ಅಮ್ಮಂದಿರ ಪಟ್ಟಿಗೆ ‘ಪ್ರೀತ್ಸೆ’ ಬೆಡಗಿ ಸೊನಾಲಿ!
- ಸಿನಿಲೋಕದ ಅಮ್ಮಂದಿರ ಪಟ್ಟಿಗೆ ಹೊಸ ಸೇರ್ಪಡೆ ಸೊನಾಲಿ ಬೇಂದ್ರೆ. ‘ಪ್ರೀತ್ಸೆ ’ ಚಿತ್ರದ ಬಳುಕುವ ಬೆಡಗಿ ಈಗ ಗಂಡು ಮಗುವಿಗೆ ಜನ್ಮ ನೀಡಿದ್ದಾಳೆ. ವಿಷಯ ಕೇಳಿ ಸೊನಾಲಿ ಅಭಿಮಾನಿಗಳು ಮೂತಿ ಸೊಟ್ಟಗೆ ಮಾಡಿಕೊಂಡಿದ್ದಾರೆ!
- ಹೊಸ ಹೀರೋ ಅರ್ಜುನ್‌ರ ‘ ಮೆಂಟಲ್ ಮಂಜ’ ಎಂಬ ವಿಲಕ್ಷಣ ಶೀರ್ಷಿಕೆಯ ಚಿತ್ರ ಗೆದ್ದ ತಕ್ಷಣ ನಿರ್ದೇಶಕ ಸಾಯಿಸಾಗರ್ ಹೊಸ ಚಿತ್ರಗಳ ನಿರ್ಮಾಣಕ್ಕೆ ಮುಂದಾಗಿದ್ದಾರೆ. ‘ದಿಲ್ ಇದ್ರೆ ಡವ್ ಹೊಡಿ’ ಮತ್ತು ‘ತಿಮ್ಮ’ ಚಿತ್ರವನ್ನು ನಿರ್ಮಿಸುವುದಾಗಿ ಘೋಷಿಸಿದ್ದಾರೆ. ಸಹೋದರರ ಜೋಡಿಯನ್ನು ಕಂಡು ಸ್ಯಾಂಡಲ್‌ವುಡ್ ಮೂಗಿನ ಮೇಲೆ ಬೆರಳಿಟ್ಟಿದೆ.
- ವಿಶ್ವದ ಕಿರಿಯ ನಿರ್ದೇಶಕ ಎಂಬ ಹೆಗ್ಗಳಿಕೆಗೆ ಪಾತ್ರವಾಗಲಿರುವ ಒಂಬತ್ತು ವರ್ಷದ ಕಿಶನ್ ಹಿಂದೆ ಘೋಷಿಸಿದಂತೆ ಮಕ್ಕಳ ಚಿತ್ರವನ್ನು ಆರಂಭಿಸಿದ್ದಾರೆ. ಪುಟಾಣಿಗಳಿಗಾಗಿ ಪುಟಾಣಿಯಾಬ್ಬ ನಿರ್ದೇಶಿಸುತ್ತಿರುವ ‘ಕೇರಾಫ್ ಫುಟ್‌ಪಾತ್’ ಚಿತ್ರಕ್ಕಾಗಿ ಧ್ವನಿಮುದ್ರಣ ಕಾರ್ಯ ಬಿರುಸಿನಿಂದ ನಡೆಯುತ್ತಿದೆ.
- ತಮ್ಮ ಮುದ್ದಿನ ನಾಯಿ ಸತ್ತಿದ್ದರೂ ಗಾಯಕ ಸಿ.ಆಶ್ವತ್ಥ್ ತಮ್ಮ ಕರ್ತವ್ಯಕ್ಕೆ ದ್ರೋಹವೆಸಗಿಲ್ಲ. ವಿಷಾದದ ನಡುವೆಯೇ ಕ್ರಿಯಾಶೀಲತೆಯನ್ನು ಮೆರೆದಿದ್ದಾರಂತೆ. ಅಂದಹಾಗೆ, ಅಶ್ವತ್ಥ್ ರಾಗ ಸಂಯೋಜನೆಯ ಹೊಸ ಭಾವಗೀತೆ ಕೆಸೆಟ್ ‘ಭಾವವೀಣೆ’ ಆಗಸ್ಟ್ 28ರಂದು ಬಿಡುಗಡೆಯಾಗಲಿದೆ.
Post your views
ಮುಖಪುಟ / ಸ್ಯಾಂಡಲ್‌ವುಡ್


Click it and Unblock the Notifications