»   » ಅಮಿತಾಬ್‌ : ಉತ್ತರ ಧ್ರುವದಿಂ ದಕ್ಷಿಣಕೂ..

ಅಮಿತಾಬ್‌ : ಉತ್ತರ ಧ್ರುವದಿಂ ದಕ್ಷಿಣಕೂ..

Posted By: Staff
Subscribe to Filmibeat Kannada

ಉತ್ತರಪ್ರದೇಶ ಚುನಾವಣೆಯ ನಂತರ ಸುದ್ದಿಕೇಂದ್ರದಿಂದ ದೂರವಿದ್ದ ಅಮಿತಾಭ್‌ ಬಚ್ಚನ್‌ ಮತ್ತೆ ಸುದ್ದಿಯಲ್ಲಿದ್ದಾರೆ. ಅವರ ಹೊಸ ಚಿತ್ರ ಈಗ ಕುತೂಹಲದ ಕೇಂದ್ರ ಬಿಂದು. ವಿಷಯವಿಷ್ಟೇ- ಅಮಿತಾಭ್‌ ದಕ್ಷಿಣ ಭಾರತ ಚಿತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಅದು ಕನ್ನಡ ಸಿನಿಮಾ ಅಲ್ಲ , ತಮಿಳು- ರಜನಿಕಾಂತ್‌ರ ಬಾಬಾ!

ತಮಿಳಿನ ಸೂಪರ್‌ ಸ್ಟಾರ್‌ ರಜನಿಕಾಂತ್‌ರ ಬಹು ನಿರೀಕ್ಷೆಯ ಹಾಗೂ ಭಾರೀ ಬಜೆಟ್ಟಿನ ಬಾಬಾ ಚಿತ್ರದ ಪ್ರಮುಖ ಪಾತ್ರದಲ್ಲಿ ನಟಿಸಲು ಬಚ್ಚನ್‌ ಒಪ್ಪಿಕೊಂಡಿದ್ದಾರೆ. ಆದರೆ, ಈವರೆಗೂ ಅಮಿತಾಬ್‌ ಪಾತ್ರದ ಸ್ವರೂಪ ಇನ್ನೂ ಸ್ಪಷ್ಟವಾಗಿಲ್ಲ . ರಜನಿ ಕರೆದರು, ಅಮಿತಾಬ್‌ ಮರು ಮಾತಿಲ್ಲದೆ ಒಪ್ಪಿಕೊಂಡರು. ಅದು ಮೇರು ನಟನೊಬ್ಬ ಇನ್ನೊಬ್ಬ ಮೇರು ನಟನಿಗೆ ಸಲ್ಲಿಸಿದ ಗೌರವ.

ಬಚ್ಚನ್‌ ಅಷ್ಟೇ ಅಲ್ಲ - ದಕ್ಷಿಣ ಭಾರತದ ಇತರ ಭಾಷೆಗಳ ಪ್ರಮುಖ ನಟರೂ ಬಾಬಾ ಚಿತ್ರದಲ್ಲಿ ನಟಿಸುತ್ತಿದ್ದಾರೆ. ತೆಲುಗಿನ ಮೋಹನ್‌ ಬಾಬು, ಪ್ರಕಾಶ್‌ ರೈ, ಆಶಿಷ್‌ ವಿದ್ಯಾರ್ಥಿ, ಸೆಂಥಿಲ್‌, ಗೌಂಡಮಣಿ, ವಿವೇಕ್‌.. ಮುಂತಾಗಿ ಭಾರೀ ತಾರಾಗಣವಿದೆ.

ಮೊನಿಷ ಕೊಯಿರಾಲ ಬಾಬಾ ಚಿತ್ರದ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಚಿತ್ರದ ಇನ್ನೊಬ್ಬ ನಾಯಕಿ ಸಾಂಘವಿ. ಈ ನಡುವೆ ಬಾಬಾ ಚಿತ್ರ ಬಿಡುಗಡೆಗೆ ಜನಪ್ರಿಯತೆಯನ್ನು ಕುದುರಿಸಲು ರಜನಿ ನಾನಾ ರೀತಿ ಸೈಕಲ್‌ ಹೊಡೆಯುತ್ತಿದ್ದಾರೆ. ಜಪಾನಿನ ಕಯ್ಕಾ ಯಮಾತಾ ರಜನೀಕಾಂತ್‌ರ ದತ್ತು ಸೋದರಿಯಾಗಿ ಅಭಿನಯಿಸುತ್ತಿರುವುದು ವಿಶೇಷ. ಅಂದಹಾಗೆ, ಆಗಸ್ಟ್‌ನಲ್ಲಿ ಬಾಬಾ ಚಿತ್ರ ತಮಿಳು ಹಾಗೂ ತೆಲುಗು ಭಾಷೆಗಳಲ್ಲಿ ಏಕ ಕಾಲದಲ್ಲಿ ಬಿಡುಗಡೆಯಾಗಲಿದೆ!

English summary
Amitabh Bacchan enters South Indian movies with Baba

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada