»   » ವಿವಾದಾತ್ಮಕ ಚಿತ್ರ‘ಡಾ ವಿಂಚಿ ಕೋಡ್‌’ ಶುಕ್ರವಾರ ತೆರೆಗೆ

ವಿವಾದಾತ್ಮಕ ಚಿತ್ರ‘ಡಾ ವಿಂಚಿ ಕೋಡ್‌’ ಶುಕ್ರವಾರ ತೆರೆಗೆ

Subscribe to Filmibeat Kannada

ನವದೆಹಲಿ : ವಿವಾದಾತ್ಮಕ ವಿದೇಶಿ ಚಿತ್ರ ‘ದ ಡಾ ವಿಂಚಿ ಕೋಡ್‌’ ರಾಷ್ಟ್ರದೆಲ್ಲೆಡೆ ಶುಕ್ರವಾರ(ಮೇ.26)ರಂದು ಬಿಡುಗಡೆಯಾಗಲಿದೆ.

ಯೇಸು ಕ್ರಿಸ್ತನ ವ್ಯಕ್ತಿತ್ವವನ್ನು ಈ ಚಿತ್ರದಲ್ಲಿ ಅವಹೇಳನಕಾರಿಯಾಗಿ ಚಿತ್ರಿಸಲಾಗಿದೆ. ಚಿತ್ರದಲ್ಲಿ ವಿವಾದಾತ್ಮಕ ಸನ್ನಿವೇಶಗಳಿವೆ ಎಂಬ ಕಾರಣಕ್ಕೆ ವಿವಾದ ಉಂಟಾಗಿತ್ತು. ಯೇಸು ಕ್ರಿಸ್ತ ಮೇರಿ ಮ್ಯಾಗ್ಡಲಿನಾಳನ್ನು ಮದುವೆಯಾಗಿದ್ದ ಎಂಬ ಅಂಶ ಅರಗಿಸಿಕೊಳ್ಳದ ಕ್ರೆೃಸ್ತ ಸಂಘಟನೆಗಳು ಚಿತ್ರವನ್ನು ನಿರ್ಬಂಧಿಸಬೇಕೆಂದು ಒತ್ತಾಯಿಸಿದ್ದವು.

ಎರಡು ಬಾರಿ ಅತ್ಯುತ್ತಮ ನಟನೆಗಾಗಿ ಆಸ್ಕರ್‌ ಪ್ರಶಸ್ತಿ ಪಡೆದಿರುವ ಟಾಮ್‌ ಹ್ಯಾಂಕ್ಸ್‌ ನಟಿಸಿರುವ ಈ ಚಿತ್ರ ಭಾರತದಲ್ಲಿ ಮೇ.19ರಂದು ಬಿಡುಗಡೆಯಾಗಬೇಕಿತ್ತು. ಆದರೆ, ವಿವಾದದಿಂದಾಗಿ ತಡವಾಗಿ ಬಿಡುಗಡೆಯಾಗುತ್ತಿದೆ.

ವಿಶ್ವದ 62 ದೇಶಗಳಲ್ಲಿ ಮೇ.17ರಿಂದ 19ರ ಅವಧಿಯಲ್ಲಿ ‘ಡಾ ವಿಂಚಿ ಕೋಡ್‌’ ಬಿಡುಗಡೆಯಾಗಿದೆ. ಯೇಸು ಕ್ರಿಸ್ತ ಅಥವಾ ಕ್ರೆೃಸ್ತ ಧರ್ಮಕ್ಕೂ ನಮ್ಮ ಚಿತ್ರದಲ್ಲಿನ ಕಥಾವಸ್ತುವಿಗೂ ಯಾವುದೇ ಸಂಬಂಧವಿಲ್ಲ. ಇದೊಂದು ಕಾಲ್ಪನಿಕ ಚಿತ್ರ ಎಂದು ಚಿತ್ರ ತಯಾರಕರು ತಿಳಿಸಿದ್ದಾರೆ.

(ಏಜನ್ಸೀಸ್‌)

Post your views

ಮುಖಪುಟ / ಸ್ಯಾಂಡಲ್‌ವುಡ್‌

Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada