»   » ಕಮಲ್‌ಗೆ ಚೆಂಬು, ಮೇ4 ಸಿಮ್ರಾನ್‌ ಮದುವೆ

ಕಮಲ್‌ಗೆ ಚೆಂಬು, ಮೇ4 ಸಿಮ್ರಾನ್‌ ಮದುವೆ

Subscribe to Filmibeat Kannada

*ದಟ್ಸ್‌ಕನ್ನಡ ಬ್ಯೂರೊ

ಏಪ್ರಿಲ್‌ 24 ರಂದು ಮುಂಬಯಿಯ ಅತ್ಯಂತ ಖಾಸಗಿ ಸಮಾರಂಭದಲ್ಲಿ ಸಿಮ್ರಾನ್‌ ನಿಶ್ಚಿತಾರ್ಥ !

ಕಮಲ ಹಾಸನ್‌ ಜೊತೆಗೆ ಅಂದುಕೊಂಡಿರಾ... ಊಹ್ಞೂಂ. ದೆಹಲಿಯ ಉದ್ಯಮಿ ಹಾಗೂ ತನ್ನ ಕಸಿನ್‌, 27ರ ಸುಂದರ ಯುವಕ ದಿಲೀಪ್‌ರನ್ನು ಸಿಮ್ರಾನ್‌ ಮದುವೆಯಾಗಲಿದ್ದಾರೆ.

ಮದುವೆ ದಿನಾಂಕವೂ ನಿಶ್ಚಯವಾಗಿದೆ. ಮೇ 4ರಂದು ಮುಂಬಯಿಯಲ್ಲಿ ಮದುವೆ. ಸಿಮ್ರಾನ್‌ ಮಾತನ್ನು ನಂಬುವುದಾದರೆ, ಇದು ಅರೇಂಜ್ಡ್‌ ಮ್ಯಾರೇಜ್‌ ಮತ್ತು ಈ ಅರೇಂಜ್‌ಮೆಂಟ್‌ ಬಗ್ಗೆ ಎರಡೂ ಕುಟುಂಬದ ಹಿರಿಯರು ಸಾಕಷ್ಟು ಕಾಳಜಿ ವಹಿಸಿದ್ದಾರೆ.

ತಾನು ಅಭಿನಯಕ್ಕೆ ವಿದಾಯ ಹೇಳುವುದಾಗಿ ಸಿಮ್ರಾನ್‌ ತುಂಬಾ ಹಿಂದೇನೇ ಹೇಳಿಕೊಂಡಾಗಿದೆ. ತೆಲುಗು ಮತ್ತು ತಮಿಳು ಚಿತ್ರರಂಗಗಳಲ್ಲಿ ಸಿಮ್ರಾನ್‌ಗೆ ಬೇಡಿಕೆ ಕಡಿಮೆಯಾಗುತ್ತಿರುವುದು ಒಂದು ಕಾರಣವಾದರೆ ಮದುವೆ ಇನ್ನೊಂದು ಕಾರಣ.

ಕನ್ನಡ ಸಿನೆಮಾ ನಿರ್ಮಾಪಕ ರಾಕ್‌ಲೈನ್‌ ವೆಂಕಟೇಶ್‌ ಚಿತ್ರವೊಂದಕ್ಕೆ ಸಹಿ ಹಾಕಿದ್ದ ಸಿಮ್ರಾನ್‌ ಚಿತ್ರದ ಮುಹೂರ್ತಕ್ಕೆ ಬರಲು ಒಪ್ಪಲಿಲ್ಲ. ಈ ವಿಷಯದಲ್ಲಿ ನಡೆದ ಮಾತುಕತೆ ಕೊನೆಗೆ ಅಡ್ವಾನ್ಸ್‌ ಹಣ ವಾಪಾಸು ಮಾಡುವಲ್ಲಿ ಮುಕ್ತಾಯವಾಯಿತು. ಒಪ್ಪಿಕೊಂಡ ಇನ್ನೊಂದಷ್ಟು ತಮಿಳು ಚಿತ್ರದ ನಿರ್ಮಾಪಕರಿಗೆ ಅಡ್ವಾನ್ಸ್‌ ವಾಪಾಸು ಮಾಡಿದ್ದಾರೆ. ಮದುವೆಯ ನಂತರ ಉತ್ತಮ ಗೃಹಿಣಿಯಾಗುವ ಬಯಕೆ ಸಿಮ್ರಾನ್‌ರದ್ದು.

ಈ ಹಿಂದೆ ರಾಜು ಸುಂದರಂ ರನ್ನು ಪ್ರೀತಿಸಿ, ನಂತರ ಒಲ್ಲೆ ಎಂದ ಸಿಮ್ರಾನ್‌ ಕಮಲಹಾಸನ್‌ ತೋಳಿನಲ್ಲಿ ಸಿಲುಕಿದರು. ಕಮಲ್‌ ಪತ್ನಿ ಸಾರಿಕಾಗೆ ವಿಚ್ಛೇದನ ನೀಡಿದಾಗ, ಕಮಲ್‌ ಸಿಮ್ರಾನ್‌ ಅಫೇರ್‌ ಇನ್ನಷ್ಟು ಗಟ್ಟಿ ಎನಿಸಿಕೊಂಡಿತ್ತು.

ಆದರೆ ಈಗ -
ಕಮಲ್‌ ಸಂಡಿಯಾರ್‌ ಎಂಬ ಹೊಸ ಚಿತ್ರದಲ್ಲಿ ವ್ಯಸ್ತ.
ಸಾರಿಕಾ ಮತ್ತೆ ಅಭಿನಯಕ್ಕೆ ಮರಳಿದ್ದಾರೆ.
ಸಿಮ್ರಾನ್‌ ಹೊಸ ಬದುಕಿನ ಕನಸು ಹೆಣೆಯುತ್ತಿದ್ದಾರೆ.

Post your views

ಸಿಮ್ರಾನ್‌ ಪ್ರೇಮಾಯಣ
ಸಿಮ್ರಾನ್‌ಗೆ ವಾಣಿ ಗಣಪತಿ ಹೇಳಿರುವ ಎಚ್ಚರಿಕೆ
ಸಿಮ್ರಾನ್‌ ಗುಡಿಯ ನೋಡಿರಣ್ಣಾ
ಸಿಮ್ರಾನ್‌ ಒನಪಿಗೀಗ ಮಾರುಕಟ್ಟೆ ಇಲ್ಲ
ಕಮಲ್‌ಗೆ ಸಾರಿಕಾ ಸಾಕಾಗಿ ಹೋದರಾ?
ಸಿಮ್ರಾನ್‌ ಪ್ರೇಮ ಯಾರಿಗೋ..

ಮುಖಪುಟ / ಸ್ಯಾಂಡಲ್‌ವುಡ್‌

Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada