»   » ರಾಧಾಗೆ ಐವತ್ತು!:ಕಿರುತೆರೆಗೆ ಮತ್ತೆ ಬಂದ ರವಿ ಬೆಳಗೆರೆ!

ರಾಧಾಗೆ ಐವತ್ತು!:ಕಿರುತೆರೆಗೆ ಮತ್ತೆ ಬಂದ ರವಿ ಬೆಳಗೆರೆ!

Posted By: Staff
Subscribe to Filmibeat Kannada

ಬೆಂಗಳೂರು, ಜುಲೈ 24: ಪ್ರತಿ ಸಂಜೆ 6.30ರಿಂದ 7ಗಂಟೆ ವರೆಗೆ ಈಟೀವಿಯಲ್ಲಿ ರಾಧಾಎನ್ನುವ ಧಾರಾವಾಹಿ ಪ್ರಸಾರವಾಗುತ್ತಿದೆ. ಈ ಧಾರಾವಾಹಿಯಲ್ಲಿ ಪತ್ರಕರ್ತ ಮತ್ತು ದಟ್ಸ್ ಕನ್ನಡ ಅಂಕಣಕಾರ ರವಿ ಬೆಳಗೆರೆ ಸಹಾ ನಟಿಸಿದ್ದಾರೆ. ಮಂಗಳವಾರ(ಜು.24)ರಾಧಾಗೆ 50ರ ಸಂಭ್ರಮ. 50ನೇ ಕಂತಿನಿಂದ ರವಿ ಪ್ರವೇಶ ಶುರು.

ಸಂಗೀತಗಾರ-ತತ್ವಜ್ಞಾನಿ ಪಾತ್ರದಲ್ಲಿ ರವಿ ಬೆಳಗೆರೆಯನ್ನು ಕಾಣಬಹುದಾಗಿದೆ. ಈ ಹಿಂದೆ ಮುಕ್ತ, ಪ್ರೀತಿ ಇಲ್ಲದ ಮೇಲೆಧಾರಾವಾಹಿಗಳಲ್ಲಿ ನಟಿಸಿ,ಕಿರುತೆರೆಯಲ್ಲಿ ಅವರು ತಮ್ಮಛಾಪು ಮೂಡಿಸಿದ್ದಾರೆ. ಅಂದ ಹಾಗೇ ರಾಧಾಧಾರಾವಾಹಿಯ ನಿರ್ದೇಶಕರು;ಸಂಜೀವ್ ತಗಡೂರು. ರವಿ ಬೆಳಗೆರೆಯ ಭಾವಿ ಅಳಿಯ ಶ್ರೀನಗರ ಕಿಟ್ಟಿ, ಧಾರಾವಾಹಿಯ ನಿರ್ಮಾಪಕರು.

ಗಿರೀಶ್ ಕಾಸರವಳ್ಳಿ ಪುತ್ರಿ ಅನನ್ಯಾ, ರಾಧಾಧಾರಾವಾಹಿಯಲ್ಲಿ ಅಭಿನಯಿಸುತ್ತಿದ್ದಾರೆ.

English summary
Journalist Ravi Belagere will be appear in tele serial Radha, which is being screened on ETV on every week days.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada