»   » ಚೆನ್ನೈನಲ್ಲಿ ಬುದ್ಧಿಜೀವಿಗಳ ಪ್ರತಿಭಟನೆ

ಚೆನ್ನೈನಲ್ಲಿ ಬುದ್ಧಿಜೀವಿಗಳ ಪ್ರತಿಭಟನೆ

Posted By: Staff
Subscribe to Filmibeat Kannada

ಚೆನ್ನೈ: ಅತ್ತ ಲಗಾನ್‌ ಚಿತ್ರ ತಂಡ ಆಸ್ಕರ್‌ ಪ್ರಶಸ್ತಿಯನ್ನು ಎದುರುನೋಡುತ್ತಿದ್ದರೆ, ಇತ್ತ ನಗರದಲ್ಲಿ ಲಗಾನ್‌ ದಲಿತ ವಿರೋಧಿ ಚಿತ್ರ ಎಂಬ ಹೋರಾಟ ಅಭಿಯಾನ ಆರಂಭವಾಗಿದೆ.

ದಲಿತ ವಿರೋಧೀ ಚಿತ್ರವೆಂಬ ಆಪಾದನೆಯಾಂದಿಗೆ ಹೋರಾಟಕ್ಕೆ ಇಳಿದಿರುವ ದಲಿತಪರ ಬುದ್ಧಿಜೀವಿಗಳ ಪ್ರಕಾರ ಚಿತ್ರದಲ್ಲಿ ಬರುವ ಕಚ್ಚಾ ್ರ ಪಾತ್ರವನ್ನು ತೀರಾ ಕೆಟ್ಟದಾಗಿ ಚಿತ್ರಿಸಲಾಗಿದೆ. ಚಿತ್ರದಲ್ಲಿ ಆತನ ಪ್ರತಿಭೆಯನ್ನು ಎತ್ತಿ ಹಿಡಿಯುವ ಬದಲಾಗಿ, ಅಂಗವಿಕಲತೆಯನ್ನೇ ಉತ್ಪ್ರೇಕ್ಷೆ ಮಾಡಲಾಗಿದೆ.

ಲಗಾನ್‌ ಚಿತ್ರದಲ್ಲಿ ದಲಿತರನ್ನು ನಿಕೃಷ್ಟವಾಗಿ ಕಾಣಲಾಗಿದ್ದು, ಪ್ರೇಕ್ಷಕರಲ್ಲಿ ದಲಿತರ ಬಗ್ಗೆ ತಪ್ಪು ಕಲ್ಪನೆ ಮೂಡುವಂತೆ ಪಾತ್ರಗಳನ್ನು ಚಿತ್ರೀಕರಿಸಲಾಗಿದೆ. ಇಂತಹ ಚಿತ್ರವೊಂದನ್ನು ಆಸ್ಕರ್‌ ಶಿಫಾರಸು ಮಾಡಿರುವುದು ದಲಿತರಿಗೆ ನೋವುಂಟು ಮಾಡುವ ವಿಷಯವಾಗಿದೆ. ಆದ್ದರಿಂದ ಲಗಾನ್‌ ಚಿತ್ರವನ್ನು ಸ್ಪರ್ಧೆಯಿಂದ ಹಿಂತೆಗೆದುಕೊಳ್ಳಬೇಕು ಎಂದು ಚೆನ್ನೈನ 'ದಲಿತ ಮುರಸು" ಪತ್ರಿಕೆಯ ಸಂಪಾದಕ ಪುನೀತ ಪಾಂಡ್ಯನ್‌ ಅಭಿಪ್ರಾಯ ಪಟ್ಟಿದ್ದಾರೆ.

ಪ್ರತಿಭಟನಾ ಅಭಿಯಾನದಲ್ಲಿ ದಲಿತ ಕಾರ್ಯಕರ್ತರೂ ಭಾಗವಹಿಸಿದ್ದಾರೆ. ಯಾವುದೇ ಚಿತ್ರ ದಲಿತರನ್ನು ಕೆಟ್ಟದಾಗಿ ಚಿತ್ರಿಸುವುದು ಸಲ್ಲ ಮತ್ತು ಅದನ್ನು ನಾವು ವಿರೋಧಿಸುತ್ತೇವೆ ಎಂದು ಪ್ರತಿಭಟನೆಯಲ್ಲಿ ಪಾಲ್ಗೊಂಡಿರುವ ದಲಿತ್‌ ಪ್ಯಾಂಥರ್ಸ್‌ ಆಫ್‌ ಇಂಡಿಯಾದ ಆರ್‌. ತಿರುಮವಲನ್‌ ಹೇಳಿದ್ದಾರೆ.

(ಇನ್ಫೋ ವಾರ್ತೆ)

English summary
Oscar nominated Hindi film Lagaan labeled as anti-Dalit in Chennai
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada