»   » ಗೊತ್ತಾಗಿರುವ ಗಂಡಿಗೂ ಸಿನಿಮಾಗೂ ಯಾವುದೇ ಸಂಬಂಧವಿಲ್ಲ. ಮದುವೆ ಗೊತ್ತಾದ ಮೇಲೂ ಸೌಂದರ್ಯ ಚಿತ್ರ ಯಾನಕ್ಕೆ ಯಾವುದೇ ಅಡ್ಡಿಯಿಲ್ಲ. ಹೊಸ ಕಲಾತ್ಮಕ ಚಿತ್ರ ತೆಗೆಯುವ ಸಾಹಸ ಈಗಾಗಲೇ ಅವರ ಮನದಲ್ಲಿ ಸುಳಿದಾಡುತ್ತಿದೆ.

ಗೊತ್ತಾಗಿರುವ ಗಂಡಿಗೂ ಸಿನಿಮಾಗೂ ಯಾವುದೇ ಸಂಬಂಧವಿಲ್ಲ. ಮದುವೆ ಗೊತ್ತಾದ ಮೇಲೂ ಸೌಂದರ್ಯ ಚಿತ್ರ ಯಾನಕ್ಕೆ ಯಾವುದೇ ಅಡ್ಡಿಯಿಲ್ಲ. ಹೊಸ ಕಲಾತ್ಮಕ ಚಿತ್ರ ತೆಗೆಯುವ ಸಾಹಸ ಈಗಾಗಲೇ ಅವರ ಮನದಲ್ಲಿ ಸುಳಿದಾಡುತ್ತಿದೆ.

Posted By:
Subscribe to Filmibeat Kannada

*ಶರಣ್ಯ, ನವದೆಹಲಿ

‘ಇದೇ ವರ್ಷ ಜೂನ್‌ ತಿಂಗಳಲ್ಲಿ ನಮ್ಮ ರಿಲೇಟಿವೇ ಆದ ಒಬ್ಬ ಬಿಜಿನೆಸ್‌ಮನ್‌ ಜೊತೆ ನನ್ನ ಮದುವೆ’
- ಹೀಗೆ ಹೇಳುವ ಮೂಲಕ ಸೌಂದರ್ಯ ತಮ್ಮ ಮದುವೆ ಬಗೆಗೆ ಇದ್ದ ಗುಲ್ಲುಗಳನ್ನೆಲ್ಲ ಮಟಾಷ್‌ ಮಾಡಿಬಿಟ್ಟರು.

ಮೊನ್ನೆ ತಾನೆ ದೆಹಲಿಯಲ್ಲಿ ರಾಷ್ಟ್ರೀಯ ಪ್ರಶಸ್ತಿ ಪಡೆದಾಗ ಒಂದು ಹಿಡಿ ಪತ್ರಕರ್ತರ ಮುಂದೆ ಸೌಂದರ್ಯ ಈ ಗುಟ್ಟು ಬಿಚ್ಚಿಟ್ಟರು. ದ್ವೀಪ ಚಿತ್ರದ ನಿರ್ಮಾಣಕ್ಕೆ ಪ್ರಶಸ್ತಿ ಬಾಚಿಕೊಂಡ ಸೌಂದರ್ಯಗೆ ಶೋಭನಾ ಮತ್ತು ತಬು ಫೈಟ್‌ ಕೊಟ್ಟಿದ್ದರಿಂದ ಕೂದಲೆಳೆಯಲ್ಲಿ ಉತ್ತಮ ನಟಿಯಾಗಿ ರಾಷ್ಟ್ರೀಯ ಪ್ರಶಸ್ತಿ ಮಿಸ್‌ ಆಯಿತು. ಹಾಗಂತ ಖುದ್ದು ಸೌಂದರ್ಯ ಹೇಳಿಕೊಂಡರು.

ಸದ್ಯಕ್ಕೆ ಮೋಹನ್‌ಲಾಲ್‌ ಜೊತೆ ‘ಕೋಚು ಕಿಲಿಚುಂದನ್‌ ಮಾಂಬಳಂ’ ಎಂಬ ಮಲೆಯಾಳಿ ಚಿತ್ರದ ಶೂಟಿಂಗಲ್ಲಿ ಬಿಜಿಯಾಗಿರುವ ಸೌಂದರ್ಯ ನಟಿಸುವುದನ್ನು ಸದ್ಯಕ್ಕೆ ಬಿಡುವುದಿಲ್ಲವಂತೆ. ವಿಜಯದಶಮಿ ಮತ್ತು ರೇಣುಕಾಂಬ ಎಂಬ ಕನ್ನಡ ಚಿತ್ರಗಳು ಪೈಪ್‌ಲೈನಲ್ಲಿವೆ. ಇನ್ನಷ್ಟು ಆಫರುಗಳು ಹರಿದು ಬರುತ್ತಿದ್ದರೂ, ಅವನ್ನು ತಣ್ಣಗೆ ನಿರಾಕರಿಸುತ್ತಿರುವ ಸೌಂದರ್ಯ ಇನ್ನೊಂದು ಕಲಾತ್ಮಕ ಚಿತ್ರ ನಿರ್ಮಿಸುವ ಯೋಚನೆಯಲ್ಲಿದ್ದಾರೆ. ಅದರಲ್ಲಿ ಸಾಕಷ್ಟು ಪ್ರಶಸ್ತಿ ದೋಚುವ ಆತ್ಮವಿಶ್ವಾಸ ಈಗಲೇ ಅವರಲ್ಲಿದೆ.

ಅಂದಹಾಗೆ, ಸೌಂದರ್ಯ ಮದುವೆಯಾಗಲಿರುವ ಗಂಡು ಬೆಂಗಳೂರಿನವರು. ಹೆಸರೇನಂತ ಕೇಳಿದರೆ, ‘ಅವರು ಸ್ವಂತ ಬಿಜಿನೆಸ್‌ ಮಾಡುತ್ತಿದ್ದಾರೆ. ಹೆಸರು ಸಸ್ಪೆನ್ಸ್‌’ ಎಂದು ಸೌಂದರ್ಯ ನಕ್ಕರು.

Post your views

ದ್ವೀಪ ಸೌಂದರ್ಯ
‘ದ್ವೀಪ’ದ ಬೆಳಕಲ್ಲಿ ಸೌಂದರ್ಯ ಲಹರಿ
ಮುಳುಗಡೆಯ ಆತಂಕದಲ್ಲಿ ಅರಳುವ ಬದುಕು

ಮುಖಪುಟ / ಸ್ಯಾಂಡಲ್‌ವುಡ್‌

Kannada Photos

Go to : More Photos

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X