»   » ಅಮೆರಿಕನ್ನರು ತಮ್ಮ ವ್ಯಾಪಾರಿ ಅನುಕೂಲಕ್ಕೆ ಕೊಡುವ ಆಸ್ಕರ್‌ನ ವಿದೇಶೀ ವರ್ಗದ ಪ್ರಶಸ್ತಿ ಬೇಕಿಲ್ಲ. ಅಮೆರಿಕನ್‌ ಚಿತ್ರಗಳ ಜೊತೆಯಲ್ಲೇ ಪೋಟಿ ಮಾಡಿ, ಪ್ರಶಸ್ತಿ ಪಡೆಯುವುದು ನನ್ನ ಕನಸು ಎನ್ನುತ್ತಾರೆ ಕಮಲ ಹಾಸನ್‌.

ಅಮೆರಿಕನ್ನರು ತಮ್ಮ ವ್ಯಾಪಾರಿ ಅನುಕೂಲಕ್ಕೆ ಕೊಡುವ ಆಸ್ಕರ್‌ನ ವಿದೇಶೀ ವರ್ಗದ ಪ್ರಶಸ್ತಿ ಬೇಕಿಲ್ಲ. ಅಮೆರಿಕನ್‌ ಚಿತ್ರಗಳ ಜೊತೆಯಲ್ಲೇ ಪೋಟಿ ಮಾಡಿ, ಪ್ರಶಸ್ತಿ ಪಡೆಯುವುದು ನನ್ನ ಕನಸು ಎನ್ನುತ್ತಾರೆ ಕಮಲ ಹಾಸನ್‌.

Posted By:
Subscribe to Filmibeat Kannada

‘ವಿದೇಶೀ ಚಿತ್ರಗಳ ವಿಭಾಗದಲ್ಲಿ ಆಸ್ಕರ್‌ ಪ್ರಶಸ್ತಿ ಪಡೆಯುವುದು ನನಗಿಷ್ಟವಿಲ್ಲ. ಅಮೆರಿಕ ಚಿತ್ರಗಳ ಜೊತೆಯಲ್ಲೇ, ಅದೇ ವಿಭಾಗದಲ್ಲಿ ಸ್ಪರ್ಧಿಸಿ ಆಸ್ಕರ್‌ ಪಡೆಯುವುದು ನನ್ನ ಕನಸು’- ಹೀಗೆ ಹೇಳುವಾಗ ಕಮಲ್‌ ಕಣ್ಣಲ್ಲಿ ಆತ್ಮವಿಶ್ವಾಸ ಹಾಗೂ ಉತ್ಸಾಹ ತುಂಬಿ ತುಳುಕುತ್ತಿತ್ತು.

ಟೀವಿ ಚಾನೆಲ್‌ ಸಂದರ್ಶನವೊಂದರಲ್ಲಿ ಕಮಲ್‌ ಆಸ್ಕರ್‌ ಬಗ್ಗೆ ಪುಟ್ಟ ಭಾಷಣವನ್ನೇ ಹೊಡೆದರು. ಅದರ ತಿರುಳು ಹೀಗಿದೆ...
ಹಾಗೆ ನೋಡಿದರೆ ಆಸ್ಕರ್‌ ಪ್ರಶಸ್ತಿ ತೃಣ ಮಾತ್ರ. ಅಮೆರಿಕನ್ನರು ತಮ್ಮ ವ್ಯಾಪಾರಿ ಅನುಕೂಲಕ್ಕೆ ಕೊಡುವ ಈ ಪ್ರಶಸ್ತಿಗಳಲ್ಲಿ ವಿದೇಶೀ ವಿಭಾಗದ ಚಿತ್ರಗಳ ಪೈಕಿ ಪ್ರಶಸ್ತಿ ಪಡೆಯುವುದು ನಮ್ಮ ಚಿತ್ರಗಳಿಗೆ ಸಲ್ಲುವ ತಕ್ಕ ಗೌರವ ಅಲ್ಲವೇ ಅಲ್ಲ. ತಮ್ಮ ಚಿತ್ರಗಳ ವರ್ಗದಲ್ಲೇ ವಿದೇಶೀ ಚಿತ್ರಗಳನ್ನೂ ಅವರು ಪರಿಗಣಿಸಿ, ಪ್ರಶಸ್ತಿ ಕೊಡಲಿ. ಆಗ ಆಸ್ಕರ್‌ ಪ್ರಶಸ್ತಿಯನ್ನು ನಾನು ಮೆಚ್ಚುತ್ತೇನೆ.

ಈವರೆಗೆ ನನ್ನ ಏಳು ಚಿತ್ರಗಳು ಭಾರತದಿಂದ ಆಸ್ಕರ್‌ ಪ್ರಶಸ್ತಿಗೆ ನಾಮಿನೇಟ್‌ ಆಗಿವೆ. ಆದರೆ, ವಾಸ್ತವದಲ್ಲಿ ನನಗೆ ಆಸ್ಕರ್‌ ಸಿಕ್ಕಿಯಾಗಿದೆ. ನಮ್ಮ ರಾಷ್ಟ್ರ ಪ್ರಶಸ್ತಿಯೇ ನನ್ನ ಪಾಲಿಗೆ ಆಸ್ಕರ್‌. ಅದನ್ನು ನಾನು ಯಾವತ್ತೋ ಪಡೆದಿದ್ದೇನೆ.

(ಇನ್ಫೋ ವಾರ್ತೆ)

Post your views

ಮುಖಪುಟ / ಸ್ಯಾಂಡಲ್‌ವುಡ್‌

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada