»   » ‘ಚಂದ್ರಮುಖಿ’ ಗಳಿಕೆ 70ಕೋಟಿ, ರಜನಿಗೆ 15 ಕೋಟಿ...!

‘ಚಂದ್ರಮುಖಿ’ ಗಳಿಕೆ 70ಕೋಟಿ, ರಜನಿಗೆ 15 ಕೋಟಿ...!

Subscribe to Filmibeat Kannada

ತಮಿಳು ಸೂಪರ್‌ಸ್ಟಾರ್‌ ರಜನೀಕಾಂತ್‌ ದಕ್ಷಿಣ ಏಷ್ಯಾದಲ್ಲೇ ಎರಡನೇ ಗರಿಷ್ಠ ಸಂಭಾವನೆ ಪಡೆಯುವ ನಟ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

ಮೂಲವೊಂದರ ಪ್ರಕಾರ ಅವರು, ಪ್ರತಿ ಸಿನಿಮಾಗೆ ತೆಗೆದುಕೊಳ್ಳುವ ಸಂಭಾವನೆ 10ರಿಂದ 15ಕೋಟಿ ರೂಪಾಯಿ. ಬಾಲಿವುಡ್‌ ನಟರಾದ ಅಮಿತಾಭ್‌ ಬಚ್ಚನ್‌, ಶಾಹ್‌ರುಖ್‌ ಖಾನ್‌ ಕೂಡ ಇಷ್ಟು ಸಂಭಾವನೆ ಪಡೆಯುತ್ತಿಲ್ಲ. ಅಂದರೆ ಸದ್ಯಕ್ಕೆ, ಭಾರತದಲ್ಲೇ ಅತ್ಯಂತ ಹೆಚ್ಚು ಸಂಭಾವನೆ ಪಡೆಯುತ್ತಿರುವ ನಟ ಎಂದರೆ ರಜನೀಕಾಂತ್‌.

ಹೊರದೇಶಗಳಲ್ಲಿ ಬಾಲಿವುಡ್‌(ಹಿಂದಿ ಭಾಷೆಯ ಚಿತ್ರಗಳು) ಚಿತ್ರಗಳಿರುವಷ್ಟು ಪ್ರೇಕ್ಷಕರು ಇತರ ಭಾರತೀಯ ಭಾಷಾ ಚಿತ್ರಗಳಿಗಿಲ್ಲ. ಅವೆಲ್ಲ ಪ್ರಾದೇಶಿಕ ಪ್ರೇಕ್ಷಕರನ್ನೇ ನೆಚ್ಚಿಕೊಳ್ಳಬೇಕು. ಪರಿಸ್ಥಿತಿ ಹೀಗಿದ್ದರೂ ಕನ್ನಡದ ‘ಆಪ್ತಮಿತ್ರ’ ಚಿತ್ರದ ರೀಮೇಕ್‌ ‘ಚಂದ್ರಮುಖಿ’ ಚಿತ್ರಕ್ಕೆ ರಜನೀಕಾಂತ್‌ ತೆಗೆದುಕೊಂಡದ್ದು 14 ಕೋಟಿ ರೂಪಾಯಿ. ಈ ಚಿತ್ರ ಒಟ್ಟು 70ಕೋಟಿ ರೂಪಾಯಿ ಲಾಭ ಗಳಿಸಿದೆ. ಚಿತ್ರದಿಂದ ಸಂಗ್ರಹವಾದ ಒಟ್ಟು ಹಣದಲ್ಲಿ ಕಮಿಷನ್‌ ಕೂಡ ದೊರೆತಿದೆ. ಅಂದರೆ ರಜನಿ ಪಡೆದದ್ದು ಒಟ್ಟು ಸುಮಾರು 15ಕೋಟಿ ರೂಪಾಯಿ.

ಕನ್ನಡದ ಈ ನಟ ತಮಿಳಿಗೆ ವಲಸೆ ಹೋಗಿ, ಅಲ್ಲಿನಪ್ರೇಕ್ಷಕರ ಆರಾಧ್ಯ ದೈವ ಎನಿಸಿಕೊಂಡಿರುವುದು ಇತಿಹಾಸ. ಇದಲ್ಲದೆ ಎಂಜಿಆರ್‌ಗಿಂತಲೂ ಹೆಚ್ಚಿನ ಜನಪ್ರಿಯತೆ ಗಳಿಸಿದ್ದಾರೆ ಎಂಬ ಮಾತು ಚಲಾವಣೆಯಲ್ಲಿದೆ. ಈ ಎಲ್ಲ ಬೆಳವಣಿಗೆಗಳ ಹಿನ್ನೆಲೆಯಲ್ಲಿ ಅವರನ್ನು ರಾಜಕೀಯಕ್ಕೆ ಕರೆತರಲು ಕೆಲವು ಪಕ್ಷಗಳು ಕಳೆದ ಕೆಲವು ವರ್ಷಗಳಿಂದ ಯತ್ನಿಸುತ್ತಿರುವುದು ಕೂಡ ಗುಟ್ಟಾಗಿ ಉಳಿದಿಲ್ಲ. ಸಂಭಾವನೆ ವಿಚಾರದಲ್ಲಿ ಇದೀಗ ಅವರು ಮತ್ತೊಮ್ಮೆ ಸುದ್ದಿಯಲ್ಲಿದ್ದಾರೆ.

Post your views

ಮುಖಪುಟ / ಸ್ಯಾಂಡಲ್‌ವುಡ್‌

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada