»   » ರಕ್ಷಿತಾ ಜೊತೆ ರಾಧಿಕಾ!

ರಕ್ಷಿತಾ ಜೊತೆ ರಾಧಿಕಾ!

Posted By:
Subscribe to Filmibeat Kannada
  • ವಿನೋದಿನಿ
ರಾಧಿಕಾರ ಎರಡನೇ ಇನ್ನಿಂಗ್ಸ್‌ ಭರ್ಜರಿಯಾಗಿದೆ. ವಿವಾದಗಳಿಂದ ರಕ್ಷಿತಾ ಮತ್ತು ರಮ್ಯಾ ಸದ್ದು ಮಾಡುತ್ತಿದ್ದರೆ, ‘ನಾನುಂಟು, ನನ್ನ ಕೆಲಸವುಂಟು’ ಎಂಬಂತೆ ರಾಧಿಕಾ ಬಿಜಿಯಾಗಿದ್ದಾರೆ.

ಈಗ ಹೊಸ ಚಿತ್ರ ‘ಈಶ್ವರ್‌’ನಲ್ಲಿ ರಕ್ಷಿತಾ ಜೊತೆ ಅವರು ಅಭಿನಯಿಸುತ್ತಿದ್ದಾರೆ. ಓಂ ಪ್ರಕಾಶ್‌ರಾವ್‌ ನಿರ್ದೇಶನದ ಈ ಚಿತ್ರದಲ್ಲಿ ಇಬ್ಬರು ನಾಯಕಿಯರಿಗೆ ದರ್ಶನ್‌ ನಾಯಕ.

ಈ ಚಿತ್ರದ ಬಗ್ಗೆ ಪ್ರತಿಕ್ರಿಯಿಸಿರುವ ರಾಧಿಕಾ, ‘ನಾವಿರೋದೇ ಕನ್ನಡದಲ್ಲಿ ಮೂವರು ಹುಡುಗಿಯರು. ನನಗಂತೂ ಸ್ಪರ್ಧೆಯ ಭಯವಿಲ್ಲ. ಎಲ್ಲರ ಜೊತೆ ಅಭಿನಯಿಸಲು ಸಿದ್ಧ. ಅವಕಾಶ ಸಿಕ್ಕಿದರೆ ರಮ್ಯಾಜೊತೆಯಲ್ಲೂ ನಟಿಸುವೆ. ಚಿತ್ರರಂಗ ಒಂದು ಕುಟುಂಬ ಎಂಬ ಪರಿಕಲ್ಪನೆ ನನ್ನದು’ ಎಂದಿದ್ದಾಳೆ.

ರಾಧಿಕಾ ಮಾತಿನಲ್ಲಿ ಈಗ ತುಸು ಪಕ್ವತೆ ಕಂಡುಬರುತ್ತಿದೆ. ಚೆಲ್ಲುಚೆಲ್ಲು ತನದ ಜಾಗದಲ್ಲಿ ಜವಾಬ್ದಾರಿ ಕಾಣಿಸುತ್ತಿದೆ. ಪುನೀತ್‌ ಜೊತೆ ನಟಿಸಬೇಕು...ನನ್ನ ಪಾತ್ರಕ್ಕೆ ನನ್ನದೇ ಕಂಠ ನೀಡಬೇಕೆಂಬ ಬಯಕೆಗಳು ರಾಧಿಕಾ ಮಾತಿನಲ್ಲಿ ವ್ಯಕ್ತವಾದವು.

‘ನಾಯಕಿಯಾಗಲ್ಲದಿದ್ದರೂ ಅಕ್ಕನಾಗಿಯೋ, ಅಥವಾ ತಾಯಿ ಪಾತ್ರ ಮಾಡುತ್ತಲಾದರೂ ಚಿತ್ರರಂಗದಲ್ಲಿ ಸದಾ ಇದ್ದೇ ಇರುತ್ತೇನೆ. ರಿಟೈರ್‌ ಆಗುವ ಪ್ರಶ್ನೆಯೇ ಇಲ್ಲ’ ಎನ್ನುವ ತುಳುನಾಡ ಚೆಲುವೆ ರಾಧಿಕಾ ಸದ್ಯದಲ್ಲಿಯೇ ಕಾಲು ಸೆಂಚುರಿ(ಈಗಾಗಲೇ 21ಚಿತ್ರಗಳಲ್ಲಿ ನಟಿಸಿದ್ದಾರೆ) ಪೂರೈಸುವ ಹಾದಿಯಲ್ಲಿದ್ದಾರೆ.

ಆಟೋ ಶಂಕರ್‌, ಹೆತ್ತವರ ಕನಸು, ಮಸಾಲ, ಅಣ್ಣ-ತಂಗಿ, ಗುಡ್‌ಲಕ್‌ ಚಿತ್ರಗಳು ಪ್ರದರ್ಶನಕ್ಕೆ ಸಜ್ಜಾಗಿವೆ.
ಅಪ್ಪಟ ಕನ್ನಡದ ಹುಡುಗಿ ರಾಧಿಕಾ ಅವರ ಮೊದಲ ಚಿತ್ರ ‘ನೀಲ ಮೇಘ ಶ್ಯಾಮ’. ಲೋಕೇಶ್‌ ಪುತ್ರ ಸೃಜನ್‌ರೊಂದಿಗೆ ನಟಿಸಿದ ಈ ಚಿತ್ರ ತೆರೆಕಾಣುವ ಮೊದಲೇ ತೆರೆಕಂಡ ‘ನಿನಗಾಗಿ’ ಚಿತ್ರ ರಾಧಿಕಾಗೆ ಸ್ಟಾರ್‌ಗಿರಿಯನ್ನು ತಂದುಕೊಟ್ಟಿದಾದರೂ ಸಂಭಾವನೆಯಲ್ಲಿ ಅಂತಹ ವ್ಯತ್ಯಾಸಗಳೇನಾಗಲಿಲ್ಲ. ಮುಂದಿನ ಐದಾರು ವರ್ಷ ದುಡಿದರೆ ಜೀವನದಲ್ಲಿ ಆರಾಮವಾಗಿರಬಹುದು ಎನ್ನುವ ಲೆಕ್ಕಾಚಾರ ರಾಧಿಕಾ ಮನದಲ್ಲಿದೆ.

Post your views

ಮುಖಪುಟ / ಸ್ಯಾಂಡಲ್‌ವುಡ್‌

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada