»   » ‘ಸೆವೆನ್‌ ಓ ಕ್ಲಾಕ್‌’ ನಾಯಕ ಮಿಥುನ್‌ ತೇಜಸ್ವಿ ಮದುವೆ

‘ಸೆವೆನ್‌ ಓ ಕ್ಲಾಕ್‌’ ನಾಯಕ ಮಿಥುನ್‌ ತೇಜಸ್ವಿ ಮದುವೆ

Posted By:
Subscribe to Filmibeat Kannada

‘ಸೆವೆನ್‌ ಓ ಕ್ಲಾಕ್‌’ ಚಿತ್ರದ ನಾಯಕ ಮಿಥುನ್‌ ತೇಜಸ್ವಿ ಇದೇ ಮಾರ್ಚ್‌ 26ರಂದು ರೋಹಿಣಿ ಎಂಬ ಸಾಫ್ಟ್‌ವೇರ್‌ ಇಂಜಿನೀಯರನ್ನು ವರಿಸಲಿದ್ದಾರೆ.

ಸುರಸುಂದರ ತರುಣ ಮಿಥುನ್‌ ಮಾಧ್ಯಮ ಮಿತ್ರರಿಗೆ ವೈಯಕ್ತಿಕವಾಗಿ ಭೇಟಿಮಾಡಿ ಆರತಕ್ಷತೆಗೆ ಆಹ್ವಾನಿಸಿದ್ದಾರೆ. ಏಪ್ರಿಲ್‌ 1ರಂದು, ಬಸವನಗುಡಿಯಲ್ಲಿರುವ ಬುಲ್‌ಟೆಂಪಲ್‌ ರಸ್ತೆಯ ಶ್ರೀ ಧರ್ಮಸ್ಥಳ ಮಂಜುನಾಥ ಕಲ್ಯಾಣ ಮಂಟಪದಲ್ಲಿ ಆರತಕ್ಷತೆ ನೆರವೇರಲಿದೆ.

ಅಪ್ಪಟ ಕನ್ನಡಿಗರಾದ ಮಿಥುನ್‌ ಕನ್ನಡ ಚಿತ್ರದ ಮೂಲಕವೇ ಚಿತ್ರರಂಗ ಪ್ರವೇಶಿಸಿದರಾದರೂ, ತಮಿಳು ಚಿತ್ರರಂಗದಲ್ಲಿ ಖ್ಯಾತಿ ಗಳಿಸಿದವರು. ನಿರ್ಮಾಪಕ ಎನ್‌.ಎಂ.ಸುರೇಶ್‌ ‘ಸೆವೆನ್‌ ಓ ಕ್ಲಾಕ್‌’ ಚಿತ್ರದ ಮೂಲಕ ಮತ್ತೆ ಕನ್ನಡಕ್ಕೆ ಕರೆತಂದಿದ್ದು ಇತಿಹಾಸ. ಸದ್ಯಕ್ಕೆ ಅವರು ‘ಈಗೇನ್ಮಾಡ್ಲಿ’ ಎಂಬ ಚಿತ್ರದಲ್ಲಿ ನಟಿಸುತ್ತಿದ್ದಾರೆ.

ಮಿಥುನ್‌ ತೇಜಸ್ವಿ ಅವರ ದಾಂಪತ್ಯ ಜೀವನಕ್ಕೆ ಶುಭಹಾರೈಸಬಯಸುವವರು ಕೆಳಗಿನ ಸಂಚಾರಿ ದೂರವಾಣಿ ಸಂಖ್ಯೆಗಳನ್ನು ಸಂಪರ್ಕಿಸಬಹುದು.

99453 54445 ಮತ್ತು 093800 70809.

(ದಟ್ಸ್‌ ಕನ್ನಡ ವಾರ್ತೆ)

Post your views

ಮುಖಪುಟ / ಸ್ಯಾಂಡಲ್‌ವುಡ್‌

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada