»   » ಚಲನಚಿತ್ರ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಕಂಡದ್ದು!

ಚಲನಚಿತ್ರ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಕಂಡದ್ದು!

Posted By: Super
Subscribe to Filmibeat Kannada

ಬಾಗಲಕೋಟೆ : ಇಲ್ಲಿನ ಜಿಲ್ಲಾ ಕ್ರೀಡಾಂಗಣದಲ್ಲಿ ಮಂಗಳವಾರ ರಾತ್ರಿ ಜನಜಾತ್ರೆ. ನೆಚ್ಚಿನ ತಾರೆಯರು ಪ್ರಶಸ್ತಿ ಪಡೆಯುವುದನ್ನು ನೋಡಲು ಪ್ರೇಕ್ಷಕರು ಅಪಾರ ಸಂಖ್ಯೆಯಲ್ಲಿ ನೆರೆದಿದ್ದರು.
ಆ ವರ್ಣರಂಜಿತ ಸಮಾರಂಭದಲ್ಲಿ 2005-06ನೇ ಸಾಲಿನ ರಾಜ್ಯ ಚಲನಚಿತ್ರ ಪ್ರಶಸ್ತಿಗಳನ್ನು ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ವಿತರಿಸಿದರು.

ಸಮಾರಂಭದ ತುಣುಕುಗಳು :

ಪರರಾಜ್ಯ ಮತ್ತು ವಿದೇಶಗಳಲ್ಲಿ ಚಿತ್ರೀಕರಣ ನಡೆಸುವ ಚಿತ್ರೋದ್ಯಮದ ಗಣ್ಯರನ್ನು ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ತರಾಟೆಗೆ ತೆಗೆದುಕೊಂಡರು. ಉತ್ತರ ಕರ್ನಾಟಕ ಸುಂದರ ತಾಣಗಳನ್ನು ಹಿಂದಿ ಚಿತ್ರರಂಗ ಬಳಸಿಕೊಳ್ಳುತ್ತಿದೆ. ಆದರೆ ನಮ್ಮ ನಿರ್ಮಾಪಕರು-ನಿರ್ದೇಶಕರಿಗೆ ಈ ತಾಣಗಳು ಕಾಣಿಸುತ್ತಿಲ್ಲವೇ ಎಂದು ಪ್ರಶ್ನಿಸಿದರು.
'ಜೋಗಿ' ಚಿತ್ರಕ್ಕಾಗಿ ಅತ್ಯುತ್ತಮ ನಿರ್ದೇಶಕ ಪ್ರಶಸ್ತಿ ಪಡೆಯುವಾಗ ವೇದಿಕೆ ಮೇಲೆ ಪ್ರೇಮ್‌ ಖುಷಿಯಲ್ಲಿದ್ದರು. ಖುಷಿಗೆ ಪ್ರಶಸ್ತಿ ಜೊತೆಗೆ, ಪ್ರೇಯಸಿ-ಭಾವಿ ಪತ್ನಿ ರಕ್ಷಿತಾ ಜೊತೆಯಲ್ಲಿದ್ದದ್ದು ಇನ್ನೊಂದು ಕಾರಣ.
ಮಠ ಚಿತ್ರದಲ್ಲಿ ಪೋಷಕ ನಟ ಪ್ರಶಸ್ತಿ ನೀಡಿದ್ದನ್ನು ವಿರೋಧಿಸಿ, ಜಗ್ಗೇಶ್‌ ಸಮಾರಂಭಕ್ಕೆ ಬರದೇ ಪ್ರತಿಭಟಿಸಿದರು!
ಪ್ರಶಸ್ತಿ ವಿಜೇತರಾದ ಬರಗೂರು ರಾಮಚಂದ್ರಪ್ಪ, ಅರುಂಧತಿ ನಾಗ್‌, ಗಾಯಕ ಸಿ.ಅಶ್ವಥ್‌ ಕಾರ್ಯಕ್ರಮಕ್ಕೆ ಬಂದಿರಲಿಲ್ಲ. ಕಾರಣ ಗೊತ್ತಾಗಲಿಲ್ಲ.
ಪ್ರಶಸ್ತಿ ಬಂದವರನ್ನು ಹೊರತು ಪಡಿಸಿ ಇತರೇ ಕಲಾವಿದರು ಸಮಾರಂಭದಲ್ಲಿರಲಿಲ್ಲ! ನಮ್ಮವರು ಸ್ಪರ್ಧಾ ಮನೋಭಾವ ಕಲಿಯುವುದು ಯಾವ ಕಾಲಕ್ಕೋ?
ರಾಜ್ಯಪ್ರಶಸ್ತಿ ಪಡೆದವರ ಪೂರ್ಣ ವಿವರಗಳಿಗಾಗಿ ಇಲ್ಲಿ ಕ್ಲಿಕ್ಕಿಸಿ.

(ದಟ್ಸ್‌ ಕನ್ನಡ ವಾರ್ತೆ)

English summary
2005-06 State film award function held at Bagalkot on 23rd January. Crazy Star Ravichandran, Jayanthi, Ramachandra received the awards from the chief minister of Karnataka H.D. Kumaraswamy.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada