»   » ನಾಯಕ ನಟ ಸಾಯಿಕುಮಾರ್‌ಗೆ ಮಾತೃವಿಯೋಗ

ನಾಯಕ ನಟ ಸಾಯಿಕುಮಾರ್‌ಗೆ ಮಾತೃವಿಯೋಗ

Subscribe to Filmibeat Kannada

ಚೆನ್ನೈ : ಕನ್ನಡ ಮತ್ತು ತೆಲುಗು ಚಿತ್ರರಂಗದ ನಾಯಕ ನಟ ಮತ್ತು ಕಂಠದಾನ ಕಲಾವಿದ ಸಾಯಿಕುಮಾರ್‌ ಅವರ ತಾಯಿ ಕೃಷ್ಣಜ್ಯೋತಿ(66) ಹೃದಯಾಘಾತದಿಂದ ನಿಧನರಾದರು.

ಗುರುವಾರ(ಮೇ 25) ಚೆನ್ನೈನಲ್ಲಿ ಅಂತ್ಯಕ್ರಿಯೆ ನಡೆಯಲಿದೆ. ಪತಿ ಪಿ.ಜೆ.ಶರ್ಮ ಮತ್ತು ಮೂವರು ಮಕ್ಕಳನ್ನು ಬಿಟ್ಟು ಅಗಲಿರುವ ಕೃಷ್ಣಜ್ಯೋತಿ, ನಟಿಯೂ ಹೌದು.

ಡಾ.ರಾಜ್‌ ಕುಮಾರ್‌ ಅವರೊಂದಿಗೆ ‘ಕೃಷ್ಣಗಾರುಡಿ’ ಚಿತ್ರದಲ್ಲಿ ಸತ್ಯಭಾಮಾ ಪಾತ್ರದಲ್ಲಿ ಅವರು ನಟಿಸಿದ್ದರು. ‘ಭಾಗ್ಯೋದಯ’, ‘ಸೋದರಿ’, ‘ಮಕ್ಕಳ ರಾಜ್ಯ’ ಸೇರಿದಂತೆ ವಿವಿಧ ಚಿತ್ರಗಳಲ್ಲಿ ಅವರು ಅಭಿನಯಿಸಿದ್ದರು.

(ಏಜನ್ಸೀಸ್‌)

Post your views

ಮುಖಪುಟ / ಸ್ಯಾಂಡಲ್‌ವುಡ್‌

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada