»   » ದಿಢೀರ್‌ ತಯಾರಾದ ‘ಹಠವಾದಿ’ ಇಂದು ಬೆಳ್ಳಿತೆರೆಗೆ

ದಿಢೀರ್‌ ತಯಾರಾದ ‘ಹಠವಾದಿ’ ಇಂದು ಬೆಳ್ಳಿತೆರೆಗೆ

Posted By:
Subscribe to Filmibeat Kannada


ಶಂಕರ್‌ ಮಹಾದೇವನ್‌ ಬ್ರೆಥ್‌ಲೆಸ್‌ ಗೀತೆ... ಚಿತ್ರದ ಹೈಲೈಟ್‌. ಹಠವಾದಿ ತರುಣನಾಗಿ ಕಾಣಿಸಿಕೊಂಡಿರುವ ರವಿಚಂದ್ರನ್‌, ನಟಿ ರಾಧಿಕಾ ಅವರಿಂದ ದ್ವಿಪಾತ್ರ ಮಾಡಿಸಿದ್ದಾರೆ.

ಸ್ಯಾಂಡಲ್‌ವುಡ್‌ನ ಕನಸು ಮಾರುವ ಹುಡುಗ ರವಿಚಂದ್ರನ್‌ ಅಭಿನಯದ ‘ಹಠವಾದಿ’ ಚಿತ್ರ ಶುಕ್ರವಾರ(ಮಾರ್ಚ್‌ 24) ರಾಜ್ಯಾದ್ಯಂತ ತೆರೆಕಂಡಿದ್ದು, ಪ್ರತಿ ದಿನ ಒಟ್ಟು 175 ಆಟ ಪ್ರದರ್ಶನಗೊಳ್ಳಲಿವೆ.

ಸಂದೇಶ್‌ ನಾಗರಾಜ್‌ ನಿರ್ಮಾಣದ ಈ ಚಿತ್ರ ಸದ್ದುಗದ್ದಲವಿಲ್ಲದೆ ಚಿತ್ರೀಕರಣ ಮುಗಿಸಿ, ತ್ವರಿತವಾಗಿ ತೆರೆಕಂಡಿರುವುದು ವಿಶೇಷವಾಗಿದೆ. ರವಿಚಂದ್ರನ್‌, ನಿರ್ದೇಶನದ ಜೊತೆಗೆ ಕಥೆ-ಚಿತ್ರಕಥೆ, ಗೀತೆ, ಸಂಭಾಷಣೆ ಬರೆದಿದ್ದು, ಸಂಗೀತವನ್ನೂ ನೀಡಿದ್ದಾರೆ. ಮತ್ತೂ ವಿಶೇಷವೆಂದರೆ ಸಂಕಲನವನ್ನೂ ತಾವೇ ನಿಭಾಯಿಸಿದ್ದಾರೆ.

ಚಿತ್ರದಲ್ಲಿ ಒಟ್ಟು ಎಂಟು ಹಾಡುಗಳಿದ್ದು, ಅವೆಲ್ಲ ಈಗಾಗಲೇ ಜನಪ್ರಿಯವಾಗಿರುವುದರಿಂದ ಪ್ರೇಕ್ಷಕರು ಥಿಯೇಟರುಗಳತ್ತ ಬರಬಹುದು ಎಂಬ ಆಸೆ ಮೂಡಿದೆ. ‘ಹಠವಾದಿ’ ತರುಣನಾಗಿ ಕಾಣಿಸಿಕೊಂಡಿರುವ ರವಿಚಂದ್ರನ್‌, ನಟಿ ರಾಧಿಕಾ ಅವರಿಂದ ದ್ವಿಪಾತ್ರ ಮಾಡಿಸಿದ್ದಾರೆ.

ಚಿತ್ರದಲ್ಲಿ ತಾಯಿಯ ಸೆಂಟಿಮೆಂಟ್‌ ಕೂಡ ಇದ್ದು, ಗಾಯಕ ಶಂಕರ್‌ ಮಹಾದೇವನ್‌ ಅವರಿಂದ ಬ್ರೆಥ್‌ಲೆಸ್‌(ಉಸಿರುಬಿಡದ) ಗೀತೆಯಾಂದನ್ನು ಹಾಡಿಸಿದ್ದಾರೆ. ಎಂದಿನಂತೆ ತಮ್ಮ ನೆಚ್ಚಿನ ಛಾಯಾಗ್ರಾಹಕ ಜಿ.ಎಸ್‌.ವಿ.ಸೀತಾರಾಂ ಅವರಿಂದಲೇ ಛಾಯಾಗ್ರಹಣ ಮಾಡಿಸಿದ್ದಾರೆ.

ಉಳಿದಂತೆ ತಾರಾಗಣದಲ್ಲಿ ದೊಡ್ಡಣ್ಣ, ಮುಖ್ಯಮಂತ್ರಿ ಚಂದ್ರು, ‘ಮೂಡಲಮನೆ ಶಕ್ಕು ವೈನಿ’ ಖ್ಯಾತಿಯ ಪದ್ಮಜಾರಾವ್‌, ಶರಣ್‌, ಸದಾಶಿವ ಬ್ರಹ್ಮಾವರ, ರಮೇಶ್‌ ಭಟ್‌, ದಾಮಿನಿ, ಜಯಾ, ರೇಖಾದಾಸ್‌ ಮೊದಲಾದವರಿದ್ದಾರೆ.

(ದಟ್ಸ್‌ ಕನ್ನಡ ವಾರ್ತೆ)

Post your views

ಮುಖಪುಟ / ಸ್ಯಾಂಡಲ್‌ವುಡ್‌

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada