»   » ಗೌಡರಿರುವ ಮನೆಗೆ ದೀಪ ದೇವರ್ಯಾಕೆ...!!

ಗೌಡರಿರುವ ಮನೆಗೆ ದೀಪ ದೇವರ್ಯಾಕೆ...!!

Subscribe to Filmibeat Kannada
  • ಸಿನಿ ಡೆಸ್ಕ್‌, ದಟ್ಸ್‌ ಕನ್ನಡ ಬ್ಯೂರೋ
ಗಂಧದ ಕದ... ಚೆಂದದ ಪದ...
ಗುಡಿಯ ಮಾಡಿತಮ್ಮ... ನಮ್ಮ ಪುಟ್ಟ ಮನೆಯ ಗೌಡರಿರುವ ಮನೆಗೆ ದೀಪ ದೇವರ್ಯಾಕೆ
ದೇವರಿರುವ ಮನೆಗೆ ಬೀಗ ಬಾಗಿಲ್ಯಾಕೆ...!!

ಇದು ಅಂಬರೀಷ್‌ ಅಭಿನಯದ 200ನೇಚಿತ್ರದ ಪೀಠಿಕೆ. ಚಿತ್ರ ‘ಗೌಡ್ರು’. ಈ ಬಾರಿ ಅಂಬರೀಷ್‌ಗೆ ಕೇಂದ್ರ ಸಚಿವರಾಗುವ ಭಾಗ್ಯ ಸ್ವಲ್ಪದರಲ್ಲೇ ಕೈತಪ್ಪಿತು. ಆದರೇನು ಅವರ ವರ್ಚಸ್ಸು ಗಾಂಧಿನಗರದಲ್ಲಿ ಕುಂದಲಿಲ್ಲ. ಅವರು ಸಿನಿಮಾದಲ್ಲಿನ ತನ್ನ ಪ್ರಭಾವಲಯವನ್ನು ಉಳಿಸಿಕೊಂಡಿದ್ದಾರೆ. ‘ಗೌಡ್ರು’ ಇದಕ್ಕೆ ಸಾಕ್ಷಿ.

ನಿರ್ಮಾಪಕ ಸಂದೇಶ್‌ ನಾಗರಾಜ್‌ ಅವರ ‘ಸಂದೇಶ್‌ ಕಂಬೈನ್ಸ್‌ ’ಲಾಂಛನದಲ್ಲಿ ಚಿತ್ರ ನಿರ್ಮಾಣಗೊಳ್ಳುತ್ತಿದೆ. ಮಂಡ್ಯದ ಸಂಸದನ ಈ ಚಿತ್ರದ ಮರ್ಮ voice of the people. ಅತ್ತ ರಾಜಕೀಯದ ವರ್ಚಸ್ಸು ಇತ್ತ ಸಿನಿಮಾದ ತುಡಿತಕ್ಕೆ ಒಂದೇ ಉತ್ತರ ನೀಡುವ ಬಯಕೆ ಈ ಕಾಂಗ್ರೆಸಿಗನದು. ಇನ್ನೊಂದೆಡೆ ಒಕ್ಕಲಿಗ ನಾಯಕತ್ವ?.

ಸಿನಿಮಾ ನಿರ್ದೇಶನ ಎಸ್‌.ಮಹೇಂದರ್‌. ಅಂಬಿಗೆ ನಾಯಕಿಯರಾಗಿ ‘ತವರೂರ’ ನಟಿ ಶ್ರುತಿ ಮತ್ತು ‘ಸ್ವಾತಿಮುತಿ’ನ ಮೀನಾ ನಟಿಸಲಿದ್ದಾರೆ. ಚಿತ್ರಕ್ಕೆ ಸಂಗೀತ ಹಂಸಲೇಖ, ಛಾಯಾಗ್ರಹಣ ಸುಂದರ್‌ನಾಥ್‌ ಸುವರ್ಣ ಅವರದ್ದು.

ಈ ಕಾಂಗ್ರೆಸಿಗನ ‘ಗೌಡ್ರು’ ಮತ್ತು ಬಿಜೆಪಿ ಬ್ರಾಂಡ್‌ ವಿಜಯ ಶಾಂತಿಯ ‘ಗೌಡ್ತಿ ’ಚಿತ್ರಗಳು ಜೊತೆ-ಜೊತೆಯಲ್ಲಿ ಬಿಡುಗಡೆಯಾಗುವ ನಿರೀಕ್ಷೆಯಿದೆ. ಜನ ಯಾವುದನ್ನು ಒಪ್ಪಿ ಅಪ್ಪಿ ಕೊಳ್ಳುತ್ತಾರೆಂದು ಕಾದು ನೋಡೋಣ. ಒಂದಂತು ನಿಜ, ಜನರಿಗೆ ಕಾಂಗ್ರೆಸ್‌ ‘ಗೌಡ್ರು’ ಅಥಾವ ಬಿಜೆಪಿ ‘ಗೌಡ್ತಿ ’ಬೇಡ. ಬೇಕಾಗಿರುವುದು ಮನಸ್ಸಿಗೆ ಕೊಂಚ ಮುದ ನೀಡುವ ಒಂದು ಅರ್ಥಪೂರ್ಣ ಸಿನಿಮಾ.

Post your views

ಮುಖಪುಟ / ಸ್ಯಾಂಡಲ್‌ವುಡ್‌

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada