»   » ರವಿ-ಜಗ್ಗೇಶ್‌ರ ‘ರಾಮಕೃಷ್ಣ’ ಜಪ

ರವಿ-ಜಗ್ಗೇಶ್‌ರ ‘ರಾಮಕೃಷ್ಣ’ ಜಪ

Posted By: Super
Subscribe to Filmibeat Kannada
Ramakrishna
ರವಿಚಂದ್ರನ್‌ ಪಾಲಿಗೀಗ ಗೆಲ್ಲುವ ಸಮಯ. 'ಮಲ್ಲ" ಚಿತ್ರ ಗೆದ್ದಿದ್ದೇ ತಡ, ರವಿಚಂದ್ರನ್‌ ಸ್ಟಾರ್‌ ಬದಲಾಗಿದೆ. ರವಿ ಎನ್ನುವ ತಾರೆ ಅಸ್ತಂಗತ ಎನ್ನುವ ಕುಹಕ ಚಾಲ್ತಿಯಲ್ಲಿದ್ದಾಗಲೇ ಮಲ್ಲ ಗೆದ್ದಿದ್ದ. ಅಲ್ಲಿಗೆ ರವಿಚಂದ್ರನ್‌ರ ಮತ್ತೊಂದು ಅವತಾರಕ್ಕೆ ನಾಂದಿಯಾದಂತಾಯಿತು. ಆ ಅವತಾರದ ಮುಂದಿನ ಭಾಗ- ರಾಮಕೃಷ್ಣ !

ಮಲ್ಲ ಚಿತ್ರದ ಗೆಲುವಷ್ಟೇ ಅಲ್ಲ , 'ರಾಮಕೃಷ್ಣ" ಬಗ್ಗೆ ನಿರೀಕ್ಷೆಗಳನ್ನು ಇಟ್ಟುಕೊಳ್ಳಲಿಕ್ಕೆ ಇನ್ನೊಂದಿಷ್ಟು ಕಾರಣಗಳೂ ಇವೆ. ಅವುಗಳಲ್ಲಿ ಮುಖ್ಯವಾದದ್ದು ರವಿ ಹಾಗೂ ಜಗ್ಗೇಶು ಕಾಂಬಿನೇಷನ್ನು . ಗಡಿಬಿಡಿ ಗಂಡ ಚಿತ್ರದಲ್ಲಿ ಈ ಕಾಂಬಿನೇಷನ್‌ ಭಾರೀ ಜನಪ್ರಿಯತೆ ಗಳಿಸಿತ್ತು . ಆನಂತರ ಸ್ಟಾರ್‌ಪ್ರಭೆಯಿಂದ ಹೊರಬರಲು ನಿರಾಕರಿಸಿದ ಇಬ್ಬರು ನಟರು ವಿಮುಖರಾಗಿದ್ದರು. ಆದರೆ, ಕಾಲ ಇಬ್ಬರನ್ನೂ ಮಾಗಿಸಿದೆ. ಇಬ್ಬರೂ ಸೋತಿದ್ದಾರೆ, ಗೆದ್ದಿದ್ದಾರೆ. ಈಗ ಒಂದಾಗಿದ್ದಾರೆ.

ನಿರ್ದೇಶಕ ಸಾಯಿಪ್ರಕಾಶ್‌ ಚಿತ್ರದ ಮತ್ತೊಂದು ಅಟ್ರಾಕ್ಷನ್‌. ಹೇಳಿಕೇಳಿ ಇದೊಂದು ನವರಸಗಳ ನಗೆಚಿತ್ರ. ಇಂಥದೊಂದು ಚಿತ್ರಕ್ಕೆ ಸೂಕ್ತ ಮಸಾಲೆ ಅರೆಯಲು ಸಾಯಿಗಿಂಥ ಸೂಕ್ತ ನಿರ್ದೇಶಕ ಇನ್ನೊಬ್ಬರಿದ್ದಾರೆಯೇ ? ಪ್ರೇಕ್ಷಕರಿಗೆ ಎರಡು ಗಂಟೆ ಮನರಂಜನೆ ನೀಡುವುದೇ ಮುಖ್ಯ ಎನ್ನುವ ಮಂತ್ರವನ್ನು ಜಪಿಸುವ ಸಾಯಿ ಮಹಾತ್ಮೆ 'ರಾಮಕೃಷ್ಣ"ನ ಪ್ಲಸ್‌ ಪಾಯಿಂಟ್‌ಗಳಲ್ಲೊಂದು. ಹಾಗೆಂದು ಗಾಂಧಿನಗರ ನಿರ್ಧರಿಸಿಬಿಟ್ಟಿದೆ.

ಇನ್ನು , ಇದು ಟೇಕಿಟ್‌ ಈಸಿ ! ಎನ್ನುವ ಕಾಲ. ಹಾಗಾಗಿ- ದಾಸ, ಧರ್ಮ ಎನ್ನುವ ಚಿತ್ರಗಳು ಇಲ್ಲಿ ಗೆಲ್ಲುತ್ತವೆ. ಚಿಗುರಿದ ಕನಸು, ಬಿಂಬ ಸೋಲುತ್ತವೆ. ಬದಲಾಗಿರುವ ಪ್ರೇಕ್ಷಕರಿಗೆ 'ರಾಮಕೃಷ್ಣ" ಇಷ್ಟವಾಗಬಹುದು.ರಾಮ-ಕೃಷ್ಣರ ಆಶೀರ್ವಾದವೂ 'ರಾಮಕೃಷ್ಣ" ಚಿತ್ರಕ್ಕಿರಲಿ.ತೆರೆಗೆ ಸಿದ್ಧವಾಗಿರುವ 'ರಾಮಕೃಷ್ಣ" ಕೆಂಪೇಗೌಡ ರಸ್ತೆಯಲ್ಲಿ ಒಳ್ಳೆಯದೊಂದು ಥಿಯೇಟರ್‌ ನಿರೀಕ್ಷೆಯಲ್ಲಿದೆ. ಸಿಕ್ಕಿದರೆ ಬರುವ ಶುಕ್ರವಾರ ರಾಮ-ಕೃಷ್ಣ ಜಪ!

English summary
Ravichandran Jaggesh combination Kannada film 'Ramakrishna' released on May 28

Kannada Photos

Go to : More Photos

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X