ಬಂದಿದೆ.

  ಇನ್ನು ಈ ಬಗ್ಗೆ ವಿಚಾರಣೆ ನಡೆಸಿರುವ ಪೊಲೀಸರು '' ಮುಂಬೈ ಅಥವಾ ಬೇರೆ ರಾಜ್ಯದಿಂದ ನವ ನಟಿಯರನ್ನ ವಾರಕ್ಕೆ 1 ಲಕ್ಷ ನೀಡುವುದಾಗಿ ಒಪ್ಪಂದ ಮಾಡಿಕೊಂಡು, ಕರೆಸಿಕೊಳ್ಳುತ್ತಿದ್ದ ಮತ್ತು ಗ್ರಾಹಕರ ಬಳಿ ಸುಮಾರು 20 ಸಾವಿರ ರೂಪಾಯಿಗಳಂತೆ ವಸೂಲಿ ಮಾಡುತ್ತಿದ್ದ'' ಎನ್ನಲಾಗಿದೆ.

  English summary
  Police have rescued a budding actress from Mumbai after busting a high-profile prostitution racket in a raid at a hotel in the posh Banjara Hills locality of Hyderabad.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X