»   » 275 ಕಂತುಗಳನ್ನು ದಾಟಿ ಮುಂದುವರೆದಿರುವ ಧಾರಾವಾಹಿಗೆ ಪ್ರತಿಷ್ಠಿತ ಪ್ರಶಸ್ತಿಯ ಟಾನಿಕ್‌

275 ಕಂತುಗಳನ್ನು ದಾಟಿ ಮುಂದುವರೆದಿರುವ ಧಾರಾವಾಹಿಗೆ ಪ್ರತಿಷ್ಠಿತ ಪ್ರಶಸ್ತಿಯ ಟಾನಿಕ್‌

Subscribe to Filmibeat Kannada

ಬಿ.ಎಸ್‌. ಲಿಂಗದೇವರು ನಿರ್ದೇಶನದ, ಎನ್‌. ಶಿವಾನಂದಮ್‌ ನಿರ್ಮಾಣದ ಕಲ್ಯಾಣಿ ಮೆಗಾ ಸೀರಿಯಲ್ಲು ಪ್ರತಿಷ್ಠಿತ ರಾಪಾ ಪ್ರಶಸ್ತಿಯನ್ನು ಪಡೆದುಕೊಂಡಿದೆ. ಟೆಲಿಧಾರಾವಾಹಿಗಳಿಗೆ ರಾಷ್ಟ್ರೀಯ ಮಟ್ಟದಲ್ಲಿ ನೀಡುವ ಈ ಪ್ರಶಸ್ತಿ ಕಲ್ಯಾಣಿ ಸೀರಿಯಲ್ಲಿನ ಚಿತ್ರಕಥಾ ವಿಭಾಗಕ್ಕೆ ಸಂದಿದೆ.

ರಾಪಾ (Radio and Tv advertisers Practitioners Association of India) 17 ಭಾರತೀಯ ಭಾಷೆಗಳಲ್ಲಿ ತಯಾರಾಗುವ ಧಾರಾವಾಹಿಗಳ 51 ವಿಭಾಗಗಳಿಗೆ ವಾರ್ಷಿಕ ಪ್ರಶಸ್ತಿಗಳನ್ನು ನೀಡುತ್ತದೆ. ಆಜ್‌ತಕ್‌ ಟೀವಿ ಚಾನಲ್ಲಿನಂಥ ಸಂಸ್ಥೆಗಳೂ ಈ ಪ್ರಶಸ್ತಿ ಪಡೆದುಕೊಂಡಿವೆ.

ಇದು ಕೇವಲ ಸ್ವಮೇಕ್‌ ಸೀರಿಯಲ್‌ಗಳಿಗಷ್ಟೇ ನೀಡಲಾಗುವ ಪ್ರಶಸ್ತಿ. ಭಾರತದಲ್ಲಿ ನಿರ್ಮಾಣವಾಗಿ ಪ್ರಸಾರವಾಗುವ ಧಾರಾವಾಹಿಗಳಿಗಷ್ಟೇ ಕೊಡ ಮಾಡುವ ಪ್ರಶಸ್ತಿಗೆ, ಕಲ್ಯಾಣಿ ಧಾರಾವಾಹಿ 2002 ರ ಸಾಧನೆಗಾಗಿ ಪಡೆದುಕೊಂಡಿದೆ.

ಟೀವಿ ಜಾಹೀರಾತು ಸಂಸ್ಥೆ ಮತ್ತು ಟೀವಿ ಚಾನೆಲ್ಲುಗಳ ಮಟ್ಟಿಗೆ ಇದು ಅತ್ಯಂತ ಪ್ರತಿಷ್ಠಿತ ಪ್ರಶಸ್ತಿಯಾಗಿದೆ. ದೂರದರ್ಶನದಂತಹ ಸಂಸ್ಥೆಗಳು ಧಾರಾವಾಹಿಗಳ ಗುಣಮಟ್ಟಕ್ಕೆ ಈ ಪ್ರಶಸ್ತಿಯನ್ನು ಮಾನದಂಡವನ್ನಾಗಿ ಬಳಸುತ್ತವೆ.

ಕಲ್ಯಾಣಿ ದೂರದರ್ಶನದಲ್ಲಿ ಪ್ರತಿದಿನ ಅಪರಾಹ್ನ 3. 35ಕ್ಕೆ ಪ್ರಸಾರವಾಗುತ್ತದೆ. ಈಗಾಗಲೇ 275 ಕಂತುಗಳನ್ನು ಮುಗಿಸಿ ಯಶಸ್ವಿ ಧಾರಾವಾಹಿಯಾಗಿ ಮುಂದುವರೆಯುತ್ತಿದೆ.

(ಇನ್ಫೋ ವಾರ್ತೆ)

Post your views

ಮುಖಪುಟ / ಸ್ಯಾಂಡಲ್‌ವುಡ್‌

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada