»   » ಪ್ರೇಮಾಗೀಗ ಮದುವೆ ಸಮಯ!

ಪ್ರೇಮಾಗೀಗ ಮದುವೆ ಸಮಯ!

Subscribe to Filmibeat Kannada
  • ದಟ್ಸ್‌ಕನ್ನಡ ಸಿನಿಡೆಸ್ಕ್‌
ಪತ್ರಕರ್ತರದು ಒಂದೇ ಪ್ರಶ್ನೆ; ಪ್ರೇಮಾ ನಿಮ್ಮ ಮದುವೆ ಯಾವಾಗ? -ಈ ಪ್ರಶ್ನೆಯಿಂದ ಬೇಸತ್ತವರಂತೆ ತಮ್ಮ ನಿಶ್ಚಿತಾರ್ಥದ ಮೂಲಕ ನಟಿ ಪ್ರೇಮಾ, ಈಗ ಉತ್ತರ ನೀಡಿದ್ದಾರೆ.

ಹೌದು ಅಂದಗಾತಿ, ನೀಳ ಚೆಲುವೆ(ನಟ ರಮೇಶ್‌ ಗೇಲಿ ಮಾಡುವಂತೆ ‘ಪಿವಿಸಿ ಪೈಪ್‌ ಪ್ರೇಮಾ’), ಪ್ರೇಮಾ ಅಂತುಇಂತೂ ಸಿಹಿಸುದ್ದಿ ನೀಡಿದ್ದಾರೆ. ಅವರ ಮದುವೆ ಫಿಕ್ಸ್‌ ಆಗಿದೆ. ಅವರ ಅಭಿಮಾನಿಗಳಿಗೆ ಖುಷಿಯಾಗಿದೆ!

ಈ ನಿಟ್ಟಿನಲ್ಲಿ ಪ್ರೇಮಾ ನಿಶ್ಚಿತಾರ್ಥ ಸಮಾರಂಭ, ಬೆಂಗಳೂರಿನ ವಸಂತ ನಗರದಲ್ಲಿರುವ ಕೊಡವ ಸಮಾಜದಲ್ಲಿ ಗುರುವಾರ ಸದ್ದಿಲ್ಲದೆ ನೆರವೇರಿತು. ಇದೇ ಸಮಾಜದಲ್ಲಿ ಜುಲೈ 5-6ರಂದು ಪ್ರೇಮಾ ಅವರ ಮದುವೆ ನಡೆಯಲಿದೆ.

ಈ ಕೊಡವಿಯನ್ನು ಕೈಹಿಡಿಯುತ್ತಿರುವವ ಕೊಡಗಿನ ವೀರನ ಹೆಸರು ಜೀವನ್‌ ಅಪ್ಪಚ್ಚು. ಬೆಂಗಳೂರಿನ ಸಾಫ್ಟ್‌ವೇರ್‌ ಸಂಸ್ಥೆಯಲ್ಲಿ ಉದ್ಯೋಗಿ. ಈತ ಸಹಾ ಕನ್ನಡದವನೇ ಆಗಿರುವುದರಿಂದ ‘ನಮ್ಮೂರ ಮಂದಾರ ಹೂವು’ ನಮ್ಮೂರಲ್ಲಿಯೇ ಉಳಿಯಲಿದೆ.

ಶಿವರಾಜ್‌ ಕುಮಾರ್‌ ಅಭಿನಯದ ‘ಸವ್ಯಸಾಚಿ’ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಹೆಜ್ಜೆಯಿಟ್ಟ ಪ್ರೇಮಾ, ಮನೆಮಗಳಾಗಿ ಚಿತ್ರರಂಗದಲ್ಲಿ ಗಮನಸೆಳೆದವರು. ನಮ್ಮೂರ ಮಂದಾರ ಹೂವೇ, ಯಜಮಾನ, ಕನಸುಗಾರ, ಆಪ್ತಮಿತ್ರ ಸೇರಿದಂತೆ ವಿವಿಧ ಚಿತ್ರಗಳಲ್ಲಿ ವೈವಿಧ್ಯಮಯ ಪಾತ್ರಗಳ ಮೂಲಕ ಪ್ರೇಕ್ಷಕರ ಮನ ಸೆಳೆದಿದ್ದಾರೆ.

ಇತ್ತೀಚೆಗಷ್ಟೇ ಅವರು ನಟಿಸಿರುವ ‘ಪಾಂಡು ರಂಗ ವಿಠಲ’ ಬಾಕ್ಸಾಫೀಸ್‌ನಲ್ಲಿ ಗೆದ್ದಿದ್ದು, ಅವರ ಹೊಸ ಚಿತ್ರ‘ಏಕದಂತ’ದ ಚಿತ್ರೀಕರಣ ನಡೆಯುತ್ತಿದೆ. ಪ್ರೇಮಾರ ದಾಂಪತ್ಯದುದ್ದಕ್ಕೂಪ್ರೇಮ ಪಸರಿಸಲಿ ಎಂಬುದು ದಟ್ಸ್‌ಕನ್ನಡದ ಹಾರೈಕೆ.

Post your views

ಮುಖಪುಟ / ಸ್ಯಾಂಡಲ್‌ವುಡ್‌

Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada