»   » 10ನಿಮಿಷದ ಪಾತ್ರಕ್ಕೆ ಮಲ್ಲಿಕಾ ಕೇಳಿದ್ದು ಒಂದೂವರೆ ಕೋಟಿ!

10ನಿಮಿಷದ ಪಾತ್ರಕ್ಕೆ ಮಲ್ಲಿಕಾ ಕೇಳಿದ್ದು ಒಂದೂವರೆ ಕೋಟಿ!

Posted By:
Subscribe to Filmibeat Kannada


ಮಲ್ಲಿಕಾ ಶೆರಾವತ್‌ ಏನು ಮಾಡಿದರೂ ಅದು ದೊಡ್ಡ ಸುದ್ದಿಯಾಗೋದು ಹೊಸತೇನಲ್ಲ. ಆದರೆ ಇದಂತೂ ನಿಜಕ್ಕೂ ಸುದ್ದಿ. ಜೊತೆಗೆ ಅಸಲಿ ಸುದ್ದಿ. ಬಾಲಿವುಡ್‌ನ ನಟಿಮಣಿಯರು ಹೊಟ್ಟೆಕಿಚ್ಚು ಪಡುವಂತಹ ಸುದ್ದಿ!

ನಾಸಿಕ ಗಾಯಕ ಹಿಮೇಶ್‌ ರೇಷಮಿಯಾ ಅವರ ಚೊಚ್ಚಲ ಚಿತ್ರ ‘ಆಪ್‌ ಕೆ ಸುರೂರ್‌’ ಬಗ್ಗೆ ಬಾಲಿವುಡ್‌ ನಿರೀಕ್ಷೆ ಇಟ್ಟಿದೆ. ಈ ಚಿತ್ರದಲ್ಲಿ 10 ನಿಮಿಷ ಕಾಣಿಸಿಕೊಳ್ಳಲು ಮಲ್ಲಿಕಾ ಕೇಳಿದ್ದು , ಬರೋಬ್ಬರಿ ಒಂದೂವರೆ ಕೋಟಿ ಮಾತ್ರ!

ಪ್ರತಿ ನಿಮಿಷಕ್ಕೆ 15 ಲಕ್ಷ ರೂ. ನಂತೆ ಒಂದೂವರೆ ಕೋಟಿ ಸಂಭಾವನೆ ಪಡೆಯಲು ಹೊರಟಿರುವ ಬೆಡಗಿ ಮಲ್ಲಿಕಾ. ಈಕೆ ಬಾಲಿವುಡ್‌ನ ಎಲ್ಲಾ ನಟ-ನಟಿಯರಿಗಿಂತ ದುಬಾರಿ. ಬಾಲಿವುಡ್‌ನ ಇತಿಹಾಸದಲ್ಲೇ ಈ ರೀತಿ ಸಂಭಾವನೆ ಪಡೆದವರು ಯಾರು ಇಲ್ಲ. ಬೇಕಾದರೆ ಹಾಲಿವುಡ್‌ನಲ್ಲಿ 1978ರಲ್ಲಿ ತೆರೆಕಂಡ ‘ ಸೂಪರ್‌ಮ್ಯಾನ್‌’ ಚಿತ್ರದಲ್ಲಿ ನಟಿಸಿದ ನಟ ಮರ್ಲನ್‌ ಬ್ರಾಂಡೋ ಅವರಿಗೆ ಹೋಲಿಸಬಹುದು. ‘ಗಾಡ್‌ಫಾದರ್‌’ ಖ್ಯಾತಿಯ ನಟ ಮರ್ಲನ್‌ ಬ್ರಾಂಡೋ ಹತ್ತು ನಿಮಿಷದ ನಟನೆಗೆ ಆಗ 14 ಮಿಲಿಯನ್‌ ಡಾಲರ್‌ ಪಡೆದು ಎಲ್ಲರ ಹುಬ್ಬೇರಿಸಿದ್ದರು.

ತನ್ನ ಬಳಕುವ ಸೊಂಟ, ಕುಲುಕುವ ಮೈಮಾಟದ ಬೆಲೆ ಅರಿತಿರುವ ಮಲ್ಲಿಕಾ, ನಟನೆಗಿಂತ ಹೀಗೆ ಬಂದು ಹಾಗೆ ಹೋಗೋ ಪಾತ್ರವಾದರೆ ಸೈ ಅನ್ನುತ್ತಿದ್ದಾಳೆ. ಇದರ ಜತೆಗೆ ಐಟಂ ಸಾಂಗ್ಸ್‌ ಅಂತೂ ಇದ್ದದ್ದೇ ಬಿಡಿ.

ಮಲ್ಲಿಕಾ ಯಾವುದಾದರೂ ಶುಭ ಕಾರ್ಯಕ್ರಮದ ಉದ್ಘಾಟನೆಗೆ ಹೋದಳು ಅಂದ್ರೆ 15ರಿಂದ 20 ಲಕ್ಷ ರೂ. ಆಕೆಯ ಜೋಳಿಗೆಗೆ ಬಿತ್ತು ಎಂದೆ ಆರ್ಥ.

ಪೂರಕ ಓದಿಗೆ
ಅಖಂಡ ಬ್ರಹ್ಮಚಾರಿ ವಿರುದ್ಧ ಎದೆ ಸೆಟೆಸಿದ ಮಲ್ಲಿಕಾ
ಮಲ್ಲಿಕಾಗೆ ನಿಮಿಷಕ್ಕೊಂದು ಲಕ್ಷ; ಕೊಟ್ಟರೆ ಮಾತ್ರ ಡ್ಯಾನ್ಸ್‌ ಭಿಕ್ಷ!
‘ಪ್ರೀತಿ ಏಕೆ ಭೂಮಿ ಮೇಲಿದೆ’ ಚಿತ್ರದಲ್ಲಿ ಮಲ್ಲಿಕಾ ಥಕಧಿಮಿತಾ

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada