»   » ‘ಲವ್‌’ಗೆ ರೆಹಮಾನ್‌ ರಾಗಯೋಗ

‘ಲವ್‌’ಗೆ ರೆಹಮಾನ್‌ ರಾಗಯೋಗ

Posted By: Staff
Subscribe to Filmibeat Kannada
A.R.Rehaman
ಖ್ಯಾತ ನಿರ್ದೇಶಕ ರಾಜೇಂದ್ರ ಸಿಂಗ್‌ ಬಾಬು ಏನೇ ಮಾಡಿಯಾದರೂ ತಮ್ಮ ಮಗ ಆದಿತ್ಯನ ಮೊದಲ ಚಿತ್ರವಾದ 'ಲವ್‌"ನ್ನೂ ಗೆಲ್ಲಿಸಲೇಬೇಕೆಂದು ಪಣ ತೊಟ್ಟಂತಿದೆ. ಅಂತೆಯೇ ತಮ್ಮ ಬತ್ತಳಿಕೆಯಲ್ಲಿರುವ ಎಲ್ಲ ಬಾಣಗಳನ್ನೂ ಪ್ರಯೋಗಿಸುತ್ತಿದ್ದಾರೆ. ಈಗ ಅವರಿಗೆ ಎ.ಆರ್‌.ರೆಹಮಾನ್‌ ಎಂಬ ಬ್ರಹ್ಮಾಸ್ತ ್ರ ದೊರೆತಿದೆ. ತಮ್ಮ ಚಿತ್ರದ ಹಾಡುಗಳನ್ನು ಏರ್‌ಟೆಲ್‌ಗೆ ರಿಂಗ್‌ ಟೋನ್‌ಗಳಿಗಾಗಿ ನೀಡಿರುವ ಬಾಬು ಅವರು ಈಗ ಏರ್‌ಟೆಲ್‌ನ ಒಂದು ರಾಗವನ್ನು ತಮ್ಮ ಚಿತ್ರಕ್ಕೆ ಬಳಸುತ್ತಿದ್ದಾರೆ.

ಸದಾ ಇನ್ನೋವೇಟಿವ್‌ ಆಗಿರುವ ಬಾಬು ಈ ಬಾರಿಯೂ ಕನ್ನಡ ಚಿತ್ರ ಪ್ರೇಮಿಗಳಿಗೆ ಸಂತಸದ ಸಂಗೀತದೌತಣ ಬಡಿಸಲಿದ್ದಾರೆ. ಎ.ಆರ್‌. ರೆಹಮಾನ್‌ ಅವರು ಏರ್‌ಟೆಲ್‌ಗಾಗಿ ಸಂಯೋಜಿಸಿರುವ ಕೆಲವು ರಾಗಗಳಲ್ಲಿ ಒಂದನ್ನು ತಮ್ಮ ಚಿತ್ರದಲ್ಲಿ ಬಳಸಲು ಅನುಮತಿ ಪಡೆದಿದ್ದಾರೆ. ರೆಹಮಾನ್‌ ರಾಗ, ಕೆ. ಕಲ್ಯಾಣ್‌ ಸಾಹಿತ್ಯ ಪ್ರೇಕ್ಷಕರಿಗೆ ರಸದೌತಣವಾಗದೇನು?

ಈ ಚಿತ್ರದ ಇತರ ಹಾಡುಗಳಿಗೆ ಸಂಗೀತ ನೀಡಿರುವವರು ಅನುಮಲ್ಲಿಕ್‌. ಹಾಗೆಯೇ ಈ ಚಿತ್ರದ ವಿಶೇಷ ಪಾತ್ರವೊಂದರಲ್ಲಿ ಮಲಯಾಳಂನ ಖ್ಯಾತ ನಟ ಮೋಹನ್‌ಲಾಲ್‌, ಬಾಲಿವುಡ್‌ನ ಜನಪ್ರಿಯ ಖಳ ನಾಯಕ ಅಮರೀಷ್‌ ಪುರಿ ಕೂಡ ಅಭಿನಯಿಸಿದ್ದಾರೆ.

English summary
A tune from A.R.Rehaman to Kannada movie 'Love'
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada