»   » ಶಿವರಾಜ್‌ ಕಾಲ ಮುಗಿದೇಹೋಯಿತು

ಶಿವರಾಜ್‌ ಕಾಲ ಮುಗಿದೇಹೋಯಿತು

Posted By: Super
Subscribe to Filmibeat Kannada

'ಅಪ್ಪು ಈಗ ನಂಬರ್‌ ಒನ್‌. ಚೆನ್ನಾಗಿ ಹೋಗ್ತಿದೆ. ನಂಗೆ ಆನಂದ್‌ನಲ್ಲಿ ಸಿಕ್ಕ ಸ್ವಾಗತವೇ ಪುನೀತ್‌ಗೂ ಸಿಕ್ಕಿದೆ."

- ಶಿವಣ್ಣ ಖುಷಿಯಾಗಿದ್ದರು. ಅಪ್ಪು ಯಶಸ್ಸು ಅವರಿಗೆ ಖುಷಿ ತಂದಿತ್ತು . ಅಂದಹಾಗೆ, ಅದು ಅಪ್ಪು ಚಿತ್ರದ ಸಂತೋಷ ಕೂಟವಲ್ಲ ; ಕೋದಂಡರಾಮ ಚಿತ್ರದ ಸಂತೋಷ ಕೂಟ. ಸಿನಿಮಾ ನೂರು ದಿನ ಓಡದ ಹೊರತು ಅಣ್ಣಾವ್ರ ಕ್ಯಾಂಪು ಸಂತೋಷ ಕೂಟ ನಡೆಸುವುದಿಲ್ಲ .

ಮುಂದಿನ ಚಿತ್ರಗಳು, ಕೋದಂಡರಾಮ ಚಿತ್ರದ ಯಶಸ್ಸು , ಕೋದಂಡರಾಮ ಚಿತ್ರದಲ್ಲಿನ ತಮ್ಮ ಪಾತ್ರ ಮುಂತಾಗಿ ಶಿವಣ್ಣನವರ ಮಾತು ಹೊರಳಿತು. ಸ್ಮೈಲ್‌ ಚಿತ್ರ ತುಂಬಾ ಚೆನ್ನಾಗಿ ಬರುತ್ತಿದೆ. ಕಾರಂತರು ಕತೆಯ ಎಳೆ ಹೇಳಿದಾಗಲೇ ಆಕರ್ಷಕವಾಗಿತ್ತು . ಚಿತ್ರೀಕರಣ ಇನ್ನೂ ಚೆನ್ನಾಗಿ ಬರುತ್ತಿದೆ ಎಂದು ಶಿವಣ್ಣ ನಕ್ಕರು.

ಸ್ಮೈಲ್‌ ನಂತರ ತವರಿಗೆ ಬಾ ತಂಗಿ ಚಿತ್ರ. ಇದು ತುಂಬಾ ಸೆಂಟಿಮೆಂಟ್‌ ಸಿನಿಮಾ. ಮುತ್ತಣ್ಣ ನಂತರ ಇಂಥ ಪಾತ್ರವೇ ಸಿಕ್ಕಿರಲಿಲ್ಲ . ತಂಗಿ ನಂತರ ರಾಮಜನ್ಮ ಭೂಮಿ ಚಿತ್ರವಿದೆ. ಇದು ಆ್ಯಕ್ಷನ್‌ ಚಿತ್ರ ಎಂದರು ಶಿವಣ್ಣ . ಈ ನಡುವೆ ಶಿವಣ್ಣ , ಸುರೇಶ್‌ಗೌಡರ ಡಾನ್‌ ಎನ್ನುವ ಚಿತ್ರ ಒಪ್ಪಿಕೊಂಡಿರುವುದಾಗಿಯೂ, ಮೂವರು ಮಕ್ಕಳೊಂದಿಗೆ ಅಣ್ಣಾವ್ರು ನಟಿಸುವ ಚಿತ್ರವೊಂದನ್ನು ನಿರ್ದೇಶಿಸುವ ಕುರಿತಾಗಿಯೂ ಸುದ್ದಿಗಳು ಚಾಲ್ತಿಯಿವೆ. ಯಾವುದನ್ನೂ ಶಿವಣ್ಣ ದೃಢೀಕರಿಸಲಿಲ್ಲ .

ಅಂದಹಾಗೆ, ಶಿವಣ್ಣ ಈಗ ಸ್ಲಿಂ ಆಗಿದ್ದಾರೆ ! ನೋ ಕೊಬ್ಬು !

English summary
Shivanna is happy about the success of Appu

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada