»   » ಪುನೀತ್‌ ‘ಗಾಂಧಿ’ಯಾದ! ಬ್ರಾಹ್ಮಣ ‘ರವಿಶಾಸ್ತ್ರಿ’ಯಾದ!

ಪುನೀತ್‌ ‘ಗಾಂಧಿ’ಯಾದ! ಬ್ರಾಹ್ಮಣ ‘ರವಿಶಾಸ್ತ್ರಿ’ಯಾದ!

Posted By:
Subscribe to Filmibeat Kannada
  • ಮನೆಯವರೇ ನಿರ್ಮಾಣ ಮಾಡುತ್ತಿರುವ ‘ಅರಸು’ ಚಿತ್ರದ ಚಿತ್ರೀಕರಣಕ್ಕಾಗಿ ಆಸ್ಟ್ರೇಲಿಯಾಕ್ಕೆ ಪುನೀತ್‌ ತೆರಳಿದ್ದಾರೆ. ಚಿತ್ರದ ನಿರ್ದೇಶಕ ಮಹೇಶ್‌ ಬಾಬು. ಪುನೀತ್‌ಗೆ ರಮ್ಯಾ ಮತ್ತೆ ಜೋಡಿಯಾಗಿದ್ದಾಳೆ. ಈ ಮಧ್ಯೆ ಪುನೀತ್‌ ಅಭಿನಯದ ಹೊಸ ಚಿತ್ರ ‘ಗಾಂಧಿ’ ಸೆಟ್ಟೇರಲಿದೆ.
  • ‘ಗಂಡುಗಲಿ ಕುಮಾರರಾಮ’ ನೋಡಿದವರು ಚಿತ್ರ ಚೆನ್ನಾಗಿಲ್ಲ ಎನ್ನುತ್ತಿಲ್ಲ. ಆದರೂ ಪ್ರೇಕ್ಷಕರೂ ಚಿತ್ರಮಂದಿರಕ್ಕೆ ಬರುತ್ತಿಲ್ಲ. ಕಾರಣ ಮಾತ್ರ ಗೊತ್ತಾಗುತ್ತಿಲ್ಲ ಎಂದು 8-10ಕೋಟಿ ಹಣ ಸುರಿದು ಚಿತ್ರ ನಿರ್ಮಾಣ ಮಾಡಿದ ಪಟ್ಟಾಭಿರಾಮ್‌ ಚಿಂತೆ ಮಾಡುತ್ತಿದ್ದಾರೆ. ಈ ಚಿತ್ರ ಗೆದ್ದಿದ್ದರೆ ಇನ್ನಷ್ಟು ಚಾರಿತ್ರಿಕ ಚಿತ್ರಗಳು ಕನ್ನಡದಲ್ಲಿ ಬರುತ್ತಿದ್ದವು.. ಎಲ್ಲಕ್ಕೂ ಈಗ ಪೂರ್ಣ ವಿರಾಮ!
  • ಕಡೆಗೂ ರವಿಚಂದ್ರನ್‌ ಅಭಿನಯದ ‘ಬ್ರಾಹ್ಮಣ’ ಚಿತ್ರದ ಟೈಟಲ್‌ ಬದಲಾಗಿದೆ. ‘ರವಿಶಾಸ್ತ್ರಿ ’ ಹೆಸರಿನಲ್ಲಿ ಚಿತ್ರೀಕರಣ ಸಾಗಿದೆ. 25ದಿನಗಳಲ್ಲಿ ಚಿತ್ರ ಮುಗಿಸುವ ವಿಶ್ವಾಸ ರವಿಚಂದ್ರನ್‌ಗಿದೆ. ತಮಿಳು ಮತ್ತು ತೆಲುಗಿನ ಬೆಡಗಿ ಸ್ನೇಹಾ, ಸ್ಯಾಂಡಲ್‌ವುಡ್‌ಗೆ ಕಾಲಿಟ್ಟಿದ್ದಾರೆ. ಸಂದೇಶ್‌ ನಾಗರಾಜ್‌ ಚಿತ್ರದ ನಿರ್ಮಾಪಕರು.
  • ‘ಹನಿಮೂನ್‌ ಎಕ್ಸ್‌ಪ್ರೆಸ್‌’ ತೆರೆಮೇಲೆ 50ದಿನ ಪೂರೈಸಿದ ಬೆನ್ನಲ್ಲಿಯೇ ‘ತೆನಾಲಿ ರಾಮ’ ಚಿತ್ರವನ್ನು ನಿರ್ಮಾಪಕ ಎಸ್‌.ವಿ.ಬಾಬು ಆರಂಭಿಸಿದ್ದಾರೆ. ರಮೇಶ್‌ ಮತ್ತು ಜಗ್ಗೇಶ್‌ ಜೋಡಿಯ ಈ ಚಿತ್ರದ ನಿರ್ದೇಶಕರು ನಾಗೇಂದ್ರ ಮಾಗಡಿ.
  • ಉಮಾಶ್ರೀ ಕಿರುತೆರೆಗೆ ಬಂದಿದ್ದಾರೆ. ಅವರ ಅಭಿನಯದ ‘ಕಿಚ್ಚು’ ಧಾರಾವಾಹಿ ಈ ಟೀವಿಯಲ್ಲಿ ಪ್ರತಿ ಸಂಜೆ 7.30ರಿಂದ 8ರವರೆಗೆ ಪ್ರಸಾರವಾಗುತ್ತಿದೆ.
  • ಸುಂಟರಗಾಳಿ ಹುಡುಗಿ ರಕ್ಷಿತಾ, ಪ್ರೇಮ್‌ ಜೊತೆ ಮದುವೆ ಫಿಕ್ಸ್‌ ಆದ ತಕ್ಷಣ ಮೆದುವಾಗಿದ್ದಾರೆ. ‘ತಾಯಿಯ ಮಡಿಲು’, ‘ಒಡಹುಟ್ಟಿದವಳು’ - -ಇವು ರಕ್ಷಿತಾ ಅಭಿನಯದ ಹೊಸ ಚಿತ್ರಗಳು!
Post your views

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada