»   » ಕನ್ನಡೇತರ ಚಿತ್ರಗಳಿಗೆ ಏಳು ವಾರ ತಡೆ

ಕನ್ನಡೇತರ ಚಿತ್ರಗಳಿಗೆ ಏಳು ವಾರ ತಡೆ

Posted By: Staff
Subscribe to Filmibeat Kannada

ಹಿರಿಯನಟ ರಾಜಾನಂದ್‌ ಸ್ಥಿತಿ ಗಂಭೀರ ಏರು-ತ್ತಿ-ರು-ವ ಆಸ್ಪ-ತ್ರೆ ಬಿಲ್ಲು , ನೆರ-ವಿ-ಗೆ ಕುಟುಂ-ಬ-ದ ಮೊರೆ.

ಬೆಂಗಳೂರು: ಹಿರಿಯ ನಟ ಹಾಗೂ ರಂಗಭೂಮಿ ಕಲಾವಿದ ರಾಜಾನಂದ್‌, ಅನಾರೋಗ್ಯದಿಂದ ಬಳಲುತ್ತಿದ್ದಾರೆ. ತೀವ್ರ ಅಸ್ವಸ್ಥಗೊಂಡಿರುವ ಅವರನ್ನು ಮೈಸೂರಿನ ಬಾಲಗಂಗಾಧರನಾಥ ಸ್ವಾಮಿ ಅಪೊಲೋ ಅಸ್ಪತ್ರೆಗೆ ದಾಖಲಿಸಲಾಗಿದೆ. ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಸ್ಥಿತಿ ಗಂಭೀರವಾಗಿದೆ.

ವೈವಿಧ್ಯಮಯ ಪಾತ್ರಗಳ ಮೂಲಕ ರಾಜಾನಂದ್‌ ಪ್ರೇಕ್ಷಕರನ್ನು ರಂಜಿಸಿದ್ದರು. ಸುಮಾರು 318 ಚಿತ್ರಗಳಲ್ಲಿ ಅವರು ನಟಿಸಿದ್ದಾರೆ. ಕಾಲಿನ ಗ್ಯಾಂಗ್ರಿನ್‌ನಿಂದ ಬಳಲುತ್ತಿದ್ದ ರಾಜಾನಂದ್‌, ಇತ್ತೀಚೆಗೆ ಚೇತರಿಸಿಕೊಂಡಿದ್ದರು. ಆದರೆ ಮಧುಮೇಹ ಮತ್ತು ಕಿಡ್ನಿ ವೈಫಲ್ಯದ ಜೊತೆಗೆ -ಹೃದಯದ ತೊಂದರೆ ರಾಜಾನಂದ್‌ರನ್ನು ಕಾಡುತ್ತಿತ್ತು. ಅಪೊಲೋ ಅಸ್ಪತ್ರೆಯಲ್ಲಿ ಸಾವು-ಬದುಕಿನ ನಡುವೆ ರಾಜಾನಂದ್‌ ಹೋರಾಟ ನಡೆಸಿದ್ದಾರೆ.

ಸಂಕಷ್ಟ : ಸಿನಿಮಾ ನಂಬಿ ಬದುಕುತ್ತಿದ್ದ ರಾಜಾನಂದ್‌ ಕುಟುಂಬ ಪ್ರಸ್ತುತ ಆರ್ಥಿಕವಾಗಿ ಸಂಕಷ್ಟಕ್ಕೆ ಸಿಲುಕಿದೆ. ಆಸ್ಪತ್ರೆ ವೆಚ್ಚ ಈಗಾಗಲೇ 50 ಸಾವಿರ ತಲುಪಿದೆ. ಮನೆಯಲ್ಲಿನ ಒಡವೆಗಳನ್ನು ಗಿರವಿಯಿಟ್ಟಿರುವ ರಾಜಾನಂದ್‌ರ ಪತ್ನಿ ವಿಮಲಮ್ಮ ಮುಂದಿನ ದಾರಿ ತಿಳಿಯದೆ ಕಂಗಲಾಗಿದ್ದಾರೆ. ಚಿತ್ರಗಳಲ್ಲಿ ಪೋಷಕ ಪಾತ್ರಕ್ಕೆ ಜೀವ ತುಂಬುತ್ತಿದ್ದ ರಾಜಾನಂದ್‌ರಿಗೆ ನೆ-ರ-ವು ನೀಡುವಂತೆ, ದಾನಿಗಳಲ್ಲಿ ಅವರ ಪತ್ನಿ ವಿಮಲಮ್ಮ -ಕೋ-ರಿ-ದ್ದಾ-ರೆ.(ಇ-ನ್ಫೋ ವಾರ್ತೆ)

English summary
Non-Kannada films only after secen weeks : Six prints only, says a government appointed subcommittee
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada