»   » ಕನಸೊ ಇದು ನನಸೊ ಇದು

ಕನಸೊ ಇದು ನನಸೊ ಇದು

Subscribe to Filmibeat Kannada


ಗಣೇಶ್, ಅಮೂಲ್ಯ ಅಭಿನಯದ ಚೆಲುವಿನ ಚಿತ್ತಾರ ಚಿತ್ರದ ಹಾಡುಗಳು ಎಲ್ಲರ ಬಾಯಲ್ಲೂ ನಲಿದಾಡುತ್ತಿವೆ. ಎಸ್. ನಾರಾಯಣ್ ಬರೆದ ಹಾಡುಗಳಿಗೆ ಮಧುರ ಸಂಗೀತ ನೀಡಿದವರು; ಮನೋಮೂರ್ತಿ.


ನನ್ನೆದೆಯಲಿ ತಂದ ಮೊದಲ ಸಿಂಚನ
ನಾನಿಲ್ಲಲಿ ನೀನನ್ನಲಿ
ಅಂದುಕೊಂಡರೆ ಎಂಥ ರೋಮಾಂಚನ
ಅಂತರಂಗದಾ ಆಹ್ವಾನವೆ
ಹೃದಯ ಮೀಟುವ ಶುಭ ಆರಂಭವು
ಪ್ರೀತಿ ಜನಿಸುವ ಆ ಗರ್ಭಕೆ
ಕಣ್ಣ ಭಾಷೆಯು ಎಂಥಾ ಆಹ್ಲಾದವು


ನನ್ನೆದೆಯಲಿ ಬಂದ ಪ್ರೇಮ ಸಿಂಚನ
ನಾನಿಲ್ಲಲಿ ನೀನನ್ನಲಿ
ಅಂದುಕೊಂಡರೆ ಎಂಥ ರೋಮಾಂಚನ

ಪ್ರೀತಿ ನೀ ಹುಟ್ಟೊದೆಲ್ಲಿ ನಿನ್ನ ಆ ತವರೂರೆಲ್ಲಿ
ನಿಂಗೆ ತಾಯ್ತಂದೆ ಯಾರು ನೀ ಹೇಳೆಯ
ನಿನಗಿಂತಲೂ ರುಚಿ ಯಾವುದು
ನೀನಿದ್ದರೆ ಬೇರೆ ಬೇಕೆನಿಸದು
ಪ್ರೀತಿ ನಿಂಗಷ್ಟ ಯಾರು ನಿನ್ನ ಕೈಗೊಂಬೆ ಇವರು
ಇವರ ಆಸೆಯ ತುಂಬ ನೀ ಹರಿಯುವೆ
ನಿನ ಸ್ನೇಹವೇ ಬಲು ಸುಂದರ
ನೀನಿದ್ದರೆ ಇಲ್ಲಿ ಸುಖ ಸಾಗರ


ನನ್ನೆದೆಯಲಿ ಬಂದ ಪ್ರೇಮ ಸಿಂಚನ
ನಾನಿಲ್ಲಲಿ ನೀನನ್ನಲಿ
ಅಂದುಕೊಂಡರೆ ಎಂಥ ರೋಮಾಂಚನ

ಪ್ರೀತಿ ಈ ಹೃದಯಗಳನ್ನು ನೀನು ಆವರಿಸಿಕೊಣ್ಡೆ
ನಿನ್ನ ಇಷ್ಟಾನುಸಾರ ಕರೆದೊಯ್ಯುವೆ
ಇವರಿಬ್ಬರು ಮತಿಹೀನರು
ನಿನ ಮುಷ್ಠಿಗೆ ಇಲ್ಲಿ ಶರಣಾದರು
ಪ್ರೀತಿ ಈ ಸಂಭ್ರಮದಲ್ಲಿ ಇವರ ಈ ಸಂಗಮದಲ್ಲಿ
ಕಣ್ಣ ಕರೆಯೋಲೆಗಳಲ್ಲಿ ನೀನಿಲ್ಲವೆ
ನಿನಗಿಂತಲೂ ಹಿತ ಯಾವುದು
ನಿನ್ನಿದಂಲೆ ತಾನೆ ಜಗ ನಲಿವುದು


ನನ್ನೆದೆಯಲಿ ತಂದ ಮೊದಲ ಸಿಂಚನ
ಅಂತರಂಗದಾ ಆಹ್ವಾನವೆ
ಹೃದಯ ಮೀಟುವ ಶುಭ ಆರಂಭವು
ಪ್ರೀತಿ ಜನಿಸುವ ಆ ಗರ್ಭಕೆ
ಕಣ್ಣ ಭಾಷೆಯು ಎಂಥಾ ಆಹ್ಲಾದವು

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada