»   » ಜೀ ಕನ್ನಡ ವಾಹಿನಿಯಲ್ಲಿ ದೀಪಾವಳಿ ಧಮಾಕಾ

ಜೀ ಕನ್ನಡ ವಾಹಿನಿಯಲ್ಲಿ ದೀಪಾವಳಿ ಧಮಾಕಾ

Subscribe to Filmibeat Kannada

ಖ್ಯಾತ ನಟ ವಿಷ್ಣುವರ್ಧನ್ ಹಾಗೂ ನಟಿ ಸುಹಾಸಿನಿ ನಟಿಸಿರುವ, ಖ್ಯಾತ ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಕರ್ ನಿರ್ದೇಶನದ ಸೂಪರ್ ಹಿಟ್ ಚಿತ್ರ 'ಮಾತಾಡ್ ಮಾತಾಡ್ ಮಲ್ಲಿಗೆ' ಜೀಕನ್ನಡದಲ್ಲಿ ಬೆಳಕಿನ ಹಬ್ಬ ದೀಪಾವಳಿ ಪ್ರಯುಕ್ತ 29 ಅಕ್ಟೋಬರ್‌ರಂದು ಬೆಳಿಗ್ಗೆ 12.30ಕ್ಕೆ ಕಿರುತೆರೆಯಲ್ಲಿ ಪ್ರಪ್ರಥಮವಾಗಿ ಪ್ರಸಾರವಾಗಲಿದೆ.

ದೀಪಾವಳಿ ಪ್ರಯುಕ್ತ ಜೀ ಕನ್ನಡವು ವಿಶೇಷ ಕಾರ್ಯಕ್ರಮಗಳನ್ನು ಪ್ರಸಾರಮಾಡುತ್ತಿದ್ದು ಭಾನುವಾರ 26ರಂದು ಸಂಜೆ 4.30ಕ್ಕೆ ಖ್ಯಾತ ನಿರ್ದೇಶಕ ಗಿರೀಶ್ ಕಾಸರವಳ್ಳಿ ನಿರ್ದೇಶನದ ಹಾಗೂ ಖ್ಯಾತ ತಾರೆ, ಚಲನಚಿತ್ರ ವಾಣಿಜ್ಯ ಮಂಡಳಿಯ ಅಧ್ಯಕ್ಷೆ ಡಾ.ಜಯಮಾಲಾ ನಟಿಸಿರುವ ರಾಷ್ಟ್ರ ಪ್ರಶಸ್ರಿ ವಿಜೇತ ಚಲನಚಿತ್ರ 'ತಾಯಿಸಾಹೇಬ' ಪ್ರಸಾರವಾಗುತ್ತಿದೆ. 27 ರಂದು ವಿಶೇಷ ಅನಿಮೇಟೆಡ್ ಸಿನೆಮಾ 'ಕೃಷ್ಣ' ಪ್ರಸಾರವಾಗಲಿದೆ.

ಇಷ್ಟೇ ಅಲ್ಲದೇ ಜೀ ಕನ್ನಡ ದೀಪಾವಳಿ ಹಬ್ಬದ ಪ್ರಯುಕ್ತ 25 ರಂದು ಸಂಜೆ 4.30ಕ್ಕೆ 'ಭೂಪತಿ', 27 ರಂದು ಬೆಳಿಗ್ಗೆ 10 ಗಂಟೆಗೆ 'ಸರಿಗಮಪ ನಡೆದು ಬಂದ ದಾರಿ' ವಿಶೇಷ ಕಾರ್ಯಕ್ರಮ. 12.30ಕ್ಕೆ ಚಲನಚಿತ್ರ 'ಸ್ನೇಹಾನಾ ಪ್ರೀತಿನಾ', ಮಧ್ಯಾಹ್ನ 2.30ಕ್ಕೆ ಅನಿಮೇಟೆಡ್ ಸಿನೆಮಾ 'ಕೃಷ್ಣ' ಹಾಗೂ 5.30ರಿಂದ 'ಹಾಗೆ ಸುಮ್ಮನೆ' ಧ್ವನಿಸುರುಳಿ ಬಿಡುಗಡೆ ಸಮಾರಂಭ ಪ್ರಸಾರವಾಗಲಿದೆ.

28ರಂದು ಮಂಗಳವಾರ ಮಧ್ಯಾಹ್ನ 3.30ರಿಂದ 'ಕುಣಿಯೋಣು ಬಾರಾ' ದೀಪಾವಳಿ ವಿಶೇಷ ಸಂಚಿಕೆ ಪ್ರಸಾರವಾಗಲಿದೆ. ಹಾಗೂ 28ರಂದು ಸಂಜೆ 4.30ಕ್ಕೆ ಬ್ಲಾಕ್ ಬಸ್ಟರ್ ಕಾಮೆಡಿ ಸಿನೆಮಾ ಮಿ.ಗರಗಸ ಪ್ರಸಾರವಾಗಲಿದೆ.

ಜೀ ಕನ್ನಡ ತನ್ನ ವಿಶೇಷ ಕಾರ್ಯಕ್ರಮಗಳಿಗಾಗಿ ಜನಮನ್ನಣೆ ಗಳಿಸಿದ್ದು ದೀಪಾವಳಿ ನಂತರದಲ್ಲಿ ಪ್ರಕಾಶ್ ಬೆಳವಾಡಿ ನಿರ್ದೇಶನದ ಧಾರಾವಾಹಿ 'ಇಲ್ಲಿರುವುದು ಸುಮ್ಮನೆ' ನವೆಂಬರ್3ರಿಂದ ರಾತ್ರಿ 8.30ಕ್ಕೆ ಪ್ರಸಾರವಾಗಲಿದೆ ಎಂದು ಜೀಕನ್ನಡ ಮುಖ್ಯಸ್ಥ ಅನುಪ್ ಚಂದ್ರಶೇಖರನ್ ತಿಳಿಸಿದ್ದಾರೆ.

(ದಟ್ಸ್ ಕನ್ನಡ ಕಿರುತೆರೆ)

ಇನ್ನೊಂದು ಕನ್ನಡ ಟಿವಿ 'ಸಮಯ'
ವಿಮರ್ಶೆ : ಮೂಗಿಗೇರಿದರೂ ನೆತ್ತಿಗೇರದ ಮಲ್ಲಿಗೆಯ ಘಮಲು

Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada