»   » ಬೆಂಗಳೂರು ನಗರದಲ್ಲಿ ಕೇಬಲ್‌ ಆಪರೇಟರ್‌ಗಳ ಅನಿರ್ದಿಷ್ಟಾವಧಿ ಮುಷ್ಕರ

ಬೆಂಗಳೂರು ನಗರದಲ್ಲಿ ಕೇಬಲ್‌ ಆಪರೇಟರ್‌ಗಳ ಅನಿರ್ದಿಷ್ಟಾವಧಿ ಮುಷ್ಕರ

Subscribe to Filmibeat Kannada

ಬೆಂಗಳೂರು : ಲಾರಿ ಮುಷ್ಕರ ನಿಂತಿತು ಎಂದು ಸಮಾಧಾನದ ನಿಟ್ಟುಸಿರು ಪಡುತ್ತಿರುವಂತೆಯೇ, ಇದೋ ಎರಗಿದೆ ಇನ್ನೊಂದು ಮುಷ್ಕರದ ಪ್ರಹಾರ !

ಕೇಬಲ್‌ ಪ್ರಸಾರದ ಮೇಲೆ ರಾಜ್ಯಸರ್ಕಾರ ಏಕಾಏಕಿ ಶೇ.150ರಷ್ಟು ಮನರಂಜನಾ ತೆರಿಗೆ ಹೆಚ್ಚಿಸಿರುವುದನ್ನು ಪ್ರತಿಭಟಿಸಿ ಕೇಬಲ್‌ ಆಪರೇಟರ್‌ಗಳು ಏಪ್ರಿಲ್‌ 24ರ ಗುರುವಾರದಿಂದ ಅನಿರ್ದಿಷ್ಟಾವಧಿ ಮುಷ್ಕರ ಹೂಡಿದ್ದಾರೆ. ಬೆಂಗಳೂರು ನಗರದಲ್ಲಿ ಕೇಬಲ್‌ ಪ್ರಸಾರ ನಿಂತಿದೆ.

ಮನರಂಜನಾ ತೆರಿಗೆಯನ್ನು 3 ಸಾವಿರ ರುಪಾಯಿಯಿಂದ 7.5 ಸಾವಿರ ರುಪಾಯಿಗೆ ಹೆಚ್ಚಿಸಿರುವ ರಾಜ್ಯ ಸರ್ಕಾರದ ಕ್ರಮ ಕೇಬಲ್‌ ಆಪರೇಟರ್‌ಗಳಿಗೆ ಹಾಗೂ ಗ್ರಾಹಕರಿಗೆ ಹೊರೆಯೆನಿಸಲಿದೆ. ಈ ಹೇರಿಕೆಯನ್ನು ಪ್ರತಿಭಟಿಸಿ ನಗರದ ಕೇಬಲ್‌ ಆಪರೇಟರ್‌ಗಳ ಅನಿರ್ದಿಷ್ಟಾವಧಿ ಮುಷ್ಕರ ಗುರುವಾರದಿಂದ ಪ್ರಾರಂಭವಾಗಲಿದೆ. ಇದರಿಂದ ಬೆಂಗಳೂರು ನಾಗರಿಕರು ಕೇಬಲ್‌ ಟೀವಿ ಪ್ರಸಾರದಿಂದ ವಂಚಿತರಾಗಿದ್ದಾರೆ.

ತೆರಿಗೆ ಹೇರಿಕೆಯ ಬದಲು ಪ್ರತಿ ಗ್ರಾಹಕರಿಗೆ ಇಂತಿಷ್ಟು ದರವನ್ನು ಸರ್ಕಾರ ನಿಗದಿಪಡಿಸಬೇಕು ಎಂದು ಕೇಬಲ್‌ ಆಪರೇಟರ್‌ಗಳು ಸರ್ಕಾರವನ್ನು ಒತ್ತಾಯಿಸಿದ್ದಾರೆ.

ಬೆಂಗಳೂರು ನಗರದಲ್ಲಿ 11 ಲಕ್ಷ ಕೇಬಲ್‌ ಸಂಪರ್ಕಗಳಿದ್ದು - 1800 ಆಪರೇಟರ್‌ಗಳು ಈ ಸಂಪರ್ಕಗಳನ್ನು ನಿಭಾಯಿಸತ್ತಿದ್ದಾರೆ. ಈ ಕೇಬಲ್‌ ಆಪರೇಟಿಂಗ್‌ ಕೇಂದ್ರಗಳಲ್ಲಿ 5 ಸಾವಿರಕ್ಕೂ ಹೆಚ್ಚು ಮಂದಿ ಕೆಲಸ ಮಾಡುತ್ತಿದ್ದು , ಮುಷ್ಕರದಿಂದಾಗಿ ಈ ಕಾರ್ಮಿಕರ ಜೀವನದ ಮೇಲೆ ಪೆಟ್ಟು ಬೀಳಲಿದೆ.

(ಇನ್ಫೋ ವಾರ್ತೆ)

ಪೂರಕ ಓದಿಗೆ-
ಮುಖಪುಟ / ಸ್ಯಾಂಡಲ್‌ವುಡ್‌

Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada