»   » ಬಾಲಿವುಡ್‌ತಾರೆ... ಬಳ್ಳಾರಿಗೆ ಬರ್ತಾರೆ?

ಬಾಲಿವುಡ್‌ತಾರೆ... ಬಳ್ಳಾರಿಗೆ ಬರ್ತಾರೆ?

Posted By: Super
Subscribe to Filmibeat Kannada
Hemamalini
ಮನೆತನದ ಮಗಳು ಪ್ರಿಯಾಂಕಾಳನ್ನು ಬಳ್ಳಾರಿಗೆ ಕರೆತರಲು ರಾಜ್ಯ ಕಾಂಗ್ರೆಸಿಗರು ದಿಲ್ಲಿಯಲ್ಲಿ ವರಿಷ್ಠರಿಗೆ ದುಂಬಾಲು ಬಿದ್ದಿದ್ದಾರೆ. ಈ ಸುದ್ದಿ ತಿಳಿದ ಕರ್ನಾಟಕ ಬಿಜೆಪಿ ನಾಯಕರ ಪಡೆ ಮುಂಬಯಿಯ ಬಾಲಿವುಡ್‌ ತಾರೆಯರತ್ತ ಕಣ್ಣು ಹಾಯಿಸಿದ್ದಾರೆ.

ಕರ್ನಾಟಕದ ಯಾವುದೇ ಕ್ಷೇತ್ರದಿಂದ ಪ್ರಿಯಾಂಕಾ ಸ್ಪರ್ಧಿಸಿದರೂ ಅವರ ವಿರುದ್ಧ ಕರಾವಳಿ ಹುಡುಗಿ ಐಶ್ವರ್ಯಳನ್ನು ಕಣಕ್ಕಿಳಿಸಲು ಪ್ರಯತ್ನಗಳು ಭರದಿಂದ ಸಾಗಿದೆ. ಅಕಸ್ಮಾತ್‌ ಆಕೆ ಒಪ್ಪದಿದ್ದಲ್ಲಿ ಕಳೆದ ಬಾರಿ ಸುಶ್ಮಾ ಸ್ವರಾಜ್‌ ಪರ ಇಲ್ಲಿ ತನ್ನ ಚರಿಶ್ಮಾ ಪ್ರಯೋಗಿಸಿದ ವಿಜಯಶಾಂತಿಯನ್ನು ಕರೆತಂದು ನಿಲ್ಲಿಸುವ ಸಾಧ್ಯತೆ ಇದೆ. ಸುಶ್ಮಾ ಸೋತರೂ ವಿಜಯಶಾಂತಿ ಕಳೆದ ಚುನಾವಣೆಯಿಂದಾಗಿ ಇಲ್ಲಿ ಜನಪ್ರಿಯ.

ಇನ್ನೊಂದು ಪ್ರಯತ್ನವೆಂದರೆ ಹಿಂದಿಯ ಹೇಮಮಾಲಿನಿಯನ್ನು ಅಖಾಡಕ್ಕೆ ಇಳಿಸುವ ಯತ್ನ. ಆಕೆ ಅಂದಕಾಲತ್ತಿಲ್‌ ಜನಗಳ ಮನಸೂರೆಗೊಂಡ ನೃತ್ಯಗಾತಿ. ಈಗಲೂ ಕನಸಿನಕನ್ಯೆಯಾಗಿಯೇ ಉಳಿದಿರುವ ಹೇಮಾಮಾಲಿನಿ ಬಳ್ಳಾರಿಗೆ ಬರುವರೇ?

ಆದರೆ ವಾಸ್ತವಾಂಶದಲ್ಲಿ ಇನ್ನೂ ಕಾಂಗೈ ಹೊರತು ಪಡಿಸಿ ಬೇರೆ ಪಕ್ಷಗಳ ಇರುವಿಕೆಯೆ ಗೊತ್ತಿಲ್ಲದ ಮುಗ್ದ ಜನರೇ ಹೆಚ್ಚು. ಇಂದಿರಾ ಗಾಂಧಿಯೇ ಚುನಾವಣೆ ಎದುರಿಸುತ್ತಿದ್ದಾರೆ ಎಂದೇ ನಂಬುತ್ತಿರುವ ಈ ಅನಕ್ಷರಸ್ಥ ಬಹುಮಂದಿಗೆ ಐಶ್‌, ಹೇಮಾ, ಶಾಂತಿ ಗೊತ್ತಾ ? ಆದರೆ ಸದ್ಯಕ್ಕಂತೂ ನಮ್ಮ 'ಸ್ಯಾಂಡಲ್‌ವುಡ್‌" ತಾರೆಯರ ಹೆಸರು ಡಮ್ಮಿಯಾಗಿಯೂ ಕೇಳಿಬರುತ್ತಿಲ್ಲ.

English summary
State BJP tries to woo bollywood actress to contest from Bellary constituency

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada