For Quick Alerts
  ALLOW NOTIFICATIONS  
  For Daily Alerts

  ರಾಜ್‌ ಹುಟ್ಟು ಹಬ್ಬ : ವಿಷಾದದ ನಡುವೆಯೂ ಸಂಭ್ರಮ

  By Staff
  |

  ಬೆಂಗಳೂರು : ವರನಟ ಡಾ.ರಾಜ್‌ಕುಮಾರ್‌ ತೀರಿಹೋಗಿ ಒಂದು ವರ್ಷವಾಗಿದೆ. ಈ ಬೇಸರದ ಮಧ್ಯೆಯೂ ಅವರ 79ನೇ ಹುಟ್ಟುಹಬ್ಬ ನಾಡಿನಾದ್ಯಂತ ಸಂಭ್ರಮದಿಂದ ನಡೆಯುತ್ತಿದೆ.

  ರಾಜ್‌ ತೀರಿದನಂತರ ನಡೆಯುತ್ತಿರುವ ಮೊದಲ ಹುಟ್ಟುಹಬ್ಬವಿದು. ರಾಜ್‌ ನಮ್ಮೊಡನೆ ಶಾಶ್ವತವಾಗಿ ಇದ್ದಾರೆ ಎಂಬ ಭಾವನೆಯಲ್ಲೇ ರಾಜ್ಯಾದ್ಯಂತ ಹುಟ್ಟುಹಬ್ಬ ಸಡಗರದಿಂದ ನಡೆಯುತ್ತಿದೆ.

  ರಾಜ್‌ಕುಮಾರ್‌ ಅಭಿನಯ ಮಾತ್ರದಿಂದ ಮನ್ನಣೆಗಳಿಸಿದ ವ್ಯಕ್ತಿಯಲ್ಲ. ಅವರು ಸರಳತೆ-ಸಭ್ಯತೆಯ ಪ್ರತಿರೂಪವಾಗಿದ್ದರು. ನಾಡು-ನುಡಿ ಬಗ್ಗೆ ಅಪಾರ ಅಭಿಮಾನವುಳ್ಳವರಾಗಿದ್ದರು. ಈ ಘನವಾದ ಸ್ವರೂಪದಿಂದಲೇ ರಾಜ್‌ ಕನ್ನಡ ಜನಮಾನಸದ ಆರಾಧ್ಯದೈವವಾಗಿ ಬೆಳೆದದ್ದು. ರಾಜ್‌ ದೈಹಿಕರೂಪದಲ್ಲಿ ಈಗ ನಮ್ಮೊಂದಿಗಿಲ್ಲ. ಆದರೆ ಅವರ ಚೈತನ್ನದ ಇರುವಿಕೆ ಕನ್ನಡ ಇರುವವರೆಗೆ ನಿರಂತರ...

  ಅಲ್ಲಲ್ಲಿ ರಾಜ್‌ ಪ್ರತಿಮೆ-ಭಾವಚಿತ್ರಗಳಿಗೆ ಪೂಜೆ ನಡೆಯುತ್ತಿದೆ. ಫಲ-ಪುಷ್ಪಗಳನ್ನು ಅರ್ಪಿಸಲಾಗುತ್ತಿದೆ. ‘ಇದೋ ರಾಜ್‌ ಮುಂದೆ ಬಂದು ನಿಂತೇಬಿಟ್ಟರು...’ ಎನ್ನುವ ರೀತಿಯಲ್ಲಿ ಅವರ ಮಧುರ-ಮನೋಹರ ಕಂಠದ ಗೀತೆಗಳು ತೇಲಿಬರುತ್ತಿವೆ. ವಿವಿಧ ರಾಗರಸಗಳ ಗೀತೆಗಳು ಮತ್ತೆ ಮನಸೂರೆಗೊಳ್ಳುತ್ತಿವೆ. ‘ನಾದಮಯ ಈ ಲೋಕವೆಲ್ಲ...’ ಎಂಬ ಗೀತೆ ನಮ್ಮನ್ನು ಮತ್ತೆ ರಾಜ್‌ ನಾದಲೋಕಕ್ಕೆ ಸೆಳೆದುಕೊಳ್ಳುತ್ತದೆ...

  (ದಟ್ಸ್‌ ಕನ್ನಡ ವಾರ್ತೆ)

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X