»   » ತುಂಟಾಟಕ್ಕೆ ಡಜನ್ನು ಥಿಯೇಟರುಗಳು ಸಾಕೆ?

ತುಂಟಾಟಕ್ಕೆ ಡಜನ್ನು ಥಿಯೇಟರುಗಳು ಸಾಕೆ?

Posted By: Staff
Subscribe to Filmibeat Kannada

ಲಂಕೇಶ್‌ ಪುತ್ರ ಇಂದ್ರಜಿತ್‌ ಚೊಚ್ಚಲ ನಿರ್ದೇಶನದ ಚಿತ್ರ ತುಂಟಾಟ ಇಂದಿನಿಂದ (ಮೇ 24) ಪ್ರಾರಂಭ; ಬೆಂಗಳೂರಿನ ಎರಡೇ ಎರಡು ಚಿತ್ರಮಂದಿರಗಳಲ್ಲಿ. ರಾಜ್ಯಾದ್ಯಂತ ಕೇವಲ ಒಂದು ಡಜನ್ನು ಥಿಯೇಟರುಗಳಲ್ಲಿ !

ಹೆಸರಿಗೆ ತಕ್ಕಂತೆ ಇರುವ ಈ ಚಿತ್ರ ಹದಿಹರೆಯದವರ ಹೃದಯಕ್ಕೆ ಲಗ್ಗೆ ಇಡುವುದು ಗ್ಯಾರಂಟಿ ಎಂಬ ನಿರೀಕ್ಷೆ ಇಟ್ಟುಕೊಂಡು ಇಂದ್ರಜಿತ್‌ ಕೂತಿದ್ದರೆ, ಹೊಸಬರ ಭರಾಟೆಯಲ್ಲಿ ಪ್ರೇಕ್ಷಕ ಎಲ್ಲರನ್ನೂ ಸ್ವೀಕರಿಸುತ್ತಾ ಥಿಯೇಟರಿನ ಸಮಸ್ಯೆ ತಂದೊಡ್ಡಿರುವುದೂ ಖರೆ. ತುಂಟಾಟ ಈಗಾಗಲೇ ತನ್ನ ಬಜೆಟ್ಟನ್ನು ವಾಪಸ್ಸು ತಂದುಕೊಟ್ಟಿದೆ ಅಂತ ನಿರ್ಮಾಪಕ ಬಾಲಚಂದ್ರ ಹೇಳುತ್ತಿರುವುದು ದಿಟವಿರಬಹುದು. ಆದರೆ ಒಂದು ಚಿತ್ರದ ಮೊದಲ ವಾರದ ಗಳಿಕೆ ಬಲು ಮುಖ್ಯ. ಬೆಂಗಳೂರಲ್ಲಿ ದಿನಂಪ್ರತಿ ತುಂಟಾಟದ ನಾಲ್ಕು ಪ್ರದರ್ಶನಗಳು ಇರುವ ಏಕೈಕ ಥಿಯೇಟರೆಂದರೆ ಸಾಗರ್‌. ನಳಂದಾದಲ್ಲಿ ಬೆಳಗಿನ ಆಟ. ಅಪರೂಪಕ್ಕೆ ಕನ್ನಡ ಚಿತ್ರ ತೋರುವ ಸಾಗರ್‌ ಚಿತ್ರಮಂದಿರ ಮೆಜೆಸ್ಟಿಕ್‌ನಿಂದ ಕೊಂಚ ದೂರ. ಈ ಚಿತ್ರಮಂದಿರಕ್ಕೆ ಹಾದು ಬರುವಾಗ ಅಪ್ಪು, ಚಂದು, ನಿನಗಾಗಿಯ ವಿಜಯ ರಾಘವೇಂದ್ರ, ಫ್ರೆಂಡ್ಸ್‌, ಉಪ್ಪಿಯ ಎಚ್‌ಟುಒಗಳ ಸೆಳಕು ಇದ್ದೇ ಇರುತ್ತದೆ. ಎಚ್‌ಟುಒ ಹೊರತುಪಡಿಸಿ ಉಳಿದೆಲ್ಲಾ ಚಿತ್ರಗಳು ಸಾಕಷ್ಟು ಗಲ್ಲಾ ಪೆಟ್ಟಿಗೆಯ ಗಲ್ಲಾ ತುಂಬಿಸುತ್ತಿವೆ. ಜೊತೆಗೆ ಈ ಚಿತ್ರಗಳ ನಾಯಕ- ನಾಯಕಿಯರಲ್ಲಿ ಹೊಸಬರೇ ಹೆಚ್ಚು. ತುಂಟಾಟದ ಮುಖಗಳೂ ಅಷ್ಟೇ, ಫ್ರೆಷ್‌ ಅನ್ನುವಂಥವು. ಛಾಯಾಸಿಂಗ್‌, ಅನಿರುದ್ಧ್‌, ರೇಖಾ ಮೂವರೂ ಇದೀಗ ಎದ್ದು ನಿಂತಿರುವವರು.

ರೇಖಾಳ ಗ್ಲಾಮರ್‌ ತೋರಿಸುವ ಬಣ್ಣ ಬಣ್ಣದ ಹೋರ್ಡಿಂಗ್‌ಗಳು ಬೆಂಗಳೂರಿನ ಪ್ರಮುಖ ಆಕರ್ಷಣೆ. ಆದರೆ, ಚಿತ್ರ ಸಂಗೀತ ಅಷ್ಟೇನೂ ಸದ್ದು ಮಾಡಿಲ್ಲ. ಹೊಸಬರೆಲ್ಲಾ ನಗುತ್ತಿರುವ ಇವತ್ತಿನ ಪರಿಸ್ಥಿತಿಯಲ್ಲಿ ತುಂಟಾಟಕ್ಕೆ ನಿಜವಾಗಿ ಅಗ್ನಿಪರೀಕ್ಷೆ. ಅದು ಗೆಲ್ಲುತ್ತದೋ ಇಲ್ಲವೋ? ಪ್ರೇಕ್ಷಕನೇ ತೀರ್ಮಾನಿಸುತ್ತಾನೆ.

English summary
New release : Indrajis Tuntata
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada