»   » ಪುನೀತ್ ಹೊಸ ಚಿತ್ರ ಮಿಲನದಲ್ಲಿ ಪೂಜಾ ಗಾಂಧಿ!

ಪುನೀತ್ ಹೊಸ ಚಿತ್ರ ಮಿಲನದಲ್ಲಿ ಪೂಜಾ ಗಾಂಧಿ!

Subscribe to Filmibeat Kannada


ಹೆಸರು ಬದಲಿಸಿಕೊಂಡ ಮೇಲೆ ಸಂಜನಾ ಗಾಂಧಿ, ಕ್ಷಮಿಸಿ ಪೂಜಾ ಗಾಂಧಿ ಸಿನಿಮಾ ಬದುಕಿನ ಗ್ರಾಫ್ ಏರುಗತಿಯಲ್ಲಿದೆ! ಈಗ ಪುನೀತ್ ಚಿತ್ರಕ್ಕೂ ಅವರ ಪ್ರವೇಶವಾಗಿದೆ!

ಮುಂಗಾರು ಮಳೆ ಚಿತ್ರದಲ್ಲಿ ನನಗೆ ಸರಿಯಾಗಿ ಮೇಕಪ್ ಮಾಡಲಿಲ್ಲ.ನನ್ನ ಪಾತ್ರದ ಬಗ್ಗೆ ಯಾರು ಮಾತಾಡುತ್ತಿಲ್ಲ..ಎಂದು ಗೊಣಗಿದ್ದ ಸಂಜನಾ,ಮುನಿಸಿಕೊಂಡಿದ್ದರು. ಮುಂಗಾರು ಮಳೆಗೆಲುವಿನ ನಂತರ ಚಿತ್ರದ ನಿರ್ದೇಶಕ, ನಾಯಕ, ಸಂಗೀತ ನಿರ್ದೇಶಕ ಹೀಗೆ ಎಲ್ಲರೂ ಬಿಜಿಯಾಗಿದ್ದರು. ಆದರೆ ಸಂಜನಾ ಕೆಲಸವಿಲ್ಲದೇ, ಕೆಲವು ದಿನ ಮನೆ ಸೇರಿದ್ದರು! ನನ್ನ ಪಾತ್ರವನ್ನು ಪ್ರೇಕ್ಷಕರು ಮೆಚ್ಚಿದ್ದಾರೆ, ಆದರೂ ನಿರ್ಮಾಪಕರು ನನಗೆ ಅವಕಾಶ ಕೊಡ್ತಾಯಿಲ್ಲವಲ್ಲ ಎಂದು ಸಂಜನಾ ಕೊರಗಿದ್ದರು.

ಆದರೆ ಈಗ ಎಲ್ಲವೂ ಸರಿ ಹೋಗಿದೆ. ಅವಕಾಶಗಳು ಹುಡುಕಿಕೊಂಡು ಬರುತ್ತಿವೆ. ಪ್ರಸ್ತುತ ಪುನೀತ್ ರಾಜ್ ಕುಮಾರ್ ಅಭಿನಯದ ಮಿಲನಚಿತ್ರದಲ್ಲಿ ಪೂಜಾ ಗಾಂಧಿಗೊಂದು ಪ್ರಮುಖ ಪಾತ್ರ ಸಿಕ್ಕಿದೆ. ಪ್ರಕಾಶ್ ನಿರ್ದೇಶನದ ಈ ಚಿತ್ರದ ನಾಯಕಿ ಪಾರ್ವತಿ. ಚಿತ್ರದ ಪ್ಲಾಷ್ ಬ್ಯಾಕ್ ನಲ್ಲಿ ಪುನೀತ್ ಸಂಗಾತಿಯಾಗಿ ಚಿತ್ರದಲ್ಲಿ ಸಂಜನಾ ಕಾಣಿಸಿಕೊಳ್ಳಲಿದ್ದಾರೆ. ಈ ಚಿತ್ರದ ಬಗ್ಗೆ, ಪುನೀತ್ ಜೊತೆ ಅಭಿನಯಿಸುವ ಅವಕಾಶ ಸಿಕ್ಕಿದ್ದಕ್ಕೆ ಪೂಜಾಗೆ ಬಲು ಖುಷಿ. ದುಷ್ಯಂತ್ ಈ ಚಿತ್ರದ ನಿರ್ಮಾಪಕ.

ಜಗ್ಗೇಶ್ ಜೊತೆಕೋಡಗನ ಕೋಳಿ ನುಂಗಿತ್ತಾ?, ಗಣೇಶ್ ಜೊತೆ ಕೃಷ್ಣ, ಖಳನಟ ದಿವಂಗತ ಸುಧೀರ್ ಅವರ ಪುತ್ರ ತರುಣ್ ಜೊತೆ ಹನಿಹನಿ ಚಿತ್ರದಲ್ಲಿ ಪೂಜಾ ಗಾಂಧಿ ಅಭಿನಯಿಸುತ್ತಿದ್ದಾರೆ. ಪರಿಸ್ಥಿತಿ ಹೀಗೆಯೇ ಮುಂದುವರೆದರೆ, ಬೆಂಗಳೂರಿಗೆ ಬರುವ ಹಂಬಲ ಅವರದು. ಈಗಾಗಲೇ ಅರೆಬರೆ ಕನ್ನಡ ನುಡಿಯುವ ಪೂಜಾ, ಸದ್ಯದಲ್ಲೇ ಒಳ್ಳೆ ಕನ್ನಡ ಕಲಿಯುತ್ತಾರಂತೆ. ಅವರು ಯಾರಿಂದ ಅಆಇಈ ಹೇಳಿಸಿಕೊಳ್ಳುತ್ತಾರೋ?

Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada