For Quick Alerts
  ALLOW NOTIFICATIONS  
  For Daily Alerts

  ಗಾಯಕಿ ಬಿ.ಕೆ.ಸುಮಿತ್ರ ಮಗ ಮೊನ್ನೆ ಮೊನ್ನೆ ಬಾಲ ನಟನಾಗಿದ್ದ ಅಂದುಕೊಳ್ಳುತ್ತಿರುವವರಿಗೆಲ್ಲ ಶಾಕ್‌. ದೀಪ್ತಿ ನವಾಲ್‌ರಂಥಾ ಹಿರಿಯ ನಟಿಯ ಜೋಡಿಯಾಗಿ ಸುನಿಲ್‌ ಇಂಗ್ಲಿಷ್‌ ಚಿತ್ರದಲ್ಲಿ ನಟಿಸಿರುವುದು ನಿಮಗೆ ಗೊತ್ತೆ?

  By Staff
  |

  ಮುಖಪುಟ --> ಸ್ಯಾಂಡಲ್‌ವುಡ್‌ --> ನಾಯಕ ನಾನೇ --> ಲೇಖನಫೆಬ್ರವರಿ 24, 2003ಚಿತ್ರದ ಹೆಸರು ‘ಫ್ರೀಕಿ ಚಕ್ರ’. ವಿ.ಕೆ.ಪ್ರಕಾಶ್‌ ಎಂಬಾತ ಇದರ ನಿರ್ದೇಶಕ. ‘ಥೋಡಾ ಸಾ ಆಸ್ಮಾನ್‌’ ಧಾರಾವಾಹಿಯಲ್ಲಿ ಆಧುನಿಕ ಹೆಂಗಸಿನ ಪಾತ್ರದಲ್ಲಿ ಮಿಂಚಿದ್ದ ದೀಪ್ತಿ ನವಾಲ್‌ ನಾಯಕಿ.

  ಕತೆ ಕೇಳಿ- ನಲವತ್ತು ವಯಸ್ಸಿನ ದೀಪ್ತಿ ನವಾಲ್‌ ಮನೆಗೆ ಇಪ್ಪತ್ತು ಪ್ಲಸ್‌ ವಯಸ್ಸಿನ ಸುನಿಲ್‌ ಪೇಯಿಂಗ್‌ ಗೆಸ್ಟಾಗಿ ಬರುತ್ತಾನೆ. ಒಂಟಿ ದೀಪ್ತಿಗೆ ಈತ ಒಳ್ಳೆಯ ಗೆಳೆಯನಾಗುತ್ತಾನೆ. ಬೆಳಗಿನ ಟೀಯಿಂದ ನಡುರಾತ್ರಿಯ ಕಾಫಿತನಕ ಹರಟೆ ಸಾಗುತ್ತದೆ. ಮಟ ಮಟ ಮಧ್ಯಾಹ್ನ ಚೆಸ್‌ ಆಡುತ್ತಾ ನಿರುಮ್ಮಳ ಕೂರುತ್ತಾರೆ. ಸಲಿಗೆ ಪ್ರೀತಿಗೆ ತಿರುಗುತ್ತದೆ. ಪ್ರೀತಿ, ಆಫ್‌ಕೋರ್ಸ್‌ ಸೆಕ್ಸಿಗೆ ವೇದಿಕೆಯಾಗುತ್ತದೆ. ಮಿಕ್ಕಿದ್ದನ್ನು ಪ್ರೇಕ್ಷಕ ಪ್ರಭು ಚಿತ್ರಮಂದಿರಕ್ಕೆ ಹೋಗಿಯೇ ನೋಡಬೇಕು. ಸೆನ್ಸಾರ್‌ ಕತ್ತರಿಗೆ ಕೆಲವು ದೃಶ್ಯಗಳು ಸಿಕ್ಕಿದ ನಂತರ ತೆರೆ ಕಂಡಿರು ‘ಫ್ರೀಕಿ ಚಕ್ರ’ ಆಧುನಿಕ ಸಂವೇದನೆಯ ಸರಕು.

  ಕೆಲವರು ಚಿತ್ರವನ್ನು ಯಥಾ ಪ್ರಕಾರ ಟೀಕಿಸಿದ್ದಾರೆ. ಸೆನ್ಸಾರ್‌ನವರ ಹುಚ್ಚು ಕತ್ತರಿ ಪ್ರಯೋಗಕ್ಕೆ ದೀಪ್ತಿಗೆ ಕೋಪ ಬಂದಿದೆ. ಕೊನೆಗೆ, ಸುನಿಲ್‌ಗೆ ಇವೆಲ್ಲವೂ ವರದಾನವಾಗಿದೆ. ‘ಫ್ರೀಕಿ’ಯಿಂದ ಸುನಿಲ್‌ಗೆ ಬೇಡಿಕೆ ಕುದುರಿದೆ. ನಿರ್ಮಾಪಕರು ಈತನ ಕಾಲ್‌ಷೀಟಿಗೆ ಫೋನಾಯಿಸುವ ಗತಿ ಈಗ ಸಾಕಷ್ಟು ಹೆಚ್ಚಾಗಿದೆ.

  ಅಂದಹಾಗೆ, ಕ್ಯಾಲಿಫೋರ್ನಿಯಾದ ರಾಮ್‌ ಪ್ರಸಾದ್‌ ಹಾಗೂ ಗೆಳೆಯರು ನಿರ್ಮಿಸಿರುವ ಕವಿತಾ ಲಂಕೇಶ್‌ ನಿರ್ದೇಶನದ ‘ಪ್ರೀತಿ ಪ್ರೇಮ ಪ್ರಣಯ’ದ ಮುಖ್ಯ ತಾರಾ ಬಳಗದಲ್ಲಿ ಸುನಿಲ್‌ ಕೂಡ ಪ್ರಮುಖ ಸದಸ್ಯ. ಸುನಿಲ್‌ ಇನ್ನಷ್ಟು ಪ್ರವರ್ಧಮಾನಕ್ಕೆ ಬರಲಿ.

  Post your views

  ಮುಖಪುಟ / ಸ್ಯಾಂಡಲ್‌ವುಡ್‌

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X