»   » ನೇತ್ರದಾನಕ್ಕೆ ‘ಬೇಡರ ಕಣ್ಣಪ್ಪ’ ಒಪ್ಪಿಗೆ

ನೇತ್ರದಾನಕ್ಕೆ ‘ಬೇಡರ ಕಣ್ಣಪ್ಪ’ ಒಪ್ಪಿಗೆ

Posted By: Staff
Subscribe to Filmibeat Kannada

ಬೆಂಗಳೂರು : ವರನಟ ಡಾ. ರಾಜ್‌ಕುಮಾರ್‌ ನೇತ್ರದಾನಕ್ಕೆ ಮುಂದಾಗಿದ್ದಾರೆ. ತಮ್ಮ ಮರಣದ ನಂತರ ಕಣ್ಣುಗಳು ವ್ಯರ್ಥವಾಗದೆ ಅಂಧರಿಗೆ ದಾರಿದೀಪವಾಗಲಿ ಎನ್ನುವ ಆಶಯದಿಂದ ರಾಜ್‌ಕುಮಾರ್‌ ಈ ತೀರ್ಮಾನವನ್ನು ಕೈಗೊಂಡಿದ್ದಾರೆ.

ನೇತ್ರದಾನದ ಬಗೆಗೆ ತಮ್ಮ ಸಂಪೂರ್ಣ ಒಪ್ಪಿಗೆ ಸೂಚಿಸುವ ಪತ್ರವನ್ನು ನಾರಾಯಣ ನೇತ್ರಾಲಯದ ವೈದ್ಯಕೀಯ ನಿರ್ದೇಶಕರಾದ ಡಾ.ಕೆ.ಭುಜಂಗಯ್ಯ ಶೆಟ್ಟಿಗೆ ರಾಜ್‌ ತಮ್ಮ ನಿವಾಸದಲ್ಲಿ ಸೋಮವಾರ (ಆ.23) ಹಸ್ತಾಂತರಿಸಿದರು.

ಆಗಸ್ಟ್‌ 25ರಿಂದ ಸೆಪ್ಟೆಂಬರ್‌8 ವರೆಗೆ ಬೆಂಗಳೂರಿನ ನಾರಾಯಣ ನೇತ್ರಾಲಯ ಕಣ್ಣಿನ ದಾನ ಪಡೆಯಲು ಅನೇಕ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ. ಜನರ ಮನವೊಲಿಸಿ, ಅರಿವು ಮೂಡಿಸಿ ನೇತ್ರದಾನದತ್ತ ಸೆಳೆಯಲಾಗುತ್ತಿದೆ. ್ಫಈ ಕಾರ್ಯಕ್ರಮದ ಹಿನ್ನೆಲೆಯಲ್ಲಿ ಡಾ.ರಾಜ್‌ರನ್ನು ಭೇಟಿ ಮಾಡಿದಾಗ, ರಾಜ್‌ ಉತ್ಸಾಹದಿಂದ ನೇತ್ರದಾನಕ್ಕೆ ಮುಂದಾದರು.

ಡಾ.ರಾಜ್‌ಕುಮಾರ್‌ರ ಧೋರಣೆಯನ್ನು ರಾಜ್ಯದಲ್ಲಿರುವ ಆಪಾರ ಅಭಿಮಾನಿಗಳು ಅನುಕರಿಸಿದರೆ, ಎಷ್ಟೋ ಅಂಧರ ಬದುಕಲ್ಲಿ ಬೆಳಕು ಮೂಡುತ್ತದೆ.(ಇನ್ಫೋ ವಾರ್ತೆ)

English summary
Dr. Rajkumar pledges to donate his eyes
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada