»   » ರಿkುೕ ಕನ್ನಡ ಚಾನೆಲ್‌ನಲ್ಲಿ ರಮೇಶ್‌ ಪ್ರಶ್ನೆ ಕೇಳ್ತಾರೆ!

ರಿkುೕ ಕನ್ನಡ ಚಾನೆಲ್‌ನಲ್ಲಿ ರಮೇಶ್‌ ಪ್ರಶ್ನೆ ಕೇಳ್ತಾರೆ!

Subscribe to Filmibeat Kannada

ಪುನೀತ್‌, ದರ್ಶನ್‌, ಸುದೀಪ್‌ರಂತಹ ಯುವ ನಾಯಕರ ಅಬ್ಬರದ ಮಧ್ಯೆ ರವಿಚಂದ್ರನ್‌, ಶಿವರಾಜ್‌ ಕುಮಾರ್‌, ರಮೇಶ್‌, ಉಪೇಂದ್ರ ಮತ್ತಿತರರು ತಮ್ಮ ಅಸ್ತಿತ್ವ ಉಳಿಸಿಕೊಳ್ಳಲು ತಿಣುಕಾಡುತ್ತಿದ್ದಾರೆ. ಇಂಥ ಸಂದರ್ಭದಲ್ಲಿ ಸುದೀಪ್‌, ರಮೇಶ್‌ ನಿರ್ದೇಶಕರಾಗಿ ಯಶಸ್ಸನ್ನು ಗಳಿಸಿದ್ದಾರೆ.

ಹಿರಿತೆರೆಯಲ್ಲಿ ನಾಯಕನಾಗಿ, ನಿರ್ದೇಶಕನಾಗಿ ಮಿಂಚಿದ ರಮೇಶ್‌ ಒಂದು ಕೈ ನೋಡೇಬಿಡೋಣ ಅಂತ ಕಿರುತೆರೆಯತ್ತ ಧಾಪುಗಾಲು ಹಾಕಿದ್ದಾರೆ. ಅದರ ಅರ್ಥ ಅವರಿಗೆ ಅವಕಾಶವೆಂದಲ್ಲ. ಏನಾದರೂ ಮಾಡುತಿರು ಮಂಕುತಿಮ್ಮ ಎಂಬಂತೆ ಅವರು ನಟರಾಗಿಯೋ, ನಿರ್ದೇಶಕರಾಗಿಯೋ, ಕತೆಗಾರರಾಗಿಯೋ ಯಾವಾಗಲೂ ತಮ್ಮ ಅನ್ವೇಷಣೆಯಲ್ಲಿ ಇರುತ್ತಾರೆ. ರಿkುೕ ಕನ್ನಡ ಚಾನೆಲ್‌ ರಮೇಶ್‌ರನ್ನು ಕಿರುತೆರೆಗೆ ಎಳೆದು ತಂದಿದೆ.

ಹಿರಿತೆರೆಯಲ್ಲಿ ಕಾಣದ್ದನ್ನು ಕಿರಿತೆರೆಯಲ್ಲಿ ಕಾಣು ಎಂಬುದಕ್ಕೆ ನಿದರ್ಶನವಾಗಿ ವಿಜಯಲಕ್ಷ್ಮಿ, ತೆಲುಗಿನ ರಾಧಿಕಾ, ಊರ್ವಶಿ, ರಮ್ಯಾ ಕೃಷ್ಣ ನಮ್ಮ ಕಣ್ಣ ಮುಂದೆ ಇದ್ದಾರೆ.

ಹಿರಿತೆರೆಯಲ್ಲಿ ಕಳೆದುಕೊಂಡ ನೇಮ್‌ ಮತ್ತು ಫೇಮ್‌ನ್ನು ಅಮಿತಾಭ್‌ ಬಚ್ಚನ್‌ ಕಿರುತೆರೆಯಲ್ಲಿ ದಕ್ಕಿಸಿಕೊಂಡಿದ್ದು ಎಲ್ಲರಿಗೂ ಗೊತ್ತೇ ಇದೆ.

ಹಿಂದಿಯ ‘ಕೌನ್‌ ಬನೇಗಾ ಕರೋಡ್‌ಪತಿ’ ಮಾದರಿಯಲ್ಲಿ , ಕನ್ನಡದಲ್ಲಿ ರಸಪ್ರಶ್ನೆಗಳ ಕಾರ್ಯಕ್ರಮ ರೂಪುಗೊಳ್ಳುತ್ತಿದೆ. ಈ ಕಾರ್ಯಕ್ರಮದ ಸಾರಥ್ಯವನ್ನು ರಮೇಶ್‌ವಹಿಸಿಕೊಂಡಿದ್ದಾರೆ. ಕಾರ್ಯಕ್ರಮದ ಚಿತ್ರೀಕರಣಕ್ಕಾಗಿ ಅಭಿಮಾನ್‌ ಸ್ಟುಡಿಯೋದಲ್ಲಿ ಅಂದದ ಸೆಟ್‌ಗಳನ್ನು ಹಾಕಲಾಗಿದೆ. ರಿkುೕ ಕನ್ನಡದಲ್ಲಿ ಈ ಕಾರ್ಯಕ್ರಮ ಸದ್ಯದಲ್ಲಿಯೇ ಪ್ರಸಾರವಾಗಲಿದೆ ಎಂದು ಮೂಲಗಳು ತಿಳಿಸಿವೆ.

ಇನ್ನೊಂದು ಸಮಾಚಾರ : ಸ್ಟಾರ್‌ ಟೀವಿಯಲ್ಲಿ ‘ಕೌನ್‌ ಬನೇಗಾ ಕರೋಡ್‌ಪತಿ’ ಕಾರ್ಯಕ್ರಮ, ‘ಕೆಬಿಸಿ 3’ ರೂಪದಲ್ಲಿ 2007ರಲ್ಲಿ ಪುನಾರಂಭವಾಗಲಿದೆ. ಮುಂದಿನ ವರ್ಷ ಅಮಿತಾಬ್‌ ಬಚ್ಚನ್‌ ಮತ್ತೆ ಮಿಂಚಲಿದ್ದಾರೆ.

Post your views

ಮುಖಪುಟ / ಸ್ಯಾಂಡಲ್‌ವುಡ್‌

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada